
ದಾವಣಗೆರೆ: 21 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಮೇಜರ್ ಎಚ್. ಅಂಜಿನಪ್ಪ, ಇಂದು ಸೇನೆಯಿಂದ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ್ದಾರೆ. ನಿವೃತೃ ಮೇಜರ್‌ಗೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕುಟುಂಬದವರು, ಸಂಬಂಧಿಕರು ಮತ್ತು ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ.
ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಎಚ್. ಅಂಜಿನಪ್ಪ, ಅಣಜಿ ಗ್ರಾಮದಿಂದ ಸೇನೆಗೆ ಸೇರಿದ್ದ ಏಕೈಕ ವ್ಯಕ್ತಿಯಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನಸಿಂಗ್ ಸೇರಿ ಅನೇಕ ವಿಐಪಿಗಳಿಗೆ ಯೋಜಿಸಿದ ಭದ್ರತಾ ತಂಡದಲ್ಲಿ ಅಂಜಿನಪ್ಪ ಕೆಲಸ ಮಾಡಿದ್ದಾರೆ. ಸದ್ಯ ನಿವೃತ್ತಿ ನಂತರ ಮರಳಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಮೇಜರ್ ಅಂಜಿನಪ್ಪ ಅವರನ್ನು ಉಪವಿಭಾಧಿಕಾರಿ ಮಮತ ಹೊಸಗೌಡರ್, ಜಿಲ್ಲಾ ಪಂಚಾಯತಿ ಸದಸ್ಯ ಬಸವಂತಪ್ಪ ಸ್ವಾಗತಿಸಿದ್ದಾರೆ.
ಹಾಸನ: 22 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ವೀರ ಯೋಧನಿಗೆ ಭರ್ಜರಿ ಸ್ವಾಗತ
ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಹಿಂತಿರುಗಿದ ವೀರ-ಯೋಧನಿಗೆ ಜನರು ಭವ್ಯ ಸ್ವಾಗತ ಕೋರಿದ್ದಾರೆ. ವೀರ ಯೋಧನ ಪರ ಘೋಷಣೆ ಮೊಳಗಿಸುತ್ತಾ ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಮಾಡಿ ಸಂಭ್ರಮಿಸಿದರು. ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮಕ್ಕೆ ನಿನ್ನೆ ಆಗಮಿಸಿದ ಯೋಧ ಹೆಚ್.ಎಲ್ ಹಿರಣ್ಣಯ್ಯ ಕಂಡು ಊರಿಗೆ ಊರೇ ಸಂಭ್ರಮಿಸಿತ್ತು.
ಹಾನುಬಾಳು ಹೋಬಳಿಯ ಹುನುಮನಹಳ್ಳಿ ಗ್ರಾಮದ ಹೆಚ್.ಕೆ. ಲಕ್ಷ್ಮಣಗೌಡ ಅವರ ಪುತ್ರ ಹೆಚ್.ಎಲ್. ಹಿರಣ್ಣಯ್ಯ ಬಿಎಸ್‌ಎಫ್ ನಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ನೆನ್ನೆ ತವರಿಗೆ ಹಿಂದಿರುಗಿದರು. ಬರೊಬ್ಬರಿ 22 ವರ್ಷ ಭಾರತೀಯ ಸೇನೆಯಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿ ತವರಿಗೆ ಬರೋದು ಅಂದ್ರೆ ಮರು ಹುಟ್ಟು ಪಡೆದಂತೆ ಹಾಗಾಗಿಗೇ ಅವರ ಆಗಮನ ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು. ಗ್ರಾಮದ ಜನರು ಬಂಧುಗಳು, ಸ್ನೇಹಿತರೆಲ್ಲಾ ಸೇರಿ ಭವ್ಯ ಸ್ವಾಗತ ಕೋರಿ ವೀರ ಸೇನಾನಿಯ ಸೇವೆಯನ್ನ ಕೊಂಡಾಡಿದ್ರು. ಇನ್ನು 22 ವರ್ಷ ಮನೆಯಿಂದ ದೂರವಿದ್ದು ದೇಶಕ್ಕಾಗಿ ಬದುಕಿದ್ದ ಮನೆ ಮಗ ಮನೆಗೆ ಬಂದಾಗ ಮನೆಯಲ್ಲಿ ಸಂಭ್ರಮ ಸಡಗರ ಮೇಳೈಸಿತ್ತು. ಎಲ್ಲೆಲ್ಲೂ ಹೂವ ಚೆಲ್ಲಿ ಭಾರತ್ ಮಾತಾಕಿ ಜೈ ಎಂದು ಕೊಂಡಾಡಿ ಮನೆಗೆ ಬರಮಾಡಿಕೊಂಡರು.
ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಸಕಲೇಶಪುರದಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದ ಹಿರಣ್ಣಯ್ಯ ರವರು 2000 ನೇ ಇಸವಿಯಲ್ಲಿ ಬಿಎಸ್ಎಫ್ ಗಡಿಭದ್ರತಾಪಡೆಗೆ ಸೇರಿದ್ರು, ಬಹುತೇಕ ಸಮಯ ಉಗ್ರರ ಕರಿನೆರಳಿನಲ್ಲೇ ಕೆಲಸ ಮಾಡಿ ದುಷ್ಟರ ಸಂಹಾರ ಮಾಡಿ ವಿಜಯಿಯಾಗಿ ಈಗ ತವರಿಗೆ ಮರಳಿದ್ದಾರೆ. ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ್, ಪಂಜಾಬ್, ಗುಜರಾತ್, ರಾಜಸ್ತಾನ್, ದೆಹಲಿ, ಮಣಿಪುರ ಗಳಲ್ಲಿ ಸೇವೆ ಸಲ್ಲಿಸಿ ಈಗ ಹುಟ್ಟೂರಿಗೆ ಮರಳಿದ್ದಾರೆ.
ಇದನ್ನೂ ಓದಿ:
22 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ವೀರ ಯೋಧನಿಗೆ ಭರ್ಜರಿ ಸ್ವಾಗತ; ಪುಷ್ಪಾರ್ಚನೆ, ಜೈಕಾರ ಕೂಗಿದ ಜನ
ಅಫ್ಘಾನ್ನಿಂದ ಹೊರಬಿದ್ದ ಅಮೆರಿಕದ ಕೊನೇ ಯೋಧ ಇವರು..; ಫೋಟೋ ಶೇರ್ ಮಾಡಿದ ರಕ್ಷಣಾ ಇಲಾಖೆ
Published On - 12:01 pm, Fri, 3 September 21