ಬಿಜೆಪಿ ವಿರುದ್ಧ ಕನ್ಹಯ್ಯ ಕುಮಾರ್ ಹೇಳಿಕೆ: ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋಗಿದ್ದಾರೆ ಎಂದ ಸಿಟಿ ರವಿ

Kanhaiya Kumar statement: ಬಿಜೆಪಿ ವಿರುದ್ಧ ಕನ್ಹಯ್ಯ ಕುಮಾರ್ ನೀಡಿರುವ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋಗಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ.

ಬಿಜೆಪಿ ವಿರುದ್ಧ ಕನ್ಹಯ್ಯ ಕುಮಾರ್ ಹೇಳಿಕೆ: ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋಗಿದ್ದಾರೆ ಎಂದ ಸಿಟಿ ರವಿ
ಕನ್ಹಯ್ಯ ಕುಮಾರ್ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋಗಿದ್ದಾರೆ ಎಂದ ಸಿಟಿ ರವಿ


ಚಿಕ್ಕಮಗಳೂರು: ಬಿಜೆಪಿ ವಿರುದ್ಧ ಕನ್ಹಯ್ಯ ಕುಮಾರ್ ನೀಡಿರುವ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಇವರ ತಾತ-ಮುತ್ತಾತ ಹೀಗೆ ಹೇಳಿ ಕಳೆದು ಹೋಗಿದ್ದಾರೆ. ಅವರ ಸಮಾಧಿ ಮಣ್ಣಿನ ಮೇಲೆ ಸಂಘ, ಬಿಜೆಪಿ ಬಲವಾಗಿದೆ. ಕನ್ಹಯ್ಯ ಕುಮಾರ್ ತುಕ್ಡೆ ಗ್ಯಾಂಗಿನ ನಾಯಕ ಎಂದು ವ್ಯಾಖ್ಯಾನಿಸಿದ್ದಾರೆ.

ಹಿಟ್ಟು ಹಳಸಿತ್ತು, ಡ್ಯಾಶ್ ಕಾದಿತ್ತು ಅನ್ನೋ ಗಾದೆ ಮಾತಿದೆ. ಗಾದೆ ಮಾತಿನ ಪರಿಸ್ಥಿತಿ ಕಾಂಗ್ರೆಸ್​ನದ್ದಾಗಿದೆ ಎಂದು ಸಿ.ಟಿ.ರವಿ ಇದೇ ವೇಳೆ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್​ನಲ್ಲಿರೋದು ವಂಶ ಪಾರಂಪರ್ಯ ಮತ್ತು ಪರಿವಾರವಾದ. ಪರಿವಾರವಾದ ಬಂದರೆ ಅಲ್ಲಿ ಮಾಲೀಕತ್ವ ಬರುತ್ತೆ. ಅಲ್ಲಿ ಮಾಲೀಕರು, ನೌಕರರು, ಗುಲಾಮರು ಇರುತ್ತಾರೆ. ತುಕ್ಡೆ ಗ್ಯಾಂಗ್​ನವರಿಗೆ ಗತಿ ಇರ್ಲಿಲ್ಲ, ಎಲೆಕ್ಷನ್​ನಲ್ಲಿ ಸೋತ್ರು. ಕನ್ಹಯ್ಯ ಕುಮಾರ್​ನಂತವರು ಬಹಳ ಮಾತನಾಡಿದ್ದಾರೆ. ಬಹಳ ಮಾತನಾಡಿ ಮಣ್ಣಾಗಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.

ಮತಾಂತರ ಎಂಬುದು ದೇಶಾಂತರಕ್ಕೆ ಸಮ ಎಂದಿದ್ದರು ಗಾಂಧೀಜಿ:
ಮತಾಂತರ ಎಂಬುದು ದೇಶಾಂತರಕ್ಕೆ ಸಮ ಎಂದು ಗಾಂಧೀಜಿ ಹೇಳಿದ್ದರು. ಮತಾಂತರಿಯಾದವ ತನ್ನ ಸಂಸ್ಕೃತಿಯನ್ನ ಬದಲಿಸ್ತಾನೆ. ಮುಂದೆ… ದೇಶಾಂತರದ ಬಗ್ಗೆ ಯೋಚಿಸ್ತಾನೆ ಎಂದಿದ್ದರು. ಗಾಂಧಿಯೇ ಹೇಳಿದ್ರು ಅಂದ್ರೆ ಅಪಾಯ ಗ್ರಹಿಸಿದ್ದರು ಎಂದರ್ಥ. ಹಣ, ಹೆಣ್ಣಿನ ಪ್ರಲೋಭನೆ, ಅಸಹಾಯಕತೆ ಬಳಸಿ ಮತಾಂತರ ನಡೆಯುತ್ತದೆ. ಮತಾಂತರದ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಂಡರೆ ಸ್ವಾಗತ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಇದನ್ನೂ ಓದಿ:
ಕಾಂಗ್ರೆಸ್ ಪಕ್ಷದ ಈಗಿನ ಘೋಷವಾಕ್ಯ ‘ಭಾರತ್ ತೇರೇ ಟುಕ್ಡೇ ಹೋಂಗೆ’; ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಗೆ ಬಿಜೆಪಿ ಪೋಸ್ಟರ್

ಇದನ್ನೂ ಓದಿ:
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಪಕ್ಷದ ಆಶಾಕಿರಣವಾಗಿದ್ದಾರೆ ಅಂತ ರಾಜಕೀಯ ವಿಶ್ಲೇಷಕರು ಹೇಳುತ್ತಿರುವುದರಲ್ಲಿ ಹುರುಳಿದೆಯೇ?

EX CM Siddaramaiah Pressmeet | ಮಾಜಿ ಸಿಎಂ ಸಿದ್ದರಾಮಯ್ಯ​ ಸುದ್ದಿಗೋಷ್ಠಿ | TV9 Kannada

Read Full Article

Click on your DTH Provider to Add TV9 Kannada