AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Jihad: ಇದೊಂದು ವಿಕೃತನ ಕತೆ, ಅದೀಗ ಲವ್ ಜಿಹಾದ್ ಬಣ್ಣವೂ ಪಡೆದುಕೊಂಡಿದೆ

ಈ ಪೋಟೋದಲ್ಲಿರುವ ಜೋಡಿಯ ಹೆಸರು‌ ನಾಗವೇಣಿ ಹಾಗೂ ಜೀಲಾನ್ ಖಾನ್, ನಾಗವೇಣಿ ಮೂಲತಃ ಜಗಳೂರು‌ ತಾಲ್ಲೂಕಿನ‌ ದಿಬ್ಬದಳ್ಳಿ ಗ್ರಾಮದವರು.‌ ಚಿಕ್ಕ ‌ವಯಸ್ಸಿನಲ್ಲೇ ಸೋದರ ಮಾವನ ಜೊತೆ ಮದುವೆಯಾಗಿ ಗಂಡನನ್ನು ಕಳೆದುಕೊಂಡಿದ್ದಳು.

Love Jihad: ಇದೊಂದು ವಿಕೃತನ ಕತೆ, ಅದೀಗ ಲವ್ ಜಿಹಾದ್ ಬಣ್ಣವೂ ಪಡೆದುಕೊಂಡಿದೆ
ಇದೊಂದು ವಿಕೃತನ ಕತೆ, ಅದೀಗ ಲವ್ ಜಿಹಾದ್ ಬಣ್ಣವೂ ಪಡೆದುಕೊಂಡಿದೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​|

Updated on:Jul 07, 2023 | 12:03 PM

Share

ಆ ಮಹಿಳೆ ಗಂಡನನ್ನು ಕಳೆದುಕೊಂಡು ಕಷ್ಟದ ಜೀವನ ನಡೆಸುತ್ತಿದ್ದಳು. ಬಡತನದಲ್ಲೇ ಇದ್ದ ಆಕೆ ಚಿಕ್ಕದೊಂದು ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದಳು. ಆದರೆ ಆ ಕಿರಾತಕನ ಸಹವಾಸ ಮಾಡಿ ಆಕೆಯ ಜೀವನ ಬಾಂಡಲಿಯಿಂದ ಬೆಂಕಿಗೆ ಬಿದ್ದಂತಾಯಿತು. ಲೈಂಗಿಕವಾಗಿ ಬಳಿಸಿಕೊಂಡ ಆ ಕಿರಾತಕ, ವೀಡಿಯೊ ಕಾಲ್ ಮೂಲಕ ಹೆಂಡತಿಯ ನಗ್ನ ದೇಹ ತೋರಿಸಿ ವಿಕೃತಿ ಮೆರೆಯುತ್ತಿದ್ದ ಎನ್ನುವ ಆರೋಪ ಮಾಡುತ್ತಿದ್ದು, ಈಗ ಅದು ಲವ್ ಜಿಹಾದ್ (Love Jihad) ಬಣ್ಣ ಪಡೆದುಕೊಂಡಿದೆ. ತನಗೆ ನ್ಯಾಯ ಬೇಕು ಎಂದು ಪೊಲೀಸ್ ಠಾಣೆಯ‌ ಮೆಟ್ಟಿಲೇರಿದ ಮಹಿಳೆ.. ಮಹಿಳೆಗೆ ಬೆಂಬಲವಾಗಿ ನಿಂತ ಹಿಂದೂ ಪರ (Hindu) ಸಂಘಟನೆ ಕಾರ್ಯಕರ್ತರು.. ಅರೋಪಿ ಬರುತ್ತಿದ್ದಂತೆ ಚಪ್ಪಲಿ ಹಿಡಿದು ಬೆನ್ನು ಹತ್ತಿದ ನೊಂದ ಮಹಿಳೆ.. ಹೌದು ಇದೆಲ್ಲ ನಡೆದಿದ್ದು ದಾವಣಗೆರೆಯ (Davanagere) ಕೆಟಿಜೆ ನಗರ ಪೊಲೀಸ್ ಠಾಣೆಯ ಮುಂಭಾಗ.

ಈ ಪೋಟೋದಲ್ಲಿರುವ ಜೋಡಿಯ ಹೆಸರು‌ ನಾಗವೇಣಿ ಹಾಗೂ ಜೀಲಾನ್ ಖಾನ್, ನಾಗವೇಣಿ ಮೂಲತಃ ಜಗಳೂರು‌ ತಾಲ್ಲೂಕಿನ‌ ದಿಬ್ಬದಳ್ಳಿ ಗ್ರಾಮದವರು.‌ ಚಿಕ್ಕ ‌ವಯಸ್ಸಿನಲ್ಲೇ ಸೋದರ ಮಾವನ ಜೊತೆ ಮದುವೆಯಾಗಿ ಗಂಡನನ್ನು ಕಳೆದುಕೊಂಡಿದ್ದಳು. ಜೀವನಕ್ಕಾಗಿ ‌ಅದೇ ಗ್ರಾಮದಲ್ಲಿ ಚಿಕ್ಕದೊಂದು ಕಿರಾಣಿ ಅಂಗಡಿ ಹಾಕಿಕೊಂಡು ಜೀವನ ಮಾಡುತ್ತಿದ್ದಳು. ಹೇಗೋ ದಾವಣಗೆರೆಯ ಭಾಷಾ ನಗರದ ಜೀಲಾನ್ ಖಾನ್ ನ ಪರಿಚರವಾಗಿ ಅ ಪರಿಚಯ ಮದುವೆ ವರೆಗೂ ಬಂದಿದ್ದು, ಜೀಲಾನ್ ಖಾನ್ ನಾಗವೇಣಿಯನ್ನು ಕರೆದುಕೊಂಡು ಹೋಗಿ ಉಜ್ಜಯಿನಿಯ ದರ್ಗಾದಲ್ಲಿ ಇಲ್ಲಾಂ ಧರ್ಮದಂತೆ ಮದುವೆಯಾಗಿದ್ದನಂತೆ.

ಅಕೆಯ ಹೆಸರು ಗುಲ್ಜಾರ್ ಬೇಗಾಂ ಅಂತಾನೂ ಬದಲಾಯಿಸಿದ್ದನಂತೆ. ಸುಮಾರು ವರ್ಷಗಳ‌ ಕಾಲ ಆಕೆ ಜೊತೆ ಜೀವನ ಮಾಡಿದ್ದ ಜೀಲಾನ್ ಖಾನ್ ಇತ್ತಿಚಿಗೆ ಕೆಲ ವರ್ಷಗಳಿಂದ ವಿಕೃತಿ ಮೆರೆಯುತ್ತಿದ್ದಾನೆ‌ ಎಂಬ ಅರೋಪ‌ವೂ ಇದೆ. ಅಕೆಯ ಜೊತೆ ಲೈಂಗಿಕ ಸಂಪರ್ಕ ಹೊಂದಿದಾಗ ವೀಡಿಯೋ ಕಾಲ್ ಮೂಲಕ ಬೇರೆಯವರಿಗೆ ತೋರಿಸುವುದು, ವೀಡಿಯೋ ಮಾಡಿ ಕಳಿಸುವ ಕೆಲಸ ಮಾಡುತ್ತಿದ್ದನಂತೆ. ಅಲ್ಲದೆ ಇವಳದ್ದು ಇಷ್ಟು ರೇಟ್ ಬೇಕಾ ಎಂದು ಕೇಳುತ್ತಿದ್ದನಂತೆ. ಏನಾದ್ರು ವಿರೋಧ ಮಾಡಿದರೆ ಹೊಡೆದು ಬೆತ್ತಲೆ ಮಾಡಿ ಹೊರ ಹಾಕುತ್ತಿದ್ದ ಎಂದು ನೊಂದ ಮಹಿಳೆ ಗೋಳಾಡಿದ್ದಾಳೆ.

ಇನ್ನು ಜೀಲಾನ್ ಖಾನ್ ಗೆ ಈಗಲೇ ಎರಡು‌ ಮದುವೆಯಾಗಿದ್ದು, ಕೂಲಿ ಕೆಲಸಕ್ಕೆ ನಾಗವೇಣಿಯನ್ನು ಕರೆದುಕೊಂಡು ಹೋಗುತ್ತಿದ್ದ. ಅಲ್ಲದೆ ಆಕೆ ತನ್ನ ಪತ್ನಿ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲದಂತೆ ನಾಶ ಮಾಡಿದ್ದಾನೆ ಎನ್ನುವ ಆರೋಪ ಮಾಡುತ್ತಿದ್ದಾಳೆ. ಅಲ್ಲದೆ ನಾಗವೇಣಿ ಪೋಟೋಗೆ ಪೊಲೀಸ್ ಡ್ರಸ್ ಹಾಕಿಸಿದ ನಕಲಿ ಪೊಲೀಸ್ ಐಡಿ ಕಾರ್ಡ್ ಮಾಡಿಸಿ ಶಿವಮೊಗ್ಗ ಕಡೆ ಕರೆದುಕೊಂಡು ಹೋಗಿ ಯಾವುದಾದರೂ ರಾಜೀ ಪಂಚಾಯತಿ ಇದ್ದರೆ ಐಡಿ ಕಾರ್ಡ್ ತೋರಿಸಿ ಸೆಟಲ್ಮೆಂಟ್ ಮಾಡಿಕೊಂಡು ಬರ್ತಾ ಇದ್ದನಂತೆ.

ಅಲ್ಲದೆ ಅದೇ ಐಡಿ ಕಾರ್ಡ್ ತೋರಿಸಿ ಮುಗ್ದರನ್ನು ಹೆಸರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಮಹಿಳೆ ಆರೋಪ ಮಾಡಿದ್ದು, ಆತನಿಂದ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ ಈಗ. ಹಿಂದೂ ಸಂಘಟನೆಯ ಕೆಲ ಕಾರ್ಯಕರ್ತರು ಆಕೆಗೆ ಬೆಂಬಲಕ್ಕೆ ನಿಂತಿದ್ದು ಇದು ಲವ್ ಜಿಹಾದ್. ಇದೇ ರೀತಿ ನೂರಾರು ಮಹಿಳೆಯರನ್ನು ನಂಬಿಸಿ‌ ಮೋಸ ಮಾಡುವ ಪ್ರಕರಣಗಳು ಇದ್ದು ಇನ್ನಾದರೂ ಎಚ್ಚರಿಕೆಯಿಂದ ಇರಿ ಎಂದು ಹಿಂದೂ ಸಂಘಟನೆಗಳು ಮಹಿಳೆಯರಿಗೆ ಮನವಿ ಮಾಡಿದ್ದಾರೆ.

ಒಟ್ಟಾರೆ ಯಾಗಿ ಹಲವು ವರ್ಷಗಳಿಂದ‌ ಕಿರಾತಕನ ಜೊತೆ ಜೀವನ ಮಾಡಿಕೊಂಡು ಬರುತ್ತಿದ್ದ ನಾಗವೇಣಿ ಈಗ ನ್ಯಾಯಕ್ಕಾಗಿ ಆತನ ವಿರುದ್ಧವೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕೂಡಲೇ ಸಂಬಂಧಪಟ್ಟ ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತೆಗೆಯಬೇಕಿದೆ.

ಲವ್ ಜಿಹಾದ್​ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:40 am, Fri, 7 July 23