AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಕನ ಸಾವಿಗೆ ಕಾರಣರಾದ ಐವರು ಶಿಕ್ಷಕರು ಮತ್ತೆ ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು

ಶಿಕ್ಷಕನ ಸಾವಿಗೆ ಕಾರಣರಾದ ಐವರು ಶಿಕ್ಷಕರು ಮತ್ತೆ ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Jun 19, 2026 | 5:01 PM

Share

ದಾವಣಗೆರೆ ಜಿಲ್ಲೆಯ ಕೊಕ್ಕನೂರು ಶಾಲೆಯ ಮುಖ್ಯಶಿಕ್ಷಕ ಜಯಪ್ಪ ಆತ್ಮಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ಮಾನಸಿಕ ಹಿಂಸೆ ಮತ್ತು ಜಾತಿ ನಿಂದನೆ ಆರೋಪದ ಮೇಲೆ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಐವರು ಶಿಕ್ಷಕರು ಸೇರಿ ನಾಪತ್ತೆಯಾಗಿದ್ದಾರೆ. ಗ್ರಾಮಸ್ಥರು ಆರೋಪಿ ಶಿಕ್ಷಕರನ್ನು ಶಾಲೆಗೆ ಮರಳಿ ಸೇರಿಸಿಕೊಳ್ಳದಂತೆ ಪ್ರತಿಭಟಿಸುತ್ತಿದ್ದಾರೆ.

ದಾವಣಗೆರೆ, ಜೂನ್​​ 19: ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ(54) ಆತ್ಮಹತ್ಯೆ ಕೇಸ್​​​ಗೆ ಸಂಬಂಧಿಸಿದಂತೆ ನಿನ್ನೆ 11 ಜನರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಜಯಪ್ಪ ಪತ್ನಿ ದೂರು ಆಧರಿಸಿ ಮಲೇಬೆನ್ನೂರು ಠಾಣೆಯಲ್ಲಿ ಮಾನಸಿಕ ಹಿಂಸೆ, ಕಿರುಕಳ ಹಾಗೂ ಜಾತಿನಿಂದನೆ ಆರೋಪದಡಿ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ, ರಂಜನಿ, ಚೇತನಾ, ಮಹಾಂತೇಶಗೌಳಿ ಮತ್ತು ಅಡುಗೆ ಸಹಾಯಕಿಯರಾದ ಸುಮಾ, ಚೆನ್ನಮ್ಮ, ವಿಜಯಮ್ಮ, ರೂಪಾ ಹಾಗೂ ಸಿಆರ್​ಪಿ ಮತ್ತು ಬಿಆರ್​ಪಿ ಸೇರಿ ಒಟ್ಟು 11 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಅತ್ತ ದೂರು ದಾಖಲಾಗುತ್ತಿದ್ದಂತೆ ಇತ್ತ ಶಿಕ್ಷಕರು ಮತ್ತು ಅಡುಗೆ ಸಹಾಯಕಿಯವರು ತಲೆಮರೆಸಿಕೊಂಡಿದ್ದಾರೆ. ಇನ್ನು ಶಿಕ್ಷಕನ ಸಾವಿಗೆ ಕಾರಣರಾದ 5 ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us