ಜಯಮಾಲಾ ಮಗಳು ಸೌಂದರ್ಯ ಮದುವೆಗೆ ಪತ್ನಿಯೊಂದಿಗೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್

Updated on: Feb 07, 2025 | 5:17 PM

ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಮದುವೆಯೂ ಇವತ್ತೇ ಜರುಗಿದೆ. ರಾಣಾ ಕೈಹಿಡಿದಿರುವ ಯುವತಿಯ ಹೆಸರು ಸಹ ರಕ್ಷಿತಾ ಆಗಿದೆ. ಪ್ರಾಯಶಃ ಈ ಮದುವೆಯನ್ನು ನೆನಪಿಸಿಕೊಂಡೇ ಡಿಸಿಎಂ ಶಿವಕುಮಾರ್ ಅವರು ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳು ನೆರವೇರುತ್ತಿವೆ ಎಂದಿರಬಹುದು. ರಕ್ಷಿತಾ ಮತ್ತು ರಾಣಾ ಮದುವೆಯೂ ಅರಮನೆ ಮೈದಾನದಲ್ಲಿ ನಡೆಯಿತು.

ಜಯಮಾಲಾ ಮಗಳು ಸೌಂದರ್ಯ ಮದುವೆ ರಿಷಭ್ ಕೆ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಪತ್ನಿ ಉಷಾ ಶಿವಕುಮಾರ್ ಅವರೊಂದಿಗೆ ಆಗಮಿಸಿ ವಧು ವರರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಶಿವಕುಮಾರ್, ಇವತ್ತು ಶುಭದಿನ, ಪವಿತ್ರ ಮತ್ತು ಶುಭಲಗ್ನಕ್ಕೆ ಅತ್ಯಂತ ಪ್ರಶಸ್ತವಾದ ದಿನವಾಗಿರುವುದರಿಂದ ಬಹಳಷ್ಟು ಮದುವೆಗಳು ನಡೆಯುತ್ತಿವೆ, ಹಾಗಾಗಿ ಜಯಮಾಲಾ ಅವರ ಕುಟುಂಬ, ಸುರೇಶ್, ವಿಶ್ವನಾಥ್ ಹಾಗೂ ಇಬ್ಬರು ರಾಮಚಂದ್ರಗಳಿಗೆ ಶುಭ ಹಾರೈಸೋಣ ಅಂತ ಪತ್ನಿಯೊಂದಿಗೆ ಬಂದಿರುವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್