PM Modi: ಇಂದು ದಾವಣಗೆರೆಗೆ ಪ್ರಧಾನಿ ಮೋದಿ ಭೇಟಿ: ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣ ಬಂದ್

|

Updated on: Mar 25, 2023 | 7:30 AM

ಪ್ರಧಾನಿ ನರೇಂದ್ರ ಮೋದಿಯವರು ದಾವಣಗೆರೆ ಭೇಟಿ ಹಿನ್ನೆಲೆ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣವನ್ನು ಒಂದು ದಿನದ ಮಟ್ಟಿಗೆ ಸ್ಥಳಾಂತರಿಸಲಾಗಿದೆ.

PM Modi: ಇಂದು ದಾವಣಗೆರೆಗೆ ಪ್ರಧಾನಿ ಮೋದಿ ಭೇಟಿ: ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣ ಬಂದ್
ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ (ಎಡಚಿತ್ರ) ಪ್ರಧಾನಿ ಮೋದಿ (ಬಲಚಿತ್ರ)
Follow us on

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು (ಮಾ.25) ರಾಜ್ಯದ ಬೆಣ್ಣೆ ನಗರಿ ದಾವಣಗೆರೆಗೆ (Davanagere) ಭೇಟಿ ನೀಡಲಿದ್ದು, ನಗರದ ಹೊರ ವಲಯದ ಜಿಎಂಐಟಿ ಕಾಲೇಜ್ ಪಕ್ಕದಲ್ಲಿ ನಡೆಯುವ ಮೋದಿ ಮಹಾಸಂಗಮದಲ್ಲಿ (Modi Maha Sangama Convention) ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಇಂದು ದಾವಣಗೆರೆಯ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತು ಖಾಸಗಿ ಬಸ್​ ನಿಲ್ದಾಣಗಳನ್ನು ಬಂದ್​ ಮಾಡಲಾಗಿದ್ದು, ಒಂದು ದಿನದ ಮಟ್ಟಿಗೆ ನಗರದ ಹೊರವಲಯಕ್ಕೆ ಸ್ಥಳಾಂತರ ಮಾಡಲಾಗಿದೆ.

ಪ್ರಧಾನಿ ಮೋದಿ ದಾವಣಗೆರೆ ಭೇಟಿ ಸಮಯ

ಪ್ರಧಾನಿ ಮೋದಿ ಮಧ್ಯಾಹ್ನ 3.15ಕ್ಕೆ ದಾವಣಗೆರೆ ಜಿಎಂಐಟಿ ಹೆಲಿಪ್ಯಾಡ್​​ಗೆ ಆಗಮಿಸಿ, ಮಧ್ಯಾಹ್ನ 3.20ಕ್ಕೆ ಹೆಲಿಪ್ಯಾಡ್​ನಿಂದ GMITಯಲ್ಲಿ ನಡೆಯುವ ಮಹಾಸಂಗಮದ ವೇದಿಕೆಗೆ ಬರಲಿದ್ದಾರೆ. ಸಂಜೆ 5.05ಕ್ಕೆ ಸಾರ್ವಜನಿಕ ಸಭೆ ವೇದಿಕೆಯಿಂದ ನಿರ್ಗಮಿಸಲಿದ್ದು, ಸಂಜೆ 5.15ಕ್ಕೆ ದಾವಣಗೆರೆಯಿಂದ ಹೆಲಿಕಾಪ್ಟರ್​ನಲ್ಲಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸುತ್ತಾರೆ. ಸಂಜೆ 5.50ಕ್ಕೆ ಶಿವಮೊಗ್ಗ ಏರ್​ಪೋರ್ಟ್​ ತಲುಪಿ, ಸಂಜೆ 5.55ಕ್ಕೆ ಶಿವಮೊಗ್ಗ ಏರ್​ಪೋರ್ಟ್​ನಿಂದ ದೆಹಲಿಗೆ ತೆರಳಲಿದ್ದಾರೆ.

ಇದನ್ನೂ ಓದಿ: ಮೋದಿ ಮಹಾ ಸಂಗಮ ಸಮಾವೇಶಕ್ಕೆ ಬರುವ ಜನರಿಗೆ ಐದು ಕಿಮೀ ಪಾದಯಾತ್ರೆ ಅನಿವಾರ್ಯ

ಮಹಾಸಂಗಮ ಸಮಾವೇಶಕ್ಕೆ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ​​

400 ಎಕರೆ ಪ್ರದೇಶದಲ್ಲಿ ನಡೆಯುವ ಮಹಾಸಂಗಮದಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಹಾವೇರಿ ಬಳ್ಳಾರಿ ಹಾಗೂ ಗದಗ 7 ಜಿಲ್ಲೆಯ ಜನರು ಸೇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಲಿದೆ. ಈ ಹಿನ್ನೆಲೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳ ಪಾರ್ಕಿಂಗ್​ಗೆ ವಿವಿಧಡೆ ವ್ಯವಸ್ಥೆ ಮಾಡಲಾಗಿದೆ.

1. ಚಿಕ್ಕಮಗಳೂರು, ಶಿವಮೊಗ್ಗ ಭದ್ರಾವತಿ, ಬೀರೂರು, ಕಡೂರು, ಶೃಂಗೇರಿ, ಬೆಂಗಳೂರು, ಕೋಲಾರ, ತಮಕೂರು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಗಳೂರು ಜಿಲ್ಲೆಗಳಿಂದ ಬಾಡಾ ಕ್ರಾಸ್​ನಿಂದ  ಬರುವ ವಾಹನಗಳಿಗೆ ದಾವಣಗೆರೆಯ ಎಪಿಎಂಸಿ ಬಳಿಯ ಚಿಕ್ಕನಹಳ್ಳಿಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ​​.

2. ಚನ್ನಗಿರಿ, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಮಂಗಳೂರು ಹದಡಿ ರಸ್ತೆ ಮೂಲಕ ಬರುವ ವಾಹನಗಳಿಗೆ ಡಿಆರ್​ಎಂ ಸೈನ್ಸ್​ ಕಾಲೇಜ್​, ಹೈಸ್ಕೂಲ್​ ಮೈದಾನ, ಯುಬಿಡಿಟಿ ಇಂಜಿನಿಯರಿಂಗ್​ ಕಾಲೇಜ್​ ಮೈದಾನದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ.

3. ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಹರಿಹರ ಕಡೆಯಿಂದ ಬೈಪಾಸ್​ ರಸ್ತೆ ಮುಖಾಂತರ ಹಳೆ ಕುಂದವಾಡ ಕಡೆಯಿಂದ ಬರುವ ವಾಹನಗಳಿಗೆ  ಕುಂದವಾಡ ಕೆರೆ ಹತ್ತಿರದ ಪಾರ್ಕಿಂಗ್​ ಮಾಡಲು ವ್ಯವಸ್ತೆ ಇದೆ  ಬರುವ ವಾಹನಗಳು ಅವರಗೊಳ್ಳದ ಕೇಂದ್ರೀಯ ವಿದ್ಯಾಲಯದ ಬಳಿ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ.

4. ಹರಪ್ಪನಹಳಿ- ಬಳ್ಳಾರಿ ,ವಿಜಯನಗರ, ಕೊಪ್ಪಳ, ವಿಜಯಪುರ, ರಾಯಚೂರು, ಬೀದರ್​, ಕಲಬುರಗಿ, ಗದಗ, ಯಾದಗಿರಿ, ಹೊಸಪೇಟೆ ಕಡೆಯಿಂದ ಬರುವ ವಾಹನಗಳು ಕೊಂಡಜ್ಜಿ, ಆವರಗೊಳ್ಳ ಮುಖಾಂತರ ಬರುವ ವಾಹನಗಳಿಗೆ  ಕೇಂದ್ರೀಯ ವಿದ್ಯಾಲಯದ ಜಾಗದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಇದೆ.

5. ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಗಿ ಜಿಲ್ಲೆಗಳಿಂದ ಜಗಳೂರು ರಸ್ತೆ ಮೂಲಕ ಬರುವ ವಾಹನಗಳನ್ನು ಬಡಗಿ ಕೃಷ್ಣಪ್ಪ ಲೇಔಟ್​ನಲ್ಲಿ ಪಾರ್ಕಿಂಗ್​ ಮಾಡಲು ವ್ಯವಸ್ಥೆ ಇರುತ್ತದೆ.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಭದ್ರತೆ

ಮೋದಿ ಕಾರ್ಯಕ್ರಮದ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಿದ್ದು. ಬಾಂಬ್ ಪತ್ತೆ ದಳ ನಿರಂತರ ತಪಾಸನೆ, ಹತ್ತಾರು ಸಲ ಸುತ್ತಾಡುತ್ತಿರುವ ಸೇನಾ ಹೆಲಿಕಾಪ್ಟರ್. ಮಹಾಸಂಗಮ ನಡೆಯುವ 2 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್​ ಹಾರಾಟ, ಬ್ಲಾಕ್ ಶರ್ಟ್, ನೀರಿನ ಬಾಟಲ್, ಬ್ಯಾಗ್​ಗಳನ್ನು ನಿಷೇಧಿಸಲಾಗಿದೆ. ಜೊತೆಗೆ ಸಮಾವೇಶಕ್ಕೆ ಬರುವ ಜನರನ್ನು ಎರಡು ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ. ಇನ್ನು ಎಂಟು ಜನ ಎಸ್​.ಪಿ ಮತ್ತು ಎ.ಎಸ್​.ಪಿಗಳು, ಡಿವೈಎಸ್ಪಿ 32, ಇನ್ಸ್ಪೆಕ್ಟರ್​ಗಳು 85, ಹೋಮ್ ಗಾರ್ಡ್ಸ್ 900 ಸೇರಿದಂತೆ 4000 ಪೊಲೀಸರ ನಿಯೋಜನೆ ಮಾಡಲಾಗಿದೆ. ಮೋದಿ ಪ್ರೇಕ್ಷಕರ ಗ್ಯಾಲರಿಯಲ್ಲಿ ರೋಡ್ ಶೋ ನಡೆಸುವ ಸ್ಥಳದಲ್ಲಿ ಒಬ್ಬ ಎಸ್​ಪಿ ಇರಲಿದ್ದಾರೆ.

ಪಿಯುಸಿ  ಮಕ್ಕಳಿಗೆ ಪೊಲೀಸರ ಸಹಾಯಪ

ಪರೀಕ್ಷೆಗೆ ಬರುವ ಮಕ್ಕಳು ತಮ್ಮೊಂದಿಗೆ ಹಾಲ್​ಟಿಕೇಟ್​ ಮತ್ತು ಗುರುತಿನ ಚೀಟಿಯನ್ನು ಕಡ್ಡಾಯಾವಗಿ ಜೊತೆಯಲ್ಲಿಟ್ಟುಕೊಳ್ಳುವುದು ಹಾಗೂ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪೊಲೀಸರು ಯಾವುದೇ ಅಡಚಣೆ ಮಾಡದೆ ಪರೀಕ್ಷೆಗೆ ಸಂಪೂರ್ಣ ಅನುಕೂಲ ಮಾಡಿಕೊಡಲಾಗವುದು.

Published On - 7:01 am, Sat, 25 March 23