ಸಿಎಂ ಬಸವರಾಜ ಬೊಮ್ಮಾಯಿ ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡ್ತೇನೆ – ಶಾಸಕ M.P.ರೇಣುಕಾಚಾರ್ಯ

ಸಿಎಂ ಬಸವರಾಜ ಬೊಮ್ಮಾಯಿ ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡ್ತೇನೆ - ಶಾಸಕ M.P.ರೇಣುಕಾಚಾರ್ಯ
ಎಂಪಿ.ರೇಣುಕಾಚಾರ್ಯ

ಸಿಎಂ ಬೊಮ್ಮಾಯಿ‌ ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಚುನಾವಣೆಗೆ 1 ವರ್ಷ ಬಾಕಿ ಇದೆ. ಸಿಎಂ ಬೊಮ್ಮಾಯಿ ಅವರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನೋದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ಅವರು ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದಿದ್ದಾರೆ.

TV9kannada Web Team

| Edited By: Ayesha Banu

Mar 20, 2022 | 5:49 PM


ದಾವಣಗೆರೆ: ಚುನಾವಣೆ ಸ್ಪರ್ಧೆ ಕುರಿತು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಎಲ್ಲಿಂದ ಸ್ಪರ್ಧಿಸಬೇಕೆಂದು ವರಿಷ್ಠರು ನಿರ್ಧಾರ ಮಾಡುತ್ತಾರೆ. ಬೊಮ್ಮಾಯಿ ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡ್ತೇನೆ ಎಂದು ದಾವಣಗೆರೆಯಲ್ಲಿ ಶಾಸಕ M.P.ರೇಣುಕಾಚಾರ್ಯ(MP Renukacharya) ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ‌ ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಚುನಾವಣೆಗೆ 1 ವರ್ಷ ಬಾಕಿ ಇದೆ. ಸಿಎಂ ಬೊಮ್ಮಾಯಿ ಅವರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನೋದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ಅವರು ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದಿದ್ದಾರೆ. ಇನ್ನು ಸಚಿವ ಸಂಪುಟ ವಿಸ್ತರಣೆಗೆ ಸಂಬಂಧ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಭವಿಷ್ಯದ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಯಾರಿಗೆ ಸಂಪುಟದಲ್ಲಿ ಸೇರಿಸಿಕೊಳ್ಳುವುದು, ಬಿಡುವುದು ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ. ನಾನು ಹೇಳುವ ರೀತಿ ಸಂಪುಟ ಪುನಾರಚನೆ ಆಗಲ್ಲ. ಸಚಿವನಾಗುವ ಯಾವುದೇ ವ್ಯಕ್ತಿಗೆ ಸಾಕಷ್ಟು ಕಾಲಾವಕಾಶ ಬೇಕು. ಗ್ರಾ.ಪಂ ಅಧ್ಯಕ್ಷರ ರೀತಿ ಪದೇಪದೆ 3-6 ತಿಂಗಳಿಗೆ ಬದಲಾಯಿಸಬಾರದು. ವರ್ಷಕ್ಕೊಮ್ಮೆ ಸಚಿವರು ಬದಲಾದ್ರೆ ಕೆಲಸ ಮಾಡೋದು ಕಷ್ಟವಾಗುತ್ತದೆ. ಹೀಗೆ ಮಾಡಿದ್ರೆ ಸಚಿವರ ಅಧಿಕಾರ ವಿಧಾನಸಭೆ 3 ಮಹಡಿಗೆ ಸೀಮಿತವಾಗಿರುತ್ತದೆ. ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಆದ್ರೆ ಒಳ್ಳೆದು ಎಂದರು.

ಹಿಂದೂ ಯುವಕರ ಕೊಲೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನುಕ್ರಮಕ್ಕೆ ಸಿಎಂ ಜತೆ ಮಾತನಾಡಿದ್ದೇನೆ. ಇಎಫ್‌ಐ, ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಹಿಂದೂ ಹರ್ಷನ ಕೊಲೆ ಆರೋಪಿಗಳಿಗೆ ಎನ್ಕೌಂಟರ್ ಮಾಡಬೇಕು. ಆಗಲೇ ಅವನ ಆತ್ಮಕ್ಕೆ ಶಾಂತಿ ಎಂದು ಕೊಲೆಯಾದ ಹರ್ಷನ‌ ತಾಯಿ ಹೇಳಿದ್ದಾರೆ. ಹಿಂದೂ ಯುವಕರನ್ನು ಟಾರ್ಗೆಟ್ ಮಾಡಿವರನ್ನು ಎನ್ಕೌಂಟರ್ ಮಾಡಬೇಕು. ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡಲು ಗೃಹ ಸಚಿವರಿಗೆ ಒತ್ತಾಯಿಸುತ್ತೇನೆ ಎಂದು ಶಾಸಕ M.P.ರೇಣುಕಾಚಾರ್ಯ ಹೇಳಿದ್ರು. ಮತ್ತೊಂದು ಕಡೆ ಹಿಜಾಬ್ ತೀರ್ಪು‌ ನೀಡಿದ ಹೈಕೋರ್ಟ್ ನ್ಯಾಯಾಧೀಶರಿಗೆ ಪ್ರಾಣ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಧೀಶರಿಗೆ ಪ್ರಾಣ ಬೆದರಿಕೆ ಒಡ್ಡುತ್ತಾರೆ ಅಂದ್ರೆ ಸಾಮಾನ್ಯರ ಗತಿಯೇನು. ಇದು ಪಾಕಿಸ್ತಾನ್ ಅಂದ್ಕೊಂಡಿದ್ದಾರೆ, ಹುಶಾರ್ ಇದೆಲ್ಲೇ ಇಲ್ಲಿ ನಡೆಯಲ್ಲ. ಇದು ಭಾರತ ದೇಶ ಇಲ್ಲಿ‌ ಎಲ್ಲರೂ ಕಾನೂನನ್ನು ಗೌರವಿಸಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಬೆದರಿಕೆ ಹಾಕಿದವರನ್ನು‌ ಮಟ್ಟ ಹಾಕ್ತೀವಿ. ಯುಪಿ ಮಾದರಿಯಲ್ಲಿ ರಾಜ್ಯದಲ್ಲಿ ಸಿಎಂ ಕಠಿಣ ಕಾನೂನು ಜಾರಿಗೊಳಿಸುತ್ತಾರೆ. ಈಗಾಗಲೇ ಮಾಜಿ‌ ಸಿಎಂ ಬಿಎಸ್‌ವೈ ವಿವಿಧ ಕಾನೂನು ಜಾರಿಗೆ ತಂದಿದ್ರು. ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದುದ್ರೆ ಕಾಶ್ಮೀರ ಎಲ್ಲವನ್ನೂ ಬಿಟ್ಟು ಕೊಡುತ್ತಿದ್ದರು. ಪ್ರಧಾನಿ ಮೋದಿ ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: Video: ಛತ್ರಪತಿ ಶಿವಾಜಿ ಪ್ರತಿಮೆ ವಿಚಾರವಾಗಿ ಸಂಘರ್ಷ; ತೆಲಂಗಾಣದ ಗಡಿ ಪಟ್ಟಣವೊಂದರಲ್ಲಿ ಸೆಕ್ಷನ್​ 144 ಜಾರಿ

ರಷ್ಯಾ- ಉಕ್ರೇನ್ ಯುದ್ಧ 25ನೇ ದಿನಕ್ಕೆ: 400 ಮಂದಿ ಆಶ್ರಯ ಪಡೆದ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ


Follow us on

Related Stories

Most Read Stories

Click on your DTH Provider to Add TV9 Kannada