ದಿಢೀರ್ ಈರುಳ್ಳಿ ದರ ಕುಸಿದಿದ್ದಕ್ಕೆ ರೈತರಿಂದ ಭುಗಿಲೆದ್ದ ಆಕ್ರೋಶ
ವಿಜಯಪುರ: ದಿಢೀರ್ ಈರುಳ್ಳಿ ದರ ಕುಸಿದಿದ್ದಕ್ಕೆ ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ ಗಲಾಟೆ ಶುರುವಾಗಿದೆ. ದಲ್ಲಾಳಿಗಳು ಉದ್ದೇಶಪೂರ್ವಕವಾಗಿ ದರ ಕಡಿಮೆ ಮಾಡಿದ್ದಾರೆ ಎಂದು ಬೆಳೆಗಾರರು ಆರೋಪಿಸಿದ್ದಾರೆ. ಉತ್ತಮ ದರ್ಜೆಯ ಈರುಳ್ಳಿ ಕ್ವಿಂಟಾಲ್ಗೆ 7000 ರೂಪಾಯಿ ಇದ್ದ ಬೆಲೆ 3000 ರೂಪಾಯಿ ಕ್ವಿಂಟಾಲ್ ಗೆ ಇಳಿದಿದೆ. ಇದರಿಂದ ಕೆರಳಿದ ಈರುಳ್ಳಿ ಬೆಳೆಗಾರರು ಮಾರಾಟ ಪ್ರಕ್ರಿಯೆ ಸ್ಥಗಿತಗೊಳಿಸಿ ಗಲಾಟೆ ಮಾಡುತ್ತಿದ್ದಾರೆ. ಈರುಳ್ಳಿಗೆ ಸೂಕ್ತ ದರ ನಿಗದಿ ಮಾಡುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ.
ವಿಜಯಪುರ: ದಿಢೀರ್ ಈರುಳ್ಳಿ ದರ ಕುಸಿದಿದ್ದಕ್ಕೆ ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ ಗಲಾಟೆ ಶುರುವಾಗಿದೆ. ದಲ್ಲಾಳಿಗಳು ಉದ್ದೇಶಪೂರ್ವಕವಾಗಿ ದರ ಕಡಿಮೆ ಮಾಡಿದ್ದಾರೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.
ಉತ್ತಮ ದರ್ಜೆಯ ಈರುಳ್ಳಿ ಕ್ವಿಂಟಾಲ್ಗೆ 7000 ರೂಪಾಯಿ ಇದ್ದ ಬೆಲೆ 3000 ರೂಪಾಯಿ ಕ್ವಿಂಟಾಲ್ ಗೆ ಇಳಿದಿದೆ. ಇದರಿಂದ ಕೆರಳಿದ ಈರುಳ್ಳಿ ಬೆಳೆಗಾರರು ಮಾರಾಟ ಪ್ರಕ್ರಿಯೆ ಸ್ಥಗಿತಗೊಳಿಸಿ ಗಲಾಟೆ ಮಾಡುತ್ತಿದ್ದಾರೆ. ಈರುಳ್ಳಿಗೆ ಸೂಕ್ತ ದರ ನಿಗದಿ ಮಾಡುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ.
Published On - 4:32 pm, Sun, 8 December 19