ದಾವಣಗೆರೆ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿ ಸುದ್ದಿಯಲ್ಲಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ(MLA Renukacharya), ಕೊಟ್ಟ ಮಾತಿನಂತೆ ನಡೆದುಕೊಂಡು ಜನರ ಮೆಚ್ಚುಗೆ ಗಳಿಸಿದ್ದಾರೆ. ಒಂದೇ ದಿನದಲ್ಲಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ ಕೊಟ್ಟ ಮಾತಿನಂತೆ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ನಡೆದುಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಈ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕ ರೇಣುಕಾಚಾರ್ಯ, ಈ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಿ ಕೊಡುವ ಭರವಸೆ ನೀಡಿದ್ದರು. ಸದ್ಯ ಕೊಟ್ಟಮಾತಿನಂತೆ ಇಂದು ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಬೈರನಹಳ್ಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಖುದ್ದು ಬಸ್ ಚಾಲನೆ ಮಾಡಿ, ಮೊದಲ ಟಿಕೆಟ್ ಖರೀದಿಸಿದ್ರು. ಗ್ರಾಮಕ್ಕೆ ಬಸ್ ಬರುತ್ತಿದ್ದಂತೆ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ರಷ್ಯಾ ಅಧ್ಯಕ್ಷ ಪುಟಿನ್ ಮಗಳ ಡೇಟಿಂಗ್?
ಬೈರನಹಳ್ಳಿ ಗ್ರಾಮದ ವಿದ್ಯಾರ್ಥಿಗಳ ಶಾಲೆ, ಕಾಲೇಜಿಗೆ ತೆರಳಲು ಬಸ್ ಸೌಲಭ್ಯವಿಲ್ಲದೆ ಸಾಕಷ್ಟು ತೊಂದರೆಯಾಗುತ್ತಿದ್ದು ಈ ಭಾಗಕ್ಕೆ ಬಸ್ಸು ನೀಡುವಂತೆ ಮನವಿ ಮಾಡಿದ್ದರು. ಈ ಭಾಗಕ್ಕೆ ಬಸ್ಸು ಬಿಡಿಸುಹುದಾಗಿ ಮಾತು ಕೊಟ್ಟಿದು ಅದ್ರಂತೆ ಇಂದು ಗ್ರಾಮಕ್ಕೆ ಬಸ್ಸು ಬಂದಿದ್ದು, ಬಸ್ಸು ಓಡಿಸುವ ಮೂಲಕ ಚಾಲನೆ ನೀಡಿದೆನು. pic.twitter.com/EL0RvNafi8
— M P Renukacharya (@MPRBJP) May 22, 2022
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಗ್ರಾಮಸ್ಥರು ಸೇರಿ ರೇಣುಕಾಚಾರ್ಯ ಅವರಿಗೆ ಹಾರ, ಶಾಲು ಹಾಕಿ ಸನ್ಮಾನಿಸಿದರು. ರೇಣುಕಾಚಾರ್ಯ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬೈರನಹಳ್ಳಿ ಗ್ರಾಮದ ವಿದ್ಯಾರ್ಥಿಗಳ ಶಾಲೆ, ಕಾಲೇಜಿಗೆ ತೆರಳಲು ಬಸ್ ಸೌಲಭ್ಯವಿಲ್ಲದೆ ಸಾಕಷ್ಟು ತೊಂದರೆಯಾಗುತ್ತಿದ್ದು ಈ ಭಾಗಕ್ಕೆ ಬಸ್ಸು ನೀಡುವಂತೆ ಮನವಿ ಮಾಡಿದ್ದರು. ಈ ಭಾಗಕ್ಕೆ ಬಸ್ಸು ಬಿಡಿಸುಹುದಾಗಿ ಮಾತು ಕೊಟ್ಟಿದು ಅದ್ರಂತೆ ಇಂದು ಗ್ರಾಮಕ್ಕೆ ಬಸ್ಸು ಬಂದಿದ್ದು, ಬಸ್ಸು ಓಡಿಸುವ ಮೂಲಕ ಚಾಲನೆ ನೀಡಿದೆನು ಬರೆದುಕೊಂಡಿದ್ದಾರೆ.
Published On - 6:32 pm, Sun, 22 May 22