ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನೀಡಲಾಗುವ ನಿವೇಶನಗಳಲ್ಲಿ ಶೇ. 5ರಷ್ಟು ಪತ್ರಕರ್ತರಿಗೆ ಮೀಸಲು; ಸಚಿವ ಭೈರತಿ ಬಸವರಾಜ್
ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗುವ ನಿವೇಶನಗಳಲ್ಲಿ ಶೇಕಡಾ 5ರಷ್ಟು ಪತ್ರಕರ್ತರಿಗೆ ಮೀಸಲು ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ. ಇದೇ ವೇಳೆ ಅವರು ದಾವಣಗೆರೆ ಜಿಲ್ಲೆಯ ಟಿವಿ9 ಕ್ಯಾಮೆರಾಮ್ಯಾನ್ ಜಿ.ಎನ್.ರಾಮಪ್ಪ ಅವರಿಗೆ ಮಾಧ್ಯಮ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ದಾವಣಗೆರೆ: ಜಿಲ್ಲೆಯ ಟಿವಿ9 ಕ್ಯಾಮರಾಮ್ಯಾನ್ ಜಿ.ಎನ್.ರಾಮಪ್ಪ ಅವರಿಗೆ ಮಾಧ್ಯಮ ಪ್ರಶಸ್ತಿ ಲಭಿಸಿದೆ. ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ನೀಡಲಾಗುವ ಮಾಧ್ಯಮ ಪ್ರಶಸ್ತಿಗೆ ಅವರು ಆಯ್ಕೆಯಾಗಿದ್ದು, ಸಚಿವ ಭೈರತಿ ಬಸವರಾಜ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ.
ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನೀಡುವ ನಿವೇಶನದಲ್ಲಿ ಶೇ. 5ರಷ್ಟು ಪತ್ರಕರ್ತರಿಗೆ ಮೀಸಲು: ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗುವ ನಿವೇಶನಗಳಲ್ಲಿ ಶೇಕಡಾ 5ರಷ್ಟು ಪತ್ರಕರ್ತರಿಗೆ ಮೀಸಲು ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ. ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಮಾಧ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಈಗಾಗಲೇ ಸಚಿವ ಸಂಪುಟದಲ್ಲಿ ನಿರ್ಧಾರವಾಗಿದೆ ಎಂದು ಅವರು ನುಡಿದಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಈ ಆದೇಶ ಆಗಿದೆ. ಆದೇಶವಾದ ಬಳಿಕ ನಿವೇಶನ ಹಂಚಿಕೆ ಮಾಡಿದರೆ, ಅದರಲ್ಲಿ ಶೇ.5ರಷ್ಟನ್ನು ಪತ್ರಕರ್ತರಿಗೆ ನೀಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾಳೆ ಸಿಂದಗಿ, ಹಾನಗಲ್ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ: ಸಚಿವ ಭೈರತಿ ಬಸವರಾಜು: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬೈಎಲೆಕ್ಷನ್ ನಡೆಯಲಿದ್ದು, ನಾಳಿನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ದಾವಣಗೆರೆಯಲ್ಲಿ ಸಚಿವ ಭೈರತಿ ಬಸವರಾಜು ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದು, ಅವರಿಗೆ ಬೇರೆ ಕೆಲಸವಿಲ್ಲ. ರಾಜಕಾರಣಕ್ಕಾಗಿ ಟೀಕೆ ವಿರೋಧ ಸರಿಯಲ್ಲ ಎಂದು ನುಡಿದಿದ್ದಾರೆ. ‘‘ಕೊರೊನಾ ಸಮಯದಲ್ಲೂ ದೇಶದಲ್ಲಿ ಅಭಿವೃದ್ದಿ ಕಾರ್ಯ ನಡೆಸಲಾಗಿತ್ತು. ಪ್ರಸ್ತುತ ಉಚಿತ ರೇಷನ್ ವಿತರಣೆಯನ್ನು ದೀಪಾವಳಿವರೆಗೆ ವಿಸ್ತರಿಸಲಾಗಿದೆ. ಸಿದ್ದರಾಮಯ್ಯನವರು ಅಹಿಂದ ಆರಂಭಿಸಿದರೂ ಏನೂ ಆಗಲ್ಲ; ನಾವೂ ಅಹಿಂದದಲ್ಲಿದ್ದೇವೆ’’ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ದಕ್ಷಿಣ ಕನ್ನಡ: ವೆನ್ಲಾಕ್ ಆಸ್ಪತ್ರೆಯಲ್ಲಿ ಶಂಕಿತ ರೇಬಿಸ್ಗೆ ಪಿಯುಸಿ ವಿದ್ಯಾರ್ಥಿನಿ ಬಲಿ
ಬಿಜೆಪಿ ವಿರುದ್ಧ ಕನ್ಹಯ್ಯ ಕುಮಾರ್ ಹೇಳಿಕೆ: ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋಗಿದ್ದಾರೆ ಎಂದ ಸಿಟಿ ರವಿ
ಗೋಡೆ ಮೇಲೆ ಜೇಮ್ಸ್ ಬಾಂಡ್ 007 ಬರೆದು ಕಳ್ಳರು ಎಸ್ಕೇಪ್! ರಾಜಸ್ಥಾನದಲ್ಲಿ ನಾಲ್ವರ ಬಂಧಿಸಿದ ಮಾರ್ಕೆಟ್ ಪೊಲೀಸರು