ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನ: ಮಗಳಿಗೆ ಮೋದಿ ಹೆಸರಿನಲ್ಲಿ ಮನೆ ಕಟ್ಟಿಸಿಕೊಟ್ಟ ರೈತ!
ಮನೆ ನಿರ್ಮಾಣ ಮಾಡಿದ ಹಾಲೇಶ್ ಹೆಸರಿಡಲು ಹುಡುಕಾಟ ನಡೆಸಿದ್ದರಂತೆ. ಅರಂಭದಲ್ಲಿ ಸಹ್ಯಾದ್ರಿ, ಶಿವಾಜಿ ಹೆಸರಿಡಲು ಚಿಂತನೆ ನಡೆಸಿದ್ರು, ಆದರೆ ಮನೆಯವರು ಸೇರಿ ಮೋದಿಯವರ ಹೆಸರಿಡುವಂತೆ ಸೂಚಿಸಿದ್ದಾರೆ.. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಪೋಟೋ ಇಟ್ಟು, ಮನೆಗೆ ನರೇಂದ್ರ ಮೋದಿ ನಿಲಯ ಎನ್ನುವ ನಾಮಫಲಕ ಕೂಡ ಹಾಕಿಸಿದ್ದಾರೆ.
ದಾವಣಗೆರೆ: ಮನೆ ಕಟ್ಟಿದರೆ ಅದಕ್ಕೆ ಒಳ್ಳೆಯ ಹೆಸರು ಇಡಬೇಕು ಎಂದು ಪರದಾಡುತ್ತಾರೆ.. ತಂದೆ ತಾಯಿ ಹೆಸರಾಗಲಿ, ದೇವರ ಹೆಸರಾಗಲಿ ಇಲ್ಲ ಸಾಮಾನ್ಯವಾಗಿ ಮಕ್ಕಳ ಹೆಸರು ಇಡೋದು ಕಾಮನ್.. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮೆಚ್ಚಿನ ರಾಜಕೀಯ ನಾಯಕನ ಹೆಸರು ಇಟ್ಟಿದ್ದು, ಇಡೀ ಊರಿನ ಜನ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಹಾಗಾದ್ರೆ ಯಾರದು ಆ ಹೆಸರು ಅಂತೀರಾ? ಅವರೇ ಪ್ರಧಾನಿ ಮೋದಿ! ಮನೆಯ ಮುಂದಿನ ಗೋಡೆ ಮೇಲೆ ಪ್ರಧಾನಿ ಮೋದಿಯವರ ಪೋಟೊ ಇಟ್ಟಿದ್ದನ್ನು ನೋಡಿ ಇದೇನು ಬಿಜೆಪಿ ಪಕ್ಷದ ಕಚೇರಿನಾ ಅಂದುಕೊಂಡಿದ್ದರೆ ನಿಮ್ಮ ಊಹೇ ತಪ್ಪಾಗುತ್ತದೆ.. ತಮ್ಮ ಮಗಳಿಗಾಗಿ ಮನೆ ನಿರ್ಮಾಣ ಮಾಡಿದ ಓರ್ವ ಅಭಿಮಾನಿ ತಮ್ಮ ನಿವಾಸಕ್ಕೆ ಶ್ರೀ ನರೇಂದ್ರ ಮೋದಿ ನಿಲಯ ಎಂದು ಹೆಸರಿಟ್ಟಿದ್ದಾನೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಗೌಡರ ಹಾಲೇಶ್ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೆಲ್ಸ್ ನಲ್ಲಿ ನೆಲೆಸಿರುವ ಹಾಲೇಶ್ ರವರ ಪುತ್ರಿ ಭುವನೇಶ್ವರಿ ಅವರಿಗಾಗಿಯೇ ಚನ್ನಗಿರಿಯಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ನೂತನ ಮನೆ ನಿರ್ಮಾಣ ಮಾಡಿದ ಹಾಲೇಶ್ ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದರಿಂದ ತಮ್ಮ ನಿವಾಸಕ್ಕೆ ನರೇಂದ್ರ ಮೋದಿ ನಿಲಯ ಎಂದು ನಾಮಕರಣ ಮಾಡಿದ್ದಾರೆ.
ಮನೆ ನಿರ್ಮಾಣ ಮಾಡಿದ ಹಾಲೇಶ್ ಹೆಸರಿಡಲು ಹುಡುಕಾಟ ನಡೆಸಿದ್ದರಂತೆ. ಅರಂಭದಲ್ಲಿ ಸಹ್ಯಾದ್ರಿ, ಶಿವಾಜಿ ಹೆಸರಿಡಲು ಚಿಂತನೆ ನಡೆಸಿದ್ರು, ಆದರೆ ಮನೆಯವರು ಸೇರಿ ಮೋದಿಯವರ ಹೆಸರಿಡುವಂತೆ ಸೂಚಿಸಿದ್ದಾರೆ.. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಪೋಟೋ ಇಟ್ಟು, ಮನೆಗೆ ನರೇಂದ್ರ ಮೋದಿ ನಿಲಯ ಎನ್ನುವ ನಾಮಫಲಕ ಕೂಡ ಹಾಕಿಸಿದ್ದಾರೆ.
ಚನ್ನಗಿರಿಯ ಕಗತೂರು ರಸ್ತೆಯಲ್ಲಿ ಈ ವೈಭವದ ಮನೆ ನಿರ್ಮಾಣ ಮಾಡಲಾಗಿದ್ದು, ಮನೆ ಮುಂದೆ ಪ್ರಧಾನಿ ನರೇಂದ್ರ ಮೋದಿ ಯವರ ಭಾವಚಿತ್ರವನ್ನು ಕೂಡ ಹಾಲೇಶ್ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಅಲ್ಲದೆ ಹಾಲೇಶ್ ಪುತ್ರಿ ಭುವನ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ ವಾಸವಿದ್ದು ಅವರು ಖರೀದಿಸಿದ್ದ ನಿವೇಶನದಲ್ಲಿ ಮನೆ ಕಟ್ಟಿದ್ದಾರೆ. ಮೋದಿಯವರ ದಿಟ್ಟ ಎದೆಗಾರಿಕೆ, ಅಪ್ರತಿಮ ಆಡಳಿತಕ್ಕೆ ಮೆಚ್ಚಿ ಹಾಲೇಶ್, ಆತನ ಪತ್ನಿ ಕಾಂತಾಮಣಿ, ಪುತ್ರಿ ಭುವನ ಸೇರಿ ಇಡೀ ಕುಟುಂಬವೇ ಮೋದಿ ಅಭಿಮಾನಿಗಳಾಗಿದ್ದಾರೆ.
ಅದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಭಾವನ ಅವರು ಅನಿವಾಸಿ ಭಾರತೀಯಳಾಗಿ ಮೋದಿ ಪರ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಜೊತೆ ಸೇರಿ 7 ತಿಂಗಳ ಕಾಲ ಮೋದಿ ಪರ ಕ್ಯಾಂಪೇನ್ ಮಾಡಿದ್ದು, ಅ ಸಂದರ್ಭದಲ್ಲಿ ಪ್ರವಾಸಿ ಭಾರತೀಯ ನಿವಾಸಿಗಳು 5,000 ಮಂದಿ ಬಂದಿದ್ದರು. ಇವರ ಜೊತೆ ಭಾವನ ಕೂಡ ಇದ್ದರು. ಇದೆಲ್ಲದರಿಂದ ಪ್ರಭಾವಿತರಾಗಿ ಮನೆಗೂ ಕೂಡ ಮೋದಿಯವರ ಹೆಸರು ಇಟ್ಟಿದ್ದಾರೆ.
ಒಟ್ಟಾರೆಯಾಗಿ ಇದೀಗ ಹಾಲೇಶ್ ರವರ ಮನೆ ಸಾರ್ವಜನಿಕ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದನ್ನು ಗಮನಿಸಿದ ಅಕ್ಕಪಕ್ಕದ ಗ್ರಾಮಸ್ಥರು ಮನೆಗೆ ಭೇಟಿ ನೀಡಿ ಮನೆಯನ್ನು ವೀಕ್ಷಣೆ ಮಾಡುತ್ತಿದ್ದಾರೆ.. ಮೋದಿ ಬಗ್ಗೆ ಅಭಿಮಾನವನ್ನು ಈ ರೀತಿಯಾಗಿ ತೋರಿಸಿರುವುದು ವಿಶೇಷವಾಗಿದೆ. -ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Tue, 3 May 22