ಕಾಂಗ್ರೆಸ್ ಪಕ್ಷದ ಈಗಿನ ಘೋಷವಾಕ್ಯ ‘ಭಾರತ್ ತೇರೇ ಟುಕ್ಡೇ ಹೋಂಗೆ’; ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಗೆ ಬಿಜೆಪಿ ಪೋಸ್ಟರ್
Kanhaiya Kumar: ಕನ್ಹಯ್ಯ ಕುಮಾರ್ ಅಥವಾ ಬೇರೆ ಯಾರೇ ಆಗಿರಲಿ ಭಾರತ ವಿರೋಧಿ ಸಿದ್ಧಾಂತ ಹೊಂದಿರುವ ಯಾವುದೇ ವ್ಯಕ್ತಿಯ ಸಹಜ ಮೊದಲ ಆಯ್ಕೆ ಕಾಂಗ್ರೆಸ್. ಕಾರಣ ಸರಳವಾಗಿದೆ ಇಂದು, ಕಾಂಗ್ರೆಸ್ ಪಕ್ಷ, ಅದರ ನಾಯಕತ್ವ ಮತ್ತು ಸಿದ್ಧಾಂತಗಳು ಭಾರತ ವಿರೋಧಿ ರಾಜಕಾರಣದ ಸಮಾನಾರ್ಥಕ ಪದಗಳಾಗಿವೆ.
ದೆಹಲಿ: ಜೆಎನ್ಯು ಮಾಜಿ ವಿದ್ಯಾರ್ಥಿ ಮತ್ತು ಸಿಪಿಐ ನಾಯಕ ಕನ್ಹಯ್ಯ ಕುಮಾರ್(Kanhaiya Kumar) ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಇದು ಸ್ಪಷ್ಟ ಆಯ್ಕೆಯಾಗಿದೆ ಎಂದು ಹೇಳಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಂಗಳವಾರ, ‘ಭಾರತ ವಿರೋಧಿ’ ಕಾಂಗ್ರೆಸ್ ಕನ್ಹಯ್ಯ ಕುಮಾರ್ ಅವರಂತಹ ಸಿದ್ಧಾಂತಕ್ಕೆ ಹೊಂದಿಕೆಯಾಗುವ ಜನರಿಗೆ ಕಾಂಗ್ರೆಸ್ ಸ್ಪಷ್ಟವಾದ ಆಯ್ಕೆಯಾಗಿದೆ ಎಂದಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯಿಸಿದ ಭಾಟಿಯಾ, “ಕನ್ಹಯ್ಯ ಕುಮಾರ್ ಅಥವಾ ಬೇರೆ ಯಾರೇ ಆಗಿರಲಿ ಭಾರತ ವಿರೋಧಿ ಸಿದ್ಧಾಂತ ಹೊಂದಿರುವ ಯಾವುದೇ ವ್ಯಕ್ತಿಯ ಸಹಜ ಮೊದಲ ಆಯ್ಕೆ ಕಾಂಗ್ರೆಸ್. ಕಾರಣ ಸರಳವಾಗಿದೆ ಇಂದು, ಕಾಂಗ್ರೆಸ್ ಪಕ್ಷ, ಅದರ ನಾಯಕತ್ವ ಮತ್ತು ಸಿದ್ಧಾಂತಗಳು ಭಾರತ ವಿರೋಧಿ ರಾಜಕಾರಣದ ಸಮಾನಾರ್ಥಕ ಪದಗಳಾಗಿವೆ. ಹೀಗಾಗಿ ‘ಭಾರತ್ ತೇರೆ ಟುಕ್ಡೇ ಹೋಂಗೆ’ ಘೋಷಣೆ ಕೂಗುತ್ತಿರುವವರಿಗೆ ಬೆಂಬಲ ನೀಡುವಂತಹ ನಾಯಕರನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಮತ್ತು ಅಫ್ಜಲ್ ಗುರುವಿನಂತಹ ಭಯೋತ್ಪಾದಕರನ್ನು ಬೆಂಬಲಿಸುವವರಿಗೆ ಬೆಂಬಲವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.
Looks like the ‘Grand Old Party’ is negotiating for a second hand Air Conditioner!
But, will it work now? ? pic.twitter.com/nBuw8bZ6Jv
— BJYM (@BJYM) September 28, 2021
ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಭಾರತೀಯ ಸೇನೆಯ ಯೋಧರ ಬಗ್ಗೆ ಕನ್ಹಯ್ಯ ಕುಮಾರ್ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಕೆದಕಿದ ಭಾಟಿಯಾ ಇದು ಭಾರತೀಯರ ಭಾವನೆಗಳನ್ನು ಘಾಸಿಗೊಳಿಸುತ್ತದೆ. ದೇಶದ ಸಮಗ್ರತೆ ಮತ್ತು ಏಕತೆಗಾಗಿ ಅವರು ಮಾಡುವ ಅತ್ಯುನ್ನತ ತ್ಯಾಗಕ್ಕಾಗಿ ಪ್ರತಿಯೊಬ್ಬ ಭಾರತೀಯರು ಸೇನೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ಒಬ್ಬ ನಾಯಕನು ಇಂತಹ ಅವಹೇಳನಕಾರಿ ಹೇಳಿಕೆಯನ್ನು ಮಾಡಿದಾಗ, ಅವನು ಆಶ್ರಯ ಪಡೆಯುವ ಒಂದೇ ಒಂದು ಸ್ಥಳವಿದೆ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಯುವ ಘಟಕದ ಕಾರ್ಯದರ್ಶಿ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಭಾರತವನ್ನು ಒಡೆಯುವ ಬಗ್ಗೆ ಮೊದಲು ಮಾತನಾಡಿದ್ದವರು ಕನಯ್ಯ ಕುಮಾರ್. ಭಾರತ್ ತೇರೆ ಟುಕ್ಡೆ ಹೋಂಗೆ ಮತ್ತು ಅಫ್ಜಲ್ ತೇರೆ ಅರ್ಮಾನೋ ಕೊ ಮಂಜಿಲ್ ತಕ್ ಪೊಹಂಚಾಯೇಂಗೇ ಎಂಬ ಘೋಷಣೆ ಕೂಗಿದ್ದು ಕನ್ಹಯ್ಯ. ಅವರು ಭಾರತೀಯ ಸೇನೆಯಲ್ಲಿ ಯೋಧರು ಅತ್ಯಾಚಾರ ಮಾಡುತ್ತಾರೆ ಎಂದು ಆರೋಪಿಸಿದ್ದರು. ಇಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಪಕ್ಷದಲ್ಲಿ ಸ್ವಾಗತಿಸಲು ಹೂಮಾಲೆಯೊಂದಿಗೆ ನಿಂತಿದ್ದಾರೆ ಎಂದಿದ್ದಾರೆ ಬಗ್ಗಾ.
on Kanhaiya Kumar Joining pic.twitter.com/STE3bKitPN
— Tajinder Pal Singh Bagga (@TajinderBagga) September 28, 2021
ಕನ್ಹಯ್ಯ ಕುಮಾರ್ ಮಂಗಳವಾರ ಔಪಚಾರಿಕವಾಗಿ ಕಾಂಗ್ರೆಸ್ ಸೇರಿದ ನಂತರ ದೇಶದ “ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಜಾಪ್ರಭುತ್ವ” ಪಕ್ಷಕ್ಕೆ ಸೇರಿದ್ದೇನೆ. ಕಾಂಗ್ರೆಸ್ ಅನ್ನು ಉಳಿಸದೆ ರಾಷ್ಟ್ರವು ಉಳಿಯುವುದಿಲ್ಲ ಎಂದು ನನ್ನಂತೆಯೇ ಹಲವು ಯುವಕರಿಗೆ ಅನಿಸಿದೆ ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷವು ಒಂದು ದೊಡ್ಡ ಹಡಗಿನಂತಿದೆ, ಅದನ್ನು ಉಳಿಸಿದರೆ, ನಾನು ಅನೇಕ ಜನರ ಆಕಾಂಕ್ಷೆಗಳು, ಮಹಾತ್ಮ ಗಾಂಧಿಯವರ ಏಕತೆ, ಭಗತ್ ಸಿಂಗ್ ಅವರ ಧೈರ್ಯ ಮತ್ತು ಬಿಆರ್ ಅಂಬೇಡ್ಕರ್ ಅವರ ಸಮಾನತೆಯ ಕಲ್ಪನೆಯನ್ನು ಸಹ ರಕ್ಷಿಸಲಾಗುವುದು. ಅದಕ್ಕಾಗಿಯೇ ನಾನು ಪಕ್ಷಕ್ಕೆ ಸೇರಿಕೊಂಡಿದ್ದೇನೆ” ಎಂದು ಕನ್ಹಯ್ಯ ಕುಮಾರ್ ಹೇಳಿದರು .
ಇದನ್ನೂ ಓದಿ: ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್, ದಲಿತ ನಾಯಕ ಜಿಗ್ನೇಶ್ ಮೆವಾನಿ ಕಾಂಗ್ರೆಸ್ ಸೇರ್ಪಡೆ
Published On - 1:51 pm, Wed, 29 September 21