
ದಾವಣಗೆರೆ, (ಜೂನ್ 20): ವಿಧಿಯಾಟವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದಕ್ಕೆ ಪೂರಕವೆಂಬಂತೆ ತಂಗಿಯ ಅಂತ್ಯಕ್ರಿಯೆಗೆ (Sister funeral )ತೆರಳುತ್ತಿದ್ದ ಅಕ್ಕ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಜಿಗಳಿ ಗ್ರಾಮದ ಕಂಬಳಿ ಚನ್ನಬಸಮ್ಮ (68) ನಿಧನರಾಗಿದ್ದು, ಇವರ ಅಂತ್ಯಸಂಸ್ಕಾರಕ್ಕೆಂದು ಹೊರಟ್ಟಿದ್ದ ಮೃತ ಚನ್ನಬಸಮ್ಮಳ ಅಕ್ಕ ಹರಳಹಳ್ಳಿ ನೀಲಮ್ಮ ಸಹ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ದಾವಣಗೆರೆ (Davanagere) ಜಿಲ್ಲೆ ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂಗಿ ಅಂತ್ಯಸಂಸ್ಕರಕ್ಕೆ ಬಂದಿದ್ದ ಸಂಬಂಧಿಕರು ಅಕ್ಕನ ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳಬೇಕಾಯ್ತು.
ತಂಗಿ ಚನ್ನಬಸಮ್ಮ ಅಂತ್ಯಸಂಸ್ಕಾರಕ್ಕೆಂದು ಅಕ್ಕ ನೀಲಮ್ಮ ಬೈಕ್ ನಲ್ಲಿ ಜಿಗಳಿ ಗ್ರಾಮಕ್ಕೆ ಹೊರಟ್ಟಿದ್ದರು. ಆದ್ರೆ, ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ ನೀಲಮ್ಮ ಇದ್ದ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ನೀಲಮ್ಮ ಸಾವನ್ನಪ್ಪಿದ್ದು, ಸಂಬಂಧಿಕರು ಮೊದಲು ತಂಗಿ ಚನ್ನಬಸಮ್ಮಳ ಅಂತ್ಯಕ್ರಿಯೆ ಮುಗಿಸಿ ಬಳಿಕ ಅಕ್ಕ ನೀಲಮ್ಮಳ ಅಂತ್ಯಸಂಸ್ಕಾರವನ್ನು ಹರಳಹಳ್ಳಿಯಲ್ಲಿ ನೆರವೇರಿಸಿದರು.
ಕೆಎ 14, ಎಂಎ 0209 ನಂಬರಿನ ಭದ್ರಾವತಿ ಮೂಲದ ಅರುಣ್ ಕುಮಾರ್ ಎಂಬಾತ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದೆ ಈ ದುರ್ಘಟನೆ ಕಾರಣ ಎಂದು ತಿಳಿದುಬಂದಿದೆ. ಈ ಸಂಬಂಧ ಮಲೇಬೆನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಕೃಷ್ಣ ನದಿಗೆ ಬಾಗಿಲ ಅರ್ಪಿಸಲು ಹೋಗಿದ್ದ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾಳೆ. ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ್ದಿದ್ದು, ಮಾಂಜರಿ ಗ್ರಾಮದ ಸಂಗೀತಾ ಮಾಂಜರೇಕರ್(40) ನೀರುಪಾಲಾಗಿದ್ದ ಮಹಿಳೆ. ಜೂನ್ 17ರಂದೇ ಕೊಚ್ಚಿಕೊಂಡು ಹೋಗಿದ್ದು ಇದುವರೆಗೂ ಶವ ಸಿಕ್ಕಿಲ್ಲ. ಹೀಗಾಗಿ ನಾಲ್ಕನೇ ದಿನವೂ ಮಹಿಳೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕೃಷ್ಣಾ ನದಿಯಲ್ಲಿ 6 ಕಿಮೀ ದೂರದ ವರೆಗೂ ಎಸ್‌ಡಿಆರ್‌ಎಫ್ ಸಿಬ್ಬಂದಿಯಿಂದ ಶೋಧ ಕಾರ್ಯಾ ನಡೆಸಿದರೂ ಸಹ ಸಿಕ್ಕಿಲ್ಲ.