ದಾವಣಗೆರೆ: ಬೆಲೆ ಏರಿಕೆಯಾದ ತಕ್ಷಣ ವೈಭವೀಕರಣ ಮಾಡುವುದು ಬಿಡಿ; ಅಡುಗೆ ಎಣ್ಣೆ ದರದ ಬಗ್ಗೆ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ
ಅಡುಗೆ ಎಣ್ಣೆಯ ಬೆಲೆ ಏರಿಕೆಯಾದ ತಕ್ಷಣ ವೈಭವೀಕರಣ ಮಾಡುವುದು ಬಿಡಬೇಕು. ಕೆಲಕಾಲದ ನಂತರ ಬೆಲೆ ಇಳಿಕೆಯಾಗುತ್ತದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಮಾತು ಚರ್ಚೆ ಹುಟ್ಟುಹಾಕಿದೆ.
ದಾವಣಗೆರೆ: ಅಡುಗೆ ಎಣ್ಣೆ ದರದ ಬಗ್ಗೆ ಸಂಸದ ಜಿಎಂ ಸಿದ್ದೇಶ್ವರ್ ಮಾತನಾಡಿದ್ದು, ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಅಡುಗೆ ಎಣ್ಣೆಯ ಬೆಲೆ ಏರಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನನಗೂ ಗೊತ್ತಿದೆ. ನಮ್ಮನೆಯಲ್ಲಿ ಸಹ ಅಡಿಗೆ ಮಾಡುತ್ತೇವೆ. ಕಾದು ನೋಡಿ. ಇಷ್ಟರಲ್ಲಿಯೇ ಅಡಿಗೆ ಎಣ್ಣೆ ಬೆಲೆ ಸಹ ಕಡಿಮೆ ಆಗುತ್ತದೆ. ಬೆಲೆ ಹೆಚ್ಚಾದ ತಕ್ಷಣ ವೈಭವೀಕರಣ ಮಾಡುವುದು ಬಿಡಿ’’ ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ. ಅಡುಗೆ ಎಣ್ಣೆ ದರ ಸಹ ಕಡಿಮೆ ಆಗುತ್ತೆ ಕಾದು ನೋಡಿ ಎಂದು ಅವರು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಡ್ಡಿ ಸಮೇತ ತಿರುಗೇಟು: ಕೆಎಸ್ ಈಶ್ವರಪ್ಪ ಶಿವಮೊಗ್ಗ: ಹಾನಗಲ್ ಉಪಚುನಾವಣೆಯಲ್ಲಿ ಗೆದ್ದು ಹಾರಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ತಿರುಗೇಟು ನೀಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆಯ ಕುರಿತಂತೆ ಅವರು ಶಿವಮೊಗ್ಗದಲ್ಲಿ ಪ್ರತಿ್ಕರಿಯೆ ನೀಡಿದ್ದಾರೆ. ಸಿಂದಗಿ ಸೋಲಿನ ಕುರಿತು ಸಿದ್ದರಾಮಯ್ಯ ಮೌನ ವಹಿಸಿದ್ದಾರೆ. ಆದರೆ ಹಾನಗಲ್ ಗೆಲುವಿನ ಬಗ್ಗೆ ಹಾರಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ತೀರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕಾಂಗ್ರೆಸ್ ಪಕ್ಷದವರು ಮಾತ್ರ ಟೀಕೆ ಮಾಡುತ್ತಿದ್ದಾರೆ ಎಂದೂ ಅವರು ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ‘ಬೆಲೆ ಇಳಿಕೆ ಮೋದಿ ಕೊಟ್ಟ ದೀಪಾವಳಿ ಕೊಡುಗೆಯಲ್ಲ. ಇದು ದೇಶಾದ್ಯಂತ ನಡೆದ ಬೈಎಲೆಕ್ಷನ್ ಕೊಡುಗೆಯಾಗಿದೆ. ಬಿಜೆಪಿ ಸೋಲಿಸಿದರೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುತ್ತೆ. ಇಂತಹ ಪಾಠ ಹೇಳಿಕೊಟ್ಟ ಪ್ರಧಾನಿ ಮೋದಿಗೆ ಧನ್ಯವಾದ ಎಂದು ಟಾಂಗ್ ನೀಡಿದ್ದರು.
ಇದನ್ನೂ ಓದಿ:
ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 21 ಮಂದಿ ಸಾವು: ಸಚಿವ ಸುನಿಲ್ ಕುಮಾರ್
ಬೆಂಗಳೂರು: ಯಾರಾದರೂ ಕಾಣೆಯಾದರೆ, ಕರೆಗೆ ಸ್ಪಂದಿಸದಿದ್ದರೆ ತಕ್ಷಣ 112ಗೆ ಮಾಹಿತಿ ನೀಡಿ; ಡಿಸಿಪಿ ಸಂಜೀವ ಪಾಟೀಲ್