ದಾವಣಗೆರೆ: ದೇಶದಲ್ಲಿ ಈಗಲೂ 1.78 ಕೋಟಿ ಜನ ಮಲ ಹೊರುವ ಪದ್ಧತಿಯಲ್ಲಿದ್ದಾರೆ. ಎಂಟು ಕೋಟಿ ಜನ ಮಲವನ್ನು ವಾಹನದಲ್ಲಿ(vehicle) ಬೇರೆ ಕಡೆ ಸಾಗಿಸುತ್ತಾರೆ. ಪ್ರತಿ ಐದು ದಿನಕ್ಕೊಮ್ಮ ಪೌರ ಕಾರ್ಮಿಕ ಸಾವನ್ನಪ್ಪುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಅದು ಹೇಗೆ ಸ್ವಚ್ಛ ಭಾರತ್(swachh barath) ಅಂತಾ ಮಾತಾಡುತ್ತಾರೆ ಎಂದು ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆದ ದಲಿತ ಸಮಾವೇಶದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ(Baraguru Ramachandrappa) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಕಳೆದ 45 ವರ್ಷಗಳಲ್ಲಿ ಕಂಡು ಅರಿಯದ ನಿರುದ್ಯೋಗ ದೇಶದಲ್ಲಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ 1.47 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಈ ದೇಶದ ಉದ್ಯಮಿಗಳ ಆದಾಯ ಶೇ. 35 ರಷ್ಟು ಹೆಚ್ಚಾಗಿದೆ. ಕೊರೊನಾ ಕಾಲದಲ್ಲಿ ಸಹ ದುಡ್ಡು ಗಳಿಸಿದ್ದಾರೆ. ಅಂದರೆ ತಿಳಿದುಕೊಳ್ಳಿ ಇವರು ಏನು ಮಾಡಿರಬೇಕು. ಈಗ ನನಗೆ ಸಂಶಯ ಬರುತ್ತಿದೆ. ವಿಧಾನಸಭೆಯಲ್ಲಿ ಮಠವಿದೇಯೋ ಅಥವಾ ಮಠವಿದೇಯೇ ವಿಧಾನ ಸಭೆ ಇದೆಯೋ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಎಕ ಸಂಸ್ಕೃತಿ, ಎಕ ವ್ಯಕ್ತಿ, ಎಕ ಧರ್ಮ ಕೇಂದ್ರಿತ ವಾದ ಮುನ್ನೆಲೆಗೆ ಬರುತ್ತಿದೆ. ಆದರೆ ಇದು ಬಹು ಸಂಸ್ಕೃತಿ ದೇಶ. ಎಂತಹ ಇಂದಿರಾ ಗಾಂಧಿಯನ್ನೇ ಈ ದೇಶದಲ್ಲಿ ಸೋಲಿಸಲಾಗಿದೆ. ಹೀಗಾಗಿ ಎಕ ಧರ್ಮ, ಎಕ ವ್ಯಕ್ತಿ, ಸಿದ್ಧಾಂತ ಇಲ್ಲಿ ನಡೆಯಲ್ಲ ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಇದನ್ನೂ ಓದಿ:
B Sriramulu: ಬಳ್ಳಾರಿ ಸ್ಮಶಾನದಲ್ಲಿ ಸಚಿವ ಶ್ರೀರಾಮುಲು ಸ್ವಚ್ಛತಾ ಕಾರ್ಯ, 30 ಸ್ಮಶಾನಗಳ ಅಭಿವೃದ್ಧಿಗೆ ಸಂಕಲ್ಪ
ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಮತ್ತೊಂದು ಜೀವ ಬಲಿ; ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ