ಅಫ್ಘಾನ್​ನಿಂದ ಹೊರಡುವಾಗ ಒಂದು ಬಹುದೊಡ್ಡ, ಒಳ್ಳೆಯ ಕೆಲಸ ಮಾಡಿದ ಯುಎಸ್​ ಸೇನೆ; ವಿಮಾನ, ಮಿಲಿಟರಿ ವಾಹನಗಳೆಲ್ಲ ನಿಷ್ಕ್ರಿಯ

ಅಫ್ಘಾನ್​ನಿಂದ ಆಗಸ್ಟ್​ 31ರೊಳಗೆ ಹೊರಡಬೇಕಾದ ಒತ್ತಡದಲ್ಲಿದ್ದ ಅಮೆರಿಕ ತನ್ನ ಸೇನಾ ಸಲಕರಣೆಗಳು, ಯುದ್ಧ ವಾಹನಗಳನ್ನು ವಾಪಸ್​ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದನ್ನು ಅರಿತಿತ್ತು.

ಅಫ್ಘಾನ್​ನಿಂದ ಹೊರಡುವಾಗ ಒಂದು ಬಹುದೊಡ್ಡ, ಒಳ್ಳೆಯ ಕೆಲಸ ಮಾಡಿದ ಯುಎಸ್​ ಸೇನೆ; ವಿಮಾನ, ಮಿಲಿಟರಿ ವಾಹನಗಳೆಲ್ಲ ನಿಷ್ಕ್ರಿಯ
ಮಿಲಿಟರಿ ವಾಹನಗಳನ್ನು ನಿಷ್ಕ್ರಿಯಗೊಳಿಸಿದ ಯುಎಸ್​ ಸೇನೆ
Follow us
TV9 Web
| Updated By: Lakshmi Hegde

Updated on: Aug 31, 2021 | 12:01 PM

ವಾಷಿಂಗ್ಟನ್​: ಅಫ್ಘಾನಿಸ್ತಾನ (Afghanistan)ದಿಂದ ಯುಎಸ್​ ಸೇನೆ (US Army) ಸಂಪೂರ್ಣವಾಗಿ ಹೊರನಡೆದಿದೆ. ಅಲ್ಲೀಗ ಯುಎಸ್​ ಸೇನೆಯ ಒಬ್ಬೇ ಒಬ್ಬ ಯೋಧ ಕೂಡ ಇಲ್ಲ. ಅದೂ ಅಫ್ಘಾನಿಸ್ತಾನದ ತಾಲಿಬಾನ್ (Taliban Terrorists)​ ನೀಡಿದ್ದ ಆಗಸ್ಟ್​ 31ರ ಗಡುವಿಗೂ ಮೊದಲೇ ಸ್ಥಳಾಂತರ ಪ್ರಕ್ರಿಯೆಯನ್ನೂ ಮುಗಿಸಿ, ತಾವೂ ಸ್ವದೇಶಕ್ಕೆ ಮರಳಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಒಂದು ಆತಂಕ ಇತ್ತು. ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಹಲವು ಯುದ್ಧ ವಿಮಾನಗಳನ್ನು, ಶಸ್ತ್ರಸಜ್ಜಿತ ವಾಹನಗಳು, ಹೈಟೆಕ್​ ರಾಕೆಟ್​ಗಳನ್ನು ಬಿಟ್ಟುಹೋಗಿದೆ. ಅವೆಲ್ಲವೂ ತಾಲಿಬಾನಿಗಳ ಪಾಲಾಗಲಿದೆ. ಇಂಥ ಮುಂದುವರಿದ ಶಸ್ತ್ರಗಳು ಉಗ್ರರ ಪಾಲಾದರೆ ಗತಿಯೇನು? ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಆದರೆ ಅಂದುಕೊಂಡಂತೆ ಆಗಿಲ್ಲ..ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ.

ಯುಎಸ್​ ಸೇನೆ ಕಾಬೂಲ್​ ಬಿಟ್ಟು ಹೊರಡುವುದಕ್ಕೂ ಮೊದಲು, ತನ್ನ ಹಲವು ಮಿಲಿಟರಿ ವಿಮಾನಗಳು, ಅತ್ಯಾಧುನಿಕ ರಾಕೆಟ್​​ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಷ್ಕ್ರಿಯಗೊಳಿಸಿದೆ. ಅಂದರೆ ಅವುಗಳು ಇನ್ನು ಕಾರ್ಯಾಚರಣೆ ನಡೆಸಲು ಸಾಧ್ಯವೇ ಇಲ್ಲದಂತೆ ಮಾಡಿದೆ ಎಂದು ಯುಎಸ್ ಸೇನಾ​ ಜನರಲ್​ ಕೆನೆತ್ ಮೆಕೆಂಜಿ ತಿಳಿಸಿದ್ದಾರೆ. ತಾಲಿಬಾನ್​ ನಿಯಂತ್ರಿತ ಅಫ್ಘಾನಿಸ್ತಾನದಿಂದ ನಾಗರಿಕರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಯುಎಸ್​ ಸೇನೆ 2ವಾರಗಳ ಕಾಲ ನಡೆಸಿ, ಇದೀಗ ಮುಕ್ತಾಯಗೊಳಿಸಿದೆ. ಹಾಗೇ, ಸೇನೆ ಅಲ್ಲಿಂದ ಹೊರಡುವ ಮೊದಲು ಕಾಬೂಲ್​ ಏರ್​ಪೋರ್ಟ್​​ನಲ್ಲಿದ್ದ ಅಮೆರಿಕಕ್ಕೆ ಸೇರಿದ ಸುಮಾರು 73 ವಿಮಾನಗಳನ್ನು ನಿಷ್ಪ್ರಯೋಜಕಗೊಳಿಸಲಾಗಿದೆ. ಅದರಲ್ಲಿದ್ದ ಮಿಲಿಟರಿ ಸಾಧನಗಳನ್ನೆಲ್ಲ ನಿಷ್ಕ್ರಿಯಗೊಳಿಸಿ, ಬಳಕೆಗೆ ಬಾರದಂತೆ ಮಾಡಲಾಗಿದೆ. ಆ ವಿಮಾನಗಳು ಇನ್ನೆಂದೂ ಹಾರಾಡುವುದಿಲ್ಲ. ಅದನ್ನು ಆಪರೇಟ್​ ಮಾಡಲು ಒಬ್ಬನೇ ಒಬ್ಬನಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆಗಸ್ಟ್​ 14ರಿಂದ ಶುರುವಾಗಿತ್ತು ಏರ್​ಲಿಫ್ಟ್ ಅಫ್ಘಾನಿಸ್ತಾನದ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಯುಎಸ್​ ನಾಗರಿಕರನ್ನು ಏರ್​ಲಿಫ್ಟ್ ಮಾಡುವ ಕೆಲಸ ಆಗಸ್ಟ್ 14ರಿಂದಲೇ ಶುರುವಾಯಿತು. ಈ ಹೊತ್ತಲ್ಲ ಪೆಂಟೆಗನ್​ ಅದಕ್ಕಾಗಿ 6000 ಸೈನಿಕರನ್ನು ನಿಯೋಜಿಸಿತು. ಕಾಬೂಲ್​ ಏರ್​ಪೋರ್ಟ್​ನಿಂದ ವಿಮಾನ ಕಾರ್ಯಾಚರಣೆ ಮಾಡಿ, ಜನರನ್ನು ರಕ್ಷಿಸುವ ಜವಾಬ್ದಾರಿ ಈ ಸೈನಿಕರದ್ದಾಗಿತ್ತು. ನಿನ್ನೆ ನಾಗರಿಕರು, ಸೈನಿಕರನ್ನೆಲ್ಲ ಏರ್​ಲಿಫ್ಟ್ ಮಾಡುವ ಕೊನೇ ಕ್ಷಣದವರೆಗೂ ಸರಿಯಾಗಿಯೇ ಇದ್ದ ವಿಮಾನಗಳು, 1 ಮಿಲಿಯನ್ ಡಾಲರ್​​ ಮೌಲ್ಯದ 70 MRAP ಶಸ್ತ್ರಸಜ್ಜಿತ, ಯುದ್ಧತಂತ್ರದ ವಾಹನಗಳು, 27 Humvees (High Mobility Multipurpose Wheeled Vehicle)ಗಳನ್ನೆಲ್ಲವನ್ನೂ ಅಫ್ಘಾನ್​ನಲ್ಲಿಯೇ ಬಿಡಲಾಗಿದೆ. ಆದರೆ ಅವು ಯಾವವೂ ಇನ್ನು ಮುಂದೆ ಬಳಕೆಗೆ ಬರುವುದಿಲ್ಲ ಎಂದು ಜನರಲ್​ ಕೆನೆತ್​ ತಿಳಿಸಿದ್ದಾರೆ.

ಅಫ್ಘಾನ್​ನಿಂದ ಆಗಸ್ಟ್​ 31ರೊಳಗೆ ಹೊರಡಬೇಕಾದ ಒತ್ತಡದಲ್ಲಿದ್ದ ಅಮೆರಿಕ ತನ್ನ ಸೇನಾ ಸಲಕರಣೆಗಳು, ಯುದ್ಧ ವಾಹನಗಳನ್ನು ವಾಪಸ್​ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದನ್ನು ಅರಿತಿತ್ತು. ಹೀಗಾಗಿ, ರಾಕೆಟ್​ ದಾಳಿಯನ್ನು ತಡೆಯುವ C-RAM ವ್ಯವಸ್ಥೆ, ಫಿರಂಗಿಗಳನ್ನೂ ಅಫ್ಘಾನ್​​ನಲ್ಲಿಯೇ ಬಿಡಬೇಕಾಯಿತು. ಆದರೆ ಅದೆಲ್ಲ ಚಲನೆಯಲ್ಲೇ ಇದ್ದರೆ ತಾಲಿಬಾನಿಗಳು ಬಳಸಿಕೊಳ್ಳುವುದು ಗ್ಯಾರಂಟಿ. ಮೊದಲೇ ಅಪಾಯಕಾರಿ ಉಗ್ರರು..ಅವರ ಕೈಗೆ ಮುಂದುವರಿದ ಶಸ್ತ್ರಾಸ್ತ್ರಗಳನ್ನು ಕೊಟ್ಟರೆ ಥೇಟ್​ ಮಂಗಗಳ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗುತ್ತದೆ. ಹಾಗಾಗಿ ತುಂಬ ಬುದ್ಧಿವಂತಿಕೆಯಿಂದ ಮುಂದಡಿಯಿಟ್ಟ ಯುಎಸ್​ ಸೇನೆ, ಅಫ್ಘಾನ್​​ನಿಂದ ಹೊರಡುವಾಗ ಅಲ್ಲಿ ಬಿಟ್ಟು ಬರಬೇಕಾದ ಪ್ರತಿ ಮಿಲಿಟರಿ ವಾಹನವನ್ನೂ ನಿಷ್ಕ್ರಿಯಗೊಳಿಸಿದೆ. ಈ ವಾಹನಗಳು, ವಿಮಾನಗಳನ್ನು ಯಾರಾದರೂ ಮನಸು ಮಾಡಿದರೆ ಮ್ಯೂಸಿಯಂಗಳಲ್ಲಿ ಇಡಬಹುದೇ ಹೊರತು, ಇನ್ನೊಂದು ಬಾರಿ ಬಳಸಲು ಸಾಧ್ಯವೇ ಇಲ್ಲದಂತಾಗಿದೆ.

ಇದನ್ನೂ ಓದಿ: ಸೆರೊ ಸಮೀಕ್ಷೆ, ಹೊಸ ಪರೀಕ್ಷಾ ತಂತ್ರ: ಹೆಚ್ಚುತ್ತಿರುವ ಕೊವಿಡ್ -19 ಪ್ರಕರಣಗಳ ವಿರುದ್ಧ ಕೇರಳ ಹೇಗೆ ಹೋರಾಡುತ್ತಿದೆ?

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ