B Sriramulu: ಬಳ್ಳಾರಿ ಸ್ಮಶಾನದಲ್ಲಿ ಸಚಿವ ಶ್ರೀರಾಮುಲು ಸ್ವಚ್ಛತಾ ಕಾರ್ಯ, 30 ಸ್ಮಶಾನಗಳ ಅಭಿವೃದ್ಧಿಗೆ ಸಂಕಲ್ಪ

b sriramulu: ಬಳ್ಳಾರಿಯ 30 ಸಶ್ಮಾನಗಳ ಅಭಿವೃದ್ಧಿ ಕ್ರಮ‌ ಕೈಗೊಂಡಿರುವೆ. ಸಶ್ಮಾನಗಳ ಅಭಿವೃದ್ಧಿಗೆ ಕಾಯಕಲ್ಪ ಕಲ್ಪಿಸುವೆ. ಸಶ್ಮಾನದಲ್ಲಿ ಅಂತ್ಯಕ್ರಿಯೆ ಆಗಮಿಸುವವರಿಗೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಲು ಪಾಲಿಕೆ ಆಯುಕ್ತರಿಗೆ ತಿಳಿಸಿರುವೆ ಎಂದು ಸಚಿವ ಶ್ರೀರಾಮುಲು ಹೇಳಿದರು.

B Sriramulu: ಬಳ್ಳಾರಿ ಸ್ಮಶಾನದಲ್ಲಿ ಸಚಿವ ಶ್ರೀರಾಮುಲು ಸ್ವಚ್ಛತಾ ಕಾರ್ಯ, 30 ಸ್ಮಶಾನಗಳ ಅಭಿವೃದ್ಧಿಗೆ ಸಂಕಲ್ಪ
ಬಳ್ಳಾರಿ ಸ್ಮಶಾನದಲ್ಲಿ ಸಚಿವ ಶ್ರೀರಾಮುಲು ಸ್ವಚ್ಛತಾ ಕಾರ್ಯ, 30 ಸ್ಮಶಾನಗಳ ಅಭಿವೃದ್ಧಿಗೆ ಸಂಕಲ್ಪ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 19, 2022 | 10:31 AM

ಬಳ್ಳಾರಿ: ಸಾರಿಗೆ ಖಾತೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ (bellary) ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು (B Sriramulu) ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಹರಿಶ್ಚಂದ್ರ ಘಾಟ್ ಗೆ (graveyard) ಶನಿವಾರ ನಸುಕಿನ ಜಾವವೇ ಭೇಟಿ ನೀಡಿ ಸ್ವತಃ ಜೆಸಿಬಿ ಮೂಲಕ ಸ್ವಚ್ಚತಾ ಕಾರ್ಯ (Swachhta) ನಡೆಸಿದರು.

ಪ್ರತಿದಿನದ ಮುಂಜಾನೆ ವಾಕಿಂಗ್ ನಂತೆ ಇಂದು ಸಹ ನಸುಕಿನ ಜಾವವೇ ವಾಕಿಂಗ್ ಮಾಡುತ್ತಾ ಶಾಸಕ ಸೋಮಶೇಖರ್ ರೆಡ್ಡಿ ಜೊತೆ ಸಶ್ಮಾನಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು, ಕೈಗೊಳ್ಳಬೇಕಾದ ಸ್ವಚ್ಛತಾ ಕಾರ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳ್ಳಾರಿ ನಗರದಲ್ಲಿರುವ 30 ಸ್ಮಶಾನಗಳಲ್ಲಿ ಈಗಾಗಲೇ 13 ಶವಸಂಸ್ಕಾರ ಸ್ಥಳಗಳಲ್ಲಿ ವಿದ್ಯುತ್ ದೀಪಗಳು, ರಸ್ತೆ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದೇ ರೀತಿ ಉಳಿದ ಸ್ಮಶಾನಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದು ತಿಳಿಸಿದರು. ಈ ಹಿಂದೆ ಸಮಾಜ ಕಲ್ಯಾಣ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ಮಶಾನಗಳ ಅಭಿವೃದ್ಧಿಗೆ ಒತ್ತು ನೀಡಿದನ್ನು ಇದೇ ಸಂದರ್ಭದಲ್ಲಿ ಸಚಿವರು ಸ್ಮರಿಸಿಕೊಂಡರು.

ಸ್ವಚ್ಛತೆ ಪರಿಶೀಲನೆ ನಡೆಸುವುದರ ಜೊತೆಗೆ ಸ್ವತಃ ಜೆಸಿಬಿ ಚಲಾಯಿಸಿ ಸ್ವಚ್ಛತೆ: ಸ್ವಚ್ಛತೆ ಪರಿಶೀಲನೆ ನಡೆಸುವುದರ ಜೊತೆಗೆ ಸ್ವತಃ ಜೆಸಿಬಿ ಚಲಾಯಿಸಿ ಸ್ವಚ್ಛತೆ ಮಾಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಇತರರು ಇದ್ದರು.

ಶಾಸಕ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಸೇರ್ಪಡೆ ವದಂತಿ: ಶ್ರೀರಾಮುಲು ಸ್ಪಷ್ಟನೆ ಈ ಮಧ್ಯೆ, ಶಾಸಕ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಸೇರ್ಪಡೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಶ್ರೀರಾಮುಲು ಅವರು ಸೋಮಶೇಖರ ರೆಡ್ಡಿ ಬಿಜೆಪಿ ಬಿಟ್ಟು ಹೋಗಲ್ಲ ಎಂದು ನಗುತ್ತಾ ತಿಳಿಸಿದರು. ಸೋಮಶೇಖರ್ ರೆಡ್ಡಿ ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರವಾಗಿ ಮಾತನಾಡಿದ ರಾಮುಲು ವಿಧಾನಸಭೆಯಲ್ಲಿ ನಾಯಕರ ಜೊತೆ ಮಾತನಾಡುವ ವೇಳೆ ಸೀರಿಯಸ್ ಆಗಿ ಮಾತನಾಡಿಲ್ಲ. ಕಾಂಗ್ರೆಸ್ ಶಾಸಕರು ಸಹ ನನ್ನ ಜೊತೆಗೆ ಇರುತೀವಿ ಅಂತಾರೆ. ಸಿದ್ದರಾಮಯ್ಯ ಸಹ ಅನೇಕ ಬಾರಿ ಹೇಳಿದ್ದಾರೆ. ನಮಗೂ ಅವಕಾಶ ಕೊಡಿ. ನಿಮ್ಮ ಜೊತೆ ಬರತೇವಿ ಅಂತಾರೆ! ಸೋಮಶೇಖರ್ ರೆಡ್ಡಿ ಈ ಭಾಗದಲ್ಲಿ ಬಿಜೆಪಿ ಪಕ್ಷದ ಶಕ್ತಿಯಾಗಿದ್ದಾರೆ. ಸೋಮಶೇಖರ್ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಬರಲ್ಲ ಎಂದು ಸ್ಪಷ್ಟಪಡಿಸಿದರು.

ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ವೈದ್ಯರು, ಸಿಬ್ಬಂದಿಗಳ ನಿರ್ಲ್ಯಕ್ಷದಿಂದ ರೋಗಿ ಸಾವು ವಿಚಾರವಾಗಿ ಮಾತನಾಡಿದ ಸಚಿವ ಶ್ರೀರಾಮುಲು ಕಳೆದ ರಾತ್ರಿ ಹೃದಯಾಘಾತದಿಂದ ಆಸ್ಪತ್ರೆಗೆ ಬಂದ ರೋಗಿಗೆ ಚಿಕಿತ್ಸೆ ಸಿಗದೇ ರೈತ ಸಾವು ಪ್ರಕರಣದಲ್ಲಿ ಚಿಕಿತ್ಸೆ ಸಿಗದೇ ರೈತ ಸಾವನಪ್ಪಿರುವ ಬಗ್ಗೆ ವರದಿ ತರಿಸಿಕೊಳ್ಳುವೆ. ಆಸ್ಪತ್ರೆಯಲ್ಲಿ ಬಡವರಿಗೆ 24 ಗಂಟೆಯೂ ಸೂಕ್ತ ಚಿಕಿತ್ಸೆ ನೀಡಬೇಕು. ಈ ಕುರಿತು ವರದಿ ತರಿಸಿಕೊಂಡು ಕ್ರಮ‌ ಕೈಗೊಳ್ಳುವೆ. ಪ್ರಾಥಮಿಕ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಕುರಿತು ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸುವೆ ಎಂದರು.

Also Read: Devaloka Apsara Rambha: ದೇವ ನರ್ತಕಿ ರಂಭೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸಿದ್ದು ಹೇಗೆ ಮತ್ತು ಏಕೆ?

Also Read: RBI Recruitment 2022: ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ 950 ನೇಮಕಾತಿಗಳು, ಯಾರೆಲ್ಲ ಅರ್ಜಿ ಹಾಕಬಹುದು, ವಿವರ ಏನಿದೆ?

Published On - 8:38 am, Sat, 19 February 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ