Devaloka Apsara Rambha: ದೇವ ನರ್ತಕಿ ರಂಭೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸಿದ್ದು ಹೇಗೆ ಮತ್ತು ಏಕೆ?

Banana tree: ಪುರಾಣ ಕತೆಯ ಮುಂದುವರಿದ ಭಾಗವಾಗಿ ಹೇಳುವುದಾದರೆ ರಂಭೆ ತನ್ನ ತಪ್ಪು ತಿಳಿದುಕೊಂಡು, ತನ್ನನ್ನು ಮನ್ನಿಸುವಂತೆ ಮಹಾವಿಷ್ಣುವಿನಲ್ಲಿ ಬೇಡಿಕೊಳ್ಳುತ್ತಾಳೆ. ಆಗ ದೇವರಿಗೆ ನೈವೇದ್ಯವಾಗಿ ಇಡುವ ಅರ್ಹತೆಯನ್ನು ರಂಭೆಗೆ ಮಹಾವಿಷ್ಣು ಪ್ರಸಾದಿಸಿದ ಎಂಬ ಮಾತು ಇದೆ. ಇನ್ನು, ರಂಭೆ ರೂಪದ ಬಾಳೆಗಿಡದ ಜೊತೆ ಮದುವೆ ಮಾಡಿಸುವುದೂ ಉಂಟು. ಮದುವೆ ಎಬುದು ನನೆಗುದಿಗೆ ಬಿದ್ದು ಯಾವ ಕಾಲವದರೂ ಕಂಕಣ ಭಾಗ್ಯ ಕೂಡಿಬಾರದಿದ್ದರೆ ಬಾಳೆಗಿಡದ ಜೊತೆ ಮದುವೆ ಮಾಡಿಸುತ್ತಾರೆ.

Devaloka Apsara Rambha: ದೇವ ನರ್ತಕಿ ರಂಭೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸಿದ್ದು ಹೇಗೆ ಮತ್ತು ಏಕೆ?
ದೇವ ನರ್ತಕಿ ರಂಭೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸಿದ್ದು ಹೇಗೆ ಮತ್ತು ಏಕೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 19, 2022 | 6:59 AM

ಹಿಂದೂ ಪುರಾಣಗಳಲ್ಲಿ (Hindu mythology) ದೇವಲೋಕದ ಅಪ್ಸರೆಯರ ಬಗ್ಗೆ ನಾನಾ ಕತೆಗಳು ಚಾಲ್ತಿಯಲ್ಲಿವೆ. ರಂಭೆ-ಊರ್ವಶಿ-ಮೇನಕೆ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಅಂತಹುದರಲ್ಲಿ ಇಲ್ಲಿ ರಂಬೆಯ ಬಗ್ಗೆ ಒಂದು ಕತೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ತನ್ಮೂಲಕ ಬಾಳೆಹಣ್ಣಿಗೂ ಅಂದರೆ ಬಾಳೆ ಗಿಡಕ್ಕೂ (banana tree) ಮತ್ತು ರಂಭೆಗೂ (Devaloka dancer Apsara rambha) ಇರುವ ಹೋಲಿಕೆ ಏನೆಂಬುದನ್ನು ತಿಳಿಯೋಣ. ಇಲ್ಲಿ ಮತ್ತೊಂದು ವಿಚಾರ ಬಾಳೆ ಹಣ್ಣು, ಗಿಡದ ಬಗ್ಗೆಯೂ ನಾನಾ ಕತೆಗಳು, ಸಂದೇಹಗಳು ಇವೆ. ಅದನ್ನೆಲ್ಲ ತಿಳಿಯುವ ಪ್ರಯತ್ನ ಇಲ್ಲಿದೆ.

ತಾಂಬೂಲದಲ್ಲಿ ಜಂಟಿ ಬಾಳೆಹಣ್ಣು ಇರಬಾರದು ಅನ್ನುತ್ತಾರೆ. ಏಕೆಂದರೆ ಅವಳಿ ಬಾಳೆಹಣ್ಣಿನಲ್ಲಿ ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕದಲ್ಲೇ ಬರುತ್ತದೆ. ತಾಂಬೂಲದಲ್ಲಿ ಒಂದೇ ಒಂದು ಹಣ್ಣು ಇಡುವಂತಿಲ್ಲವಲ್ಲ. ಹಾಗಾಗಿ ತಾಂಬೂಲದಲ್ಲಿ ಈ ರೀತಿಯ ಜಂಟಿ ಬಾಳೆಹಣ್ಣು ಇಟ್ಟರೆ ಅದು ಒಂದು ಎಂಬ ಲೆಕ್ಕ ಹಾಗಾಗಿ ತಾಂಬೂಲದಲ್ಲಿ ಅವಳಿ ಬಾಳೆಹಣ್ಣು ಕೊಡಬಾರದು.

ಈ ಸಂಗತಿ ಪಕ್ಕಕ್ಕಿಟ್ಟರೆ, ಈ ರೀತಿಯ ಅವಳಿ ಬಾಳೆಹಣ್ಣು ದೇವರಿಗೆ ಇಡಬಾರದೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ತಿಳಿದವರು ಈ ರೀತಿ ಉತ್ತರ ಕೊಡುತ್ತಾರೆ. ಅದು ನಿಜಕ್ಕೂ ಕುತೂಹಲಕಾರಿಯಾಗಿದೆ.

ಬಾಳೆಗಿಡ ಎಂದರೆ ಬೇರೆ ಯಾರೋ ಅಲ್ಲ… ಸಾಕ್ಷಾತ್ ದೇವ ನರ್ತಕಿ ರಂಭೆಯ ಅವತಾರ! ಶ್ರೀ ಮಹಾವಿಷ್ಣುವಿನ ಬಳಿ ರಂಭೆ ತಾನೇ ಸೌಂದರ್ಯವತಿ ಎಂದು ಅಹಂಕಾರದಿಂದ ನಡೆದುಕೊಳ್ಳುತ್ತಾಳೆ. ಆಗ ಮಹಾವಿಷ್ಣು ರಂಭೆಗೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸು ಎಂದು ಶಪಿಸಿದ. ಹಾಗಾಗಿ ಕವಿವರ್ಯರು ಬಾಳಗಿಡ, ಬಾಳೆದಿಂಡಿನಲ್ಲಿ ಹೆಣ್ಣಿನ ರೂಪ ಕಾಣುತ್ತಾರೆ!

ಇನ್ನು, ಪುರಾಣ ಕತೆಯ ಮುಂದುವರಿದ ಭಾಗವಾಗಿ ಹೇಳುವುದಾದರೆ ರಂಭೆ ತನ್ನ ತಪ್ಪು ತಿಳಿದುಕೊಂಡು, ತನ್ನನ್ನು ಮನ್ನಿಸುವಂತೆ ಮಹಾವಿಷ್ಣುವಿನಲ್ಲಿ ಬೇಡಿಕೊಳ್ಳುತ್ತಾಳೆ. ಆಗ ದೇವರಿಗೆ ನೈವೇದ್ಯವಾಗಿ ಇಡುವ ಅರ್ಹತೆಯನ್ನು ರಂಭೆಗೆ ಮಹಾವಿಷ್ಣು ಪ್ರಸಾದಿಸಿದ ಎಂಬ ಮಾತು ಇದೆ. ಇನ್ನು, ರಂಭೆ ರೂಪದ ಬಾಳೆಗಿಡದ ಜೊತೆ ಮದುವೆ ಮಾಡಿಸುವುದೂ ಉಂಟು. ಮದುವೆ ಎಬುದು ನನೆಗುದಿಗೆ ಬಿದ್ದು ಯಾವ ಕಾಲವದರೂ ಕಂಕಣ ಭಾಗ್ಯ ಕೂಡಿಬಾರದಿದ್ದರೆ ಬಾಳೆಗಿಡದ ಜೊತೆ ಮದುವೆ ಮಾಡಿಸುತ್ತಾರೆ.

ಹಾಗಾಗಿ ಪವಿತ್ರವಾದ ಹಣ್ಣಿನಲ್ಲಿ ನಾವು ದೋಷಗಳನ್ನು ಹುಡುಕಬೇಕಾದ ಅಗತ್ಯವಿಲ್ಲ. ಅವಳಿ ಬಾಳೆಹಣ್ಣನ್ನು ಯಾವುದೇ ಅಭ್ಯಂತರವಿಲ್ಲದೆ ದೇವರಿಗೆ ಅರ್ಪಿಸಬಹುದು. ಆದರೆ ತಾಂಬೂಲದಲ್ಲಿ ಮಾತ್ರ ಜಂಟಿ ಬಾಳೆಹಣ್ಣು ಇಡಬಾರದು.

Also Read: ತಣ್ಣೀರು ಸ್ನಾನ ಒಳ್ಳೆಯದಾ? ಬಿಸಿ ನೀರಾ?; ಈ ರೀತಿಯ ಸ್ನಾನದಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?

Also Read: ತುಂಡುಡುಗೆ ತೊಟ್ಟು ಮಿಂಚಿದ ಆಲಿಯಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ