ನೂರು ವರ್ಷಗಳ ಸಮಸ್ಯೆಗಳನ್ನು ಮೋದಿ ಬಗೆಹರಿಸಿದ್ದಾರೆ, ಬೇರೆ ಯಾವ ಸಮಸ್ಯೆಗಳು ಉಳಿದಿವೆ: ಗೋವಿಂದ ಕಾರಜೋಳ

| Updated By: ganapathi bhat

Updated on: Apr 05, 2022 | 1:07 PM

ಕಾಂಗ್ರೆಸ್‌ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕೆ ಬಂದು 60 ವರ್ಷ ಆಡಳಿತ ನಡೆಸಿದರು. ಆಗ ಸಮಸ್ಯೆಗಳನ್ನು ಹಾಗೆ ಇಟ್ಟುಕೊಂಡು, ತೋರಿಸಿಕೊಂಡು ಆಡಳಿತ ಮಾಡಿದ್ರು ಎಂದು ಕಾರಜೋಳ ಮಾತನಾಡಿದ್ದಾರೆ.

ನೂರು ವರ್ಷಗಳ ಸಮಸ್ಯೆಗಳನ್ನು ಮೋದಿ ಬಗೆಹರಿಸಿದ್ದಾರೆ, ಬೇರೆ ಯಾವ ಸಮಸ್ಯೆಗಳು ಉಳಿದಿವೆ: ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Follow us on

ಬಾಗಲಕೋಟೆ: ದೇಶದ ಜನರಿಗೆ ಮುಖ ತೋರಿಸಲಾಗದೇ ಪ್ರಧಾನಿ ನರೇಂದ್ರ ಮೋದಿ ಗಡ್ಡ ಬಿಟ್ಟಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಮತಾ ಬ್ಯಾನರ್ಜಿ ಹೇಳಿಕೆ ವಿರುದ್ಧ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೆಮ್ಮೆ ಪಡಬೇಕು. ನೂರು ವರ್ಷಗಳ ಸಮಸ್ಯೆಗಳನ್ನು ಮೋದಿ ಬಗೆಹರಿಸಿದ್ದಾರೆ. ಕಾಶ್ಮೀರ 370ನೇ ವಿಧಿ, ರಾಮ ಮಂದಿರ ಸಮಸ್ಯೆಯನ್ನು ಮೋದಿ ಬಗೆಹರಿಸಿದ್ದಾರೆ. ಬೇಱವ ಸಮಸ್ಯೆಗಳು ಉಳಿದಿವೆ ಎಂದು ಬಾಗಲಕೋಟೆಯಲ್ಲಿ ಕಾರಜೋಳ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕೆ ಬಂದು 60 ವರ್ಷ ಆಡಳಿತ ನಡೆಸಿದರು. ಆಗ ಸಮಸ್ಯೆಗಳನ್ನು ಹಾಗೆ ಇಟ್ಟುಕೊಂಡು, ತೋರಿಸಿಕೊಂಡು ಆಡಳಿತ ಮಾಡಿದ್ರು ಎಂದು ಕಾರಜೋಳ ಮಾತನಾಡಿದ್ದಾರೆ.

ಸದ್ಯ ಲಾಕ್​ಡೌನ್ ಇಲ್ಲ
ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಮಾತನಾಡಿದ ಗೋವಿಂದ ಕಾರಜೋಳ, ರಾಜ್ಯದಲ್ಲಿ ಸದ್ಯಕ್ಕೆ ಲಾಕ್​ಡೌನ್​ ಜಾರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲಿಸಲು ಮನವಿ ಮಾಡಿದ್ದೇವೆ. ಕೊರೊನಾ ನಿಯಂತ್ರಿಸುವ ಶಕ್ತಿ ಸಾರ್ವಜನಿಕರಲ್ಲಿದೆ. 45 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಕೇಳಿಕೊಂಡಿದ್ದಾರೆ.

ಚುನಾವಣೆಗಳಿಗೆ ಕೊರೊನಾ ನಿಯಮಗಳ ಅನ್ವಯ ಏಕಿಲ್ಲ ಎಂಬ ವಿಚಾರಕ್ಕೆ ಉತ್ತರಿಸಿದ ಕಾರಜೋಳ, ಅದನ್ನು ಚುನಾವಣಾ ಆಯೋಗದವರು ಡಿಕ್ಲೇರ್ ಮಾಡ್ತಾರೆ. ಸರ್ಕಾರದವರು ಎಲೆಕ್ಷನ್ ಮಾಡೋದಿಲ್ಲ. ಜಾಸ್ತಿ ಜನ ಸೇರಿಸಬಾರದೆಂದಿದ್ದಾರೆ. ಚುನಾವಣೆ ಆಯೋಗದ ನಿರ್ದೇಶನ ಪಾಲಿಸ್ತೀವಿ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುತ್ತೆ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಖಂಡಿತಾವಾಗಿಯೂ ಬಿಜೆಪಿ ಗೆಲ್ಲುತ್ತೆ. ಯಾವ್ಯಾವ ರಾಜ್ಯಗಳಲ್ಲಿ ಬಿಜೆಪಿ ಹಿಂದೆ ಇತ್ತೋ, ಅಲ್ಲಿ ಮುಂದೆ ಹೋಗುತ್ತಿದ್ದೇವೆ. ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಪ್ರಚಾರ ಮಾಡುತ್ತಿರುವುದಕ್ಕೆ ಪರೋಕ್ಷ ಟಾಂಗ್ ನೀಡಿದ, ಗೋವಿಂದ ಕಾರಜೋಳ, ಡ್ರಾಮಾ ಮಾಡೋವ್ರಿಗೆ ಏನು ಮಾಡೋಕೆ ಆಗುತ್ತೆ. ಕೆಲವರು ಅದ್ಭುತ ಕಲಾಕಾರಿರುತ್ತಾರೆ. ಏನು ಮಾಡೋಕೆ ಆಗಲ್ಲ. ಅವರೂ ಒಬ್ರು ಕಲಾಕಾರರು ಎಂದು ಹೆಸರು ಹೇಳದೇ ಟೀಕೆ ಮಾಡಿದ್ದಾರೆ.

ಉಪಚುನಾವಣೆಯಲ್ಲೂ ಬಿಜೆಪಿ ವಿಜಯ
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಬಗ್ಗೆ ಕಾರಜೋಳ ಮಾತನಾಡಿದ್ದಾರೆ. ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ನಾಯಕತ್ವದಲ್ಲಿ ನಾವು ಗೆದ್ದೇ ಗೆಲ್ತೀವಿ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದ್ದಾರೆ. ಬೆಳಗಾವಿ ಉಪಚುನಾವಣೆಯಲ್ಲಿ ದಿ. ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ನೀಡಲಾಗಿದೆ. ಆದರೆ, ತೇಜಸ್ವಿನಿ ಅನಂತ್ ಕುಮಾರ್​ಗೆ ಟಿಕೆಟ್ ನೀಡುವಲ್ಲಿ ತಾರತಮ್ಯ ಮಾಡಲಾಗಿತ್ತು ಎಂಬ ವಿಚಾರಕ್ಕೆ ಕಾರಜೋಳ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಹಾಗೂ ಡಿ.ಕೆ. ಶಿವಕುಮಾರ್​ಗೆ ಜಾರಕಿಹೊಳಿ ಬೆಂಬಲಿಗರ ಘೆರಾವ್ ಬಗ್ಗೆ ಕೇಳಿದಾಗ ಅದರ ಬಗ್ಗೆ ಚರ್ಚೆ ಬೇಡ. ಅದರಲ್ಲಿ ನನ್ನನ್ಯಾಕೆ ಎಳಿತೀರಾ ಎಂದು ಮಾಧ್ಯಮಗಳಿಗೆ ಕೈಮುಗಿದಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಭೇಟಿಯ ನಂತರ ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ, ಹಿಂದೂ ದೇವಾಲಯಗಳ ಮೇಲೆ ದಾಳಿ

ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ವಿಜಯ ಮಲ್ಯನೋ ಇಲ್ಲವೇ ನೀರವ್ ಮೋದಿಯೋ?; ವಿಪಕ್ಷ ನಾಯಕ ಸಿದ್ದರಾಮಯ್ಯ

Published On - 8:52 pm, Sun, 28 March 21