PM Narendra Modi in Karnataka: ಉರಿಬಿಸಿಲಲ್ಲೂ ಪ್ರಧಾನಿಯನ್ನು ನೋಡಲು ದಾವಣಗೆರೆಗೆ ಆಗಮಿಸಿದ 80-ವರ್ಷ-ವಯಸ್ಸಿನ ಅಜ್ಜಿ!
ಇದಕ್ಕೆ ಮೊದಲು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರನ್ನು ನೋಡಿದ್ದೆ, ಈಗ ಮೋದಿಯವರನ್ನು ನೋಡಲು ಬಂದಿದ್ದೇನೆ ಅಂತ ಕೃಷ್ಣಮ್ಮ ಹೇಳುತ್ತಾರೆ.
ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಜನಪ್ರಿಯತೆ ಯಾರಿಗೆ ಗೊತ್ತಿಲ್ಲ? ಅವರಿಗೆ ಎಲ್ಲ ವಯಸ್ಸಿನ ಅಭಿಮಾನಿಗಳಿದ್ದಾರೆ. ಇಂದು ಮಧ್ಯಾಹ್ನ ಪ್ರಧಾನಿ ದಾವಣಗೆರೆಗೆ ಆಗಮಿಸಲಿದ್ದಾರೆ ಮತ್ತು ಅವರನ್ನು ನೋಡಲು ಲಕ್ಷೋಪಲಕ್ಷ ಜನ ಸೇರುತ್ತಿದ್ದಾರೆ. ಅವರಲ್ಲ್ಲೊಬ್ಬರು ಈ 80-ವರ್ಷ-ವಯಸ್ಸಿನ ಅಜ್ಜಿ ಕೃಷ್ಣಮ್ಮ (Krishnamma). ಇಂಥ ಉರಿಬಿಸಿಲಲ್ಲೂ ಬಂದಿದ್ದೀರಲ್ಲ ಅಂತ ಟಿವಿ9 ವರದಿಗಾರ ಕೇಳಿದರೆ, ಏನೂ ಸಮಸ್ಯೆಯಿಲ್ಲ, ಅವರು ಬರೋವರೆಗೆ ಎಲ್ಲಾದರೂ ಕೂತಿರ್ತೀನಿ ಅಂತ ಹೇಳುತ್ತಾರೆ. ಮೋದಿಯವರನ್ನು ನೋಡೋದು ಇದೇ ಮೊದಲ ಸಲವೇ ಅಂತ ಕೇಳಿದರೆ, ಹೌದು ಮೊದಲ ಸಲ, ಇದಕ್ಕೆ ಮೊದಲು ಇಂದಿರಾ ಗಾಂಧಿ (Indira Gandhi) ಮತ್ತು ರಾಜೀವ್ ಗಾಂಧಿಯವರನ್ನು (Rajiv Gandhi) ನೋಡಿದ್ದೆ, ಈಗ ಮೋದಿಯವರನ್ನು ನೋಡಲು ಬಂದಿದ್ದೇನೆ ಅಂತ ಕೃಷ್ಣಮ್ಮ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos