ದಾವಣಗೆರೆ, (ಜನವರಿ 14): ಕಾಲು ತೆಗೆಯಬೇಕು, ವಿಷಹಾಕಿ ಸಾಯಿಸಲು ಸಂಚು ರೂಪಿಸಿದ್ದಾರೆ ಎಂದು ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ (GM Siddeshwar) ಆತಂಕ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ನನಗೆ ಜೀವ ಬೆದರಿಕೆ ಇದೆ. ನನ್ನ ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಕಾಲು ತೆಗೆಯಬೇಕು, ವಿಷಹಾಕಿ ಸಾಯಿಸಲು ಸಂಚು ರೂಪಿಸಿದ್ದಾರೆ. ಹಾಗಾಗಿ ಎಲ್ಲೇ ಹೋದ್ರೂ ಎಚ್ಚರದಿಂದ ಇರುತ್ತೇನೆ ಎಂದಿದ್ದಾರೆ.
ನನಗೆ ಜೀವ ಬೆದರಿಕೆ ಇದೆ. ನನ್ನ ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಕಾಲು ತೆಗೆಯಬೇಕು, ವಿಷಹಾಕಿ ಸಾಯಿಸಲು ಸಂಚು ರೂಪಿಸಿದ್ದಾರೆ. ಹಾಗಾಗಿ ಎಲ್ಲೇ ಹೋದ್ರೂ ಎಚ್ಚರದಿಂದ ಇರುತ್ತೇನೆ. ನನಗೆ ಯಾರು ಏನೇ ಕೊಟ್ಟರೂ ನಾನು ತಿನ್ನುವುದಿಲ್ಲ. ದಾವಣಗೆರೆಯಿಂದ ತೆಗೆಯಲು ಹೊಂಚು ಹಾಕಿದ್ದಾರೆ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಾಗಿ ಹೊಂಚು ಹಾಕುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಬಹಿರಂಗವಾಗಿಯೇ ಬಹಿರಂಗವಾಗಿ ಆತಂಕ ವ್ಯಕ್ತಪಡಿಸಿದರು.