ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿದ ವೃದ್ಧೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Karnataka Rajyotsava 2021: ಹಾವು ಹಿಡಿಯವುದನ್ನು ಸ್ವಂತ ಧೈರ್ಯದಿಂದ ಕಲಿತ ಇವರು, ದಿನಕ್ಕೆ ನಾಲ್ಕರಿಂದ ಐದು ಹಾವು ಹಿಡಿದಿದ್ದು, ದೂರದ ಬಯಲು ಪ್ರದೇಶಗಳಿಗೆ ಬಿಟ್ಟು ಹಾವುಗಳ ಸಂತತಿಯನ್ನು ಉಳಿಸಿರುವ ಹೆಗ್ಗಳಿಕೆ ಪಡೆದಿದ್ದಾರೆ.

ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿದ ವೃದ್ಧೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಸುಲ್ತಾನ್.ಬಿ
Follow us
TV9 Web
| Updated By: preethi shettigar

Updated on: Nov 01, 2021 | 2:05 PM

ದಾವಣಗೆರೆ: ನಾಟಿ ಔಷಧಿ, ಚರ್ಮ ರೋಗ, ಇಸುಬು, ಹುಳಕಡ್ಡಿ, ಹಾವು ಕಚ್ಚಿದ್ದಕ್ಕೆ ಔಷಧಿ, ಹೆರಿಗೆ ಸೇರಿದಂತೆ ಇನ್ನಿತರ ಕೆಲಸದಲ್ಲಿ ಹೆಸರು ಮಾಡಿದ ವೃದ್ಧೆ ಸುಲ್ತಾನ್.ಬಿ ಅವರಿಗೆ 2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಗೋಲ್ಲರಹಟ್ಟಿಯ ಸುಲ್ತಾನ್.ಬಿ, 70 ವರ್ಷದವರಾಗಿದ್ದು, ಸೂಲಗಿತ್ತಿ (ಹೆರಿಗೆ) ಕಾರ್ಯಕ್ಕೆ ಆರೊಗ್ಯ ಇಲಾಖೆಯಿಂದ ಹೆರಿಗೆ ಕಿಟ್ಟ್ ವಿತರಿಸಿದ್ದಾರೆ. ಅಲ್ಲದೇ ಎಲ್ಲಾ ಹೆರಿಗೆಗಳನ್ನು ಆರೋಗ್ಯಕರವಾಗಿ ಯಶಸ್ವೀಯಾಗಿಸಿದ ಹೆಗ್ಗಳಿಕೆ ಇವರದ್ದು.

ಮರೇನಹಳ್ಳಿ ಪೋಸ್ಟ್ ಹನುಮಂತಾಪುರ ಪಂಚಾಯ್ತಿ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆಯಲ್ಲಿ ಜನವರಿ 1 ರಂದು 1951ರಲ್ಲಿ ಸುಲ್ತಾನ್.ಬಿ ಜನಿಸಿದ್ದಾರೆ. ಅವರ ಗಂಡ ಹುಸೆನ್ ಸಾಬ್. ಚರ್ಮ ರೋಗ ,ಹುಳಕಡ್ಡಿ ಮತ್ತು ಇಸುಬಿಗೆ ಔಷದಿಯನ್ನು ತಯಾರಿಸಿ, ದಿನಕ್ಕೆ ಹತ್ತರಿಂದ ಇಪ್ಪತ್ತು ಜನಕ್ಕೆ ಚಿಕಿತ್ಸೆ ನೀಡಿರುತ್ತಾರೆ. ಇವರ ಬಳಿ ಔಷಧಿ ಪಡೆಯಲು ತಮಿಳುನಾಡು, ಬೆಂಗಳೂರು ಮತ್ತು ಮಂಗಳೂರಿನಿಂದ ಜನರು ಬರುತ್ತಾರೆ.

ಪ್ರಶಸ್ತಿ ಪುರಸ್ಕಾರಗಳು ಹಾವು ಹಿಡಿಯವುದನ್ನು ಸ್ವಂತ ಧೈರ್ಯದಿಂದ ಕಲಿತ ಇವರು, ದಿನಕ್ಕೆ ನಾಲ್ಕರಿಂದ ಐದು ಹಾವು ಹಿಡಿದಿದ್ದು, ದೂರದ ಬಯಲು ಪ್ರದೇಶಗಳಿಗೆ ಬಿಟ್ಟು ಹಾವುಗಳ ಸಂತತಿಯನ್ನು ಉಳಿಸಿರುವ ಹೆಗ್ಗಳಿಕೆ ಪಡೆದಿದ್ದಾರೆ.ರೋಟರಿ ಕ್ಲಬ್ ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿಗಳು, ದಾವಣಗೆರೆ ಜಿಲ್ಲಾ ಕಸಾಪ ಹಾಗೂ ತಾಲೂಕು ಕಸಾಪ, ಹಲವು ಸಮಾಜಗಳು ಸುಲ್ತಾನ್.ಬಿಯನ್ನು ಸನ್ಮಾನಿಸಿದೆ.

ಪ್ರಸ್ತುತ ಆರೋಗ್ಯ ಸುಸ್ತಿತಿ ನೆನಪಿನ ಶಕ್ತಿ ದುರ್ಬಲವಾಗಿದೆ‌. ಮುರಕಲು ಹೆಂಚಿನ ಮನೆಯಲ್ಲಿ ಒಂಟಿಯಾಗಿ ವಾಸಿಸುವ ಇವರು, ಇಂದಿಗೂ ದಿಟ್ಟತನದಿಂದ ಹಮಾಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜಗಳೂರು ಪಟ್ಟಣದಲ್ಲಿ ಸುಲ್ತಾನ್.ಬಿ ಪತಿ ಹಾಗೂ ಪುತ್ರ ಹಮಾಲಿ‌ ಕೆಲಸ ಮಾಡುತ್ತಿದ್ದರು. ಅವರಿಬ್ಬರು ಎಕ ಕಾಲಕ್ಕೆ ಸಾವನ್ನಪ್ಪಿದರು‌. ಇಂತಹ ಪರಿಸ್ಥಿತಿಯಲ್ಲಿ ತಾವೇ ಎತ್ತಿನ ಗಾಡಿ ಇಟ್ಟುಕೊಂಡು ಹಮಾಲಿ ಮಾಡುತ್ತಿದ್ದಾರೆ ಸುಲ್ತಾನ್ ಬಿ. ಹೀಗೆ ದಿಟ್ಟತನದಿಂದ ನಿಂತರ ಹೋರಾಟದ ಬದುಕು ನಡೆಸಿದ್ದು ಇವರ ಸಾಧನೆ.

ಇದನ್ನೂ ಓದಿ: ಕರ್ನಾಟಕ ರಾಜ್ಯದ ಮೊದಲ ಹಿಮೋಫಿಲಿಯಾ ಸಂಸ್ಥೆ: 32 ವರ್ಷಗಳ ಸಾರ್ಥಕ ಸೇವೆಗೆ ಒಲಿದು ಬಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Karnataka Rajyotsava 2021 LIVE: ಇಂದು 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮ; ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ