ಅಫ್ಘಾನ್ನಿಂದ ಹೊರಬಿದ್ದ ಅಮೆರಿಕದ ಕೊನೇ ಯೋಧ ಇವರು..; ಫೋಟೋ ಶೇರ್ ಮಾಡಿದ ರಕ್ಷಣಾ ಇಲಾಖೆ
ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಜನರನ್ನು ಬಹುತೇಕ ಸ್ಥಳಾಂತರ ಮಾಡಿದ್ದೇವೆ. ಆದರೆ ಇನ್ನು 200ಕ್ಕಿಂತಲೂ ಕಡಿಮೆ ಅಮೆರಿಕನ್ನರು ಅಲ್ಲಿಯೇ ಉಳಿದಿದ್ದಾರೆ.
ಅಫ್ಘಾನಿಸ್ತಾನ (Afghanistan)ದಿಂದ ಯುಎಸ್ ಸೇನೆ (US Army)ಸಂಪೂರ್ಣವಾಗಿ ಹೊರನಡೆದಿದೆ. ಕಳೆದ 20ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಯೋಧರು ಅಲ್ಲೀಗ ಒಬ್ಬರೂ ಇಲ್ಲ. ತಾಲಿಬಾನ್ (Taliban) ನೀಡಿದ್ದ ಗಡುವಿಗೂ 24ಗಂಟೆಗೂ ಮೊದಲೇ, ಅಂದರೆ ಸೋಮವಾರ ರಾತ್ರಿ ಮೂರು ವಿಮಾನಗಳ ಮೂಲಕ ಅಮೆರಿಕ ಯೋಧರು ವಾಪಸ್ ತೆರಳಿದ್ದಾರೆ. ತನ್ಮೂಲಕ ಕಾಬೂಲ್ ವಿಮಾನ ನಿಲ್ದಾಣ ಕೂಡ ಸಂಪೂರ್ಣವಾಗಿ ಉಗ್ರರ ಕೈವಶವಾಗಿದೆ.
ಈ ನಡುವೆ ಅಫ್ಘಾನಿಸ್ತಾನದಿಂದ ಕೊನೇದಾಗಿ ಹೊರಬಿದ್ದ ಯೋಧನ ಫೋಟೋವನ್ನು ಅಮೆರಿಕ ರಕ್ಷಣಾ ಇಲಾಖೆ ಶೇರ್ ಮಾಡಿಕೊಂಡಿದೆ. ಅಫ್ಘಾನಿಸ್ತಾನದಿಂದ ಕೊನೇದಾಗಿ ಹೊರನಡೆದ ಅಮೆರಿಕ ಯೋಧ ಮೇಜರ್ ಜನರಲ್ ಕ್ರಿಸ್ ಡೊನಾಹು. ಅವರು ಅಲ್ಲಿಂದ ವಿಮಾನ ಹತ್ತುವ ಮೂಲಕ ಕಾಬೂಲ್ನಲ್ಲಿ ಯುಎಸ್ ಮಿಷನ್ ಮುಕ್ತಾಯವಾಯಿತು. ನಮ್ಮ ಸಂಪೂರ್ಣ ಸೇನೆ ವಾಪಸ್ ಬಂತು ಎಂದು ಟ್ವೀಟ್ ಮಾಡಿದೆ.
ಆಗಸ್ಟ್ 15ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಲ್ಲಿದ್ದ ಯುಎಸ್ ನಾಗರಿಕರು, ಅಮೆರಿಕಕ್ಕೆ ಹೋಗಲು ಇಚ್ಛಿಸುವ ನಾಗರಿಕರನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ ಅಮೆರಿಕ ಸೇನೆ ತೊಡಗಿಕೊಂಡಿತ್ತು. ಯುಎಸ್ ಎಂದರೆ ಸದಾ ಕಿಡಿಕಾರುವ ತಾಲಿಬಾನಿಗಳು, ಸ್ಥಳಾಂತರ ಪ್ರಕ್ರಿಯೆಗೆ ಆಗಸ್ಟ್ 31ರವರೆಗೆ ಡೆಡ್ಲೈನ್ ನೀಡಿದ್ದರು. ಅಮೆರಿಕ ಕೂಡ, ಆಗಸ್ಟ್ 31ರೊಳಗೆ ಎಲ್ಲ ನಾಗರಿಕರನ್ನೂ ವಾಪಸ್ ಕರೆಸಿಕೊಳ್ಳುತ್ತೇವೆ ಎಂದೇ ಹೇಳಿತ್ತು. ಆದರೆ ಅದಕ್ಕೂ ಒಂದು ದಿನ ಮೊದಲೇ ಅಂದರೆ, ಆಗಸ್ಟ್ 30ರ ರಾತ್ರಿಯೇ ಸ್ಥಳಾಂತರ ಕಾರ್ಯ ಮುಕ್ತಾಯಗೊಂಡಿದೆ. ಅಮೆರಿಕ ಸೇನೆ ವಾಪಸ್ ಹೋಗುತ್ತಿದ್ದಂತೆ ಇತ್ತ ಕಾಬೂಲ್ನ್ನು ವಶಪಡಿಸಿಕೊಂಡ ತಾಲಿಬಾನಿಗಳು ಗುಂಡು ಹಾರಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
The last American soldier to leave Afghanistan: Maj. Gen. Chris Donahue, commanding general of the @82ndABNDiv, @18airbornecorps boards an @usairforce C-17 on August 30th, 2021, ending the U.S. mission in Kabul. pic.twitter.com/j5fPx4iv6a
— Department of Defense ?? (@DeptofDefense) August 30, 2021
ಅಫ್ಘಾನಿಸ್ತಾನದಲ್ಲಿ 200ಕ್ಕಿಂತಲೂ ಕಡಿಮೆ ಅಮೆರಿಕನ್ನರು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಜನರನ್ನು ಬಹುತೇಕ ಸ್ಥಳಾಂತರ ಮಾಡಿದ್ದೇವೆ. ಆದರೆ ಇನ್ನು 200ಕ್ಕಿಂತಲೂ ಕಡಿಮೆ ಅಮೆರಿಕನ್ನರು ಅಲ್ಲಿಯೇ ಉಳಿದಿದ್ದಾರೆ. ಆದರೆ ಅವರು ಸ್ವ ಇಚ್ಛೆಯಿಂದ ಅಲ್ಲಿಯೇ ಇದ್ದಾರೆ. ಹಾಗಿದ್ದಾಗ್ಯೂ ಕೂಡ ಅವರನ್ನೂ ವಾಪಸ್ ಕರೆತರಲು ಎಲ್ಲ ರೀತಿಯಲ್ಲೂ ಮನವೊಲಿಸಲಾಯಿತು. ಆದರೆ ಅಲ್ಲಿಯೇ ಇರುತ್ತೇವೆ ಎಂದಿದ್ದಾರೆ ಎಂದು ಯುಎಸ್ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್ ತಿಳಿಸಿದ್ದಾರೆ.
ಇದನ್ನೂ ಓದಿ: Snoring: ನಿದ್ರೆಯಲ್ಲಿ ಗೊರಕೆ ಏಕೆ ಬರುತ್ತದೆ? ಸಮಸ್ಯೆಯಿಂದ ಹೊರಬರಲು ಈ ಸಲಹೆಗಳನ್ನು ಅನುಸರಿಸಿ
Side Effects of Kiwi fruit: ಕಿವಿ ಹಣ್ಣನ್ನು ಅತಿ ಹೆಚ್ಚು ಸೇವಿಸುವ ಮುನ್ನ ಅಡ್ಡ ಪರಿಣಾಮಗಳ ಬಗ್ಗೆ ಗಮನಹರಿಸಿ
Published On - 9:32 am, Tue, 31 August 21