ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ಡಿಸಿಪಿ ಚೇತನ್ ಸಿಂಗ್ ರಾಥೋರ್ ರಿಯಾಲಿಟಿ ಚೆಕ್

|

Updated on: Dec 08, 2019 | 3:06 PM

ಬೆಂಗಳೂರು: ಹೈದರಾಬಾದ್​ನಲ್ಲಿ ದಿಶಾ ಗ್ಯಾಂಗ್​ ರೇಪ್, ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ನಿನ್ನೆ ರಾತ್ರಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಚೇತನ್ ಸಿಂಗ್ ಯುಬಿ ಸಿಟಿ ರಸ್ತೆಯಲ್ಲಿ ರೌಂಡ್ಸ್ ಹೊರಟಿದ್ದ ವೇಳೆ ತಡರಾತ್ರಿ ಯುಬಿಸಿಟಿಯಲ್ಲಿ ಊಟಕ್ಕೆ ಬಂದಿದ್ದ ಓರ್ವ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತರಿಗೆ ಡಿಸಿಪಿ ಸಲಹೆ ನೀಡಿದ್ದಾರೆ. ಸಹಾಯ ಬೇಕಿದ್ದರೆ ‘100’ಗೆ ಕರೆ ಮಾಡಲು ತಿಳಿಸಿದ್ದಾರೆ. ಅದಕ್ಕೆ ಆ ಯುವತಿಯರು ಹರಿಯಾಣದಲ್ಲಿ […]

ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ಡಿಸಿಪಿ ಚೇತನ್ ಸಿಂಗ್ ರಾಥೋರ್ ರಿಯಾಲಿಟಿ ಚೆಕ್
Follow us on

ಬೆಂಗಳೂರು: ಹೈದರಾಬಾದ್​ನಲ್ಲಿ ದಿಶಾ ಗ್ಯಾಂಗ್​ ರೇಪ್, ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ನಿನ್ನೆ ರಾತ್ರಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ರಿಯಾಲಿಟಿ ಚೆಕ್ ನಡೆಸಿದ್ದಾರೆ.

ಚೇತನ್ ಸಿಂಗ್ ಯುಬಿ ಸಿಟಿ ರಸ್ತೆಯಲ್ಲಿ ರೌಂಡ್ಸ್ ಹೊರಟಿದ್ದ ವೇಳೆ ತಡರಾತ್ರಿ ಯುಬಿಸಿಟಿಯಲ್ಲಿ ಊಟಕ್ಕೆ ಬಂದಿದ್ದ ಓರ್ವ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತರಿಗೆ ಡಿಸಿಪಿ ಸಲಹೆ ನೀಡಿದ್ದಾರೆ. ಸಹಾಯ ಬೇಕಿದ್ದರೆ ‘100’ಗೆ ಕರೆ ಮಾಡಲು ತಿಳಿಸಿದ್ದಾರೆ. ಅದಕ್ಕೆ ಆ ಯುವತಿಯರು ಹರಿಯಾಣದಲ್ಲಿ ಒಮ್ಮೆ ಇದೇ ರೀತಿ ಪ್ರಯತ್ನ ಮಾಡಿದ್ದೆವು. ಆದ್ರೆ ಅಲ್ಲಿ ನಮಗೆ ಯಾವುದೇ ರೀತಿ ಪ್ರಯೋಜನವಾಗಲಿಲ್ಲ. ಇದೆಲ್ಲ ಉಪಯೋಗಕ್ಕೆ ಬರುವುದಿಲ್ಲವೆಂದ ಉತ್ತರಿಸಿದ್ದಾರೆ.

100ಗೆ ಕರೆ ಮಾಡಿದ ಯುವತಿಯರು:
ಆಗ ಡಿಸಿಪಿ ಅದು ಹರಿಯಾಣ, ಇದು ಬೆಂಗಳೂರು ಇಲ್ಲಿ ಒಮ್ಮೆ ಪ್ರಯತ್ನ ಮಾಡಿ ಎಂದು ಇಬ್ಬರು ಯುವತಿಯರಿಗೆ ಹೇಳಿದ್ದಾರೆ. ಡಿಸಿಪಿ ಮಾತಿನಂತೆ ಯುವತಿಯರು 100ಕ್ಕೆ ಕರೆ ಮಾಡಿದ್ದಾರೆ. ಮೊದಲು ಕರೆ ಮಾಡಿದಾಗ ಬ್ಯುಸಿ ಬಂದಿದೆ. ನಂತರ ಡಿಸಿಪಿ ತಮ್ಮ ಗನ್ ಮ್ಯಾನ್ ಮೊಬೈಲ್​ನಲ್ಲಿ ಮತ್ತೊಮ್ಮೆ ಡಯಲ್ ಮಾಡುವಂತೆ ತಿಳಿಸಿದ್ದಾರೆ. ಮತ್ತೆ ‘100’ಗೆ ಡಯಲ್ ಮಾಡಿದಾಗ ಸಂಪರ್ಕ ಸಿಕ್ಕಿದೆ. ಯುವತಿಯರಿಂದ ಮಾಹಿತಿ ಪಡೆದು 3 ನಿಮಿಷದಲ್ಲಿ ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಯುವತಿಯರ ಸಮಸ್ಯೆ ಆಲಿಸಿದ್ದಾರೆ.

ಯುವತಿಯರು ಪೊಲೀಸರ ಕರ್ತವ್ಯ ನಿಷ್ಠೆಯನ್ನ ಮಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಾವು ಮಂಗಳೂರು ಹಾಗೂ ಹರಿಯಾಣ ಮೂಲದ ಯುವತಿಯರು. ಹರಿಯಾಣದ ಸಚಿವರೊಬ್ಬರ ತಂಗಿ ಮಗಳು ಎಂದು ಓರ್ವ ಯುವತಿ ಪರಿಚಯಿಸಿಕೊಂಡು ಡಿಸಿಪಿ ಚೇತನ್ ಸಿಂಗ್ ಅವರ ಜೊತೆ ಸೆಲ್ಫಿ ತೆಗೆಸಿಕೊಂಡರು.