ಬೆಂಗಳೂರು, ಜ.29: ಶಾಸಕರು ಒಂದೆಡೆ ಕುಳಿತುಕೊಂಡು ಚರ್ಚೆ ಮಾಡಲು ಒಂದು ಕಟ್ಟಡ ಬೇಕಾಗಿದ್ದು, ಇದಕ್ಕಾಗಿ ಭವನ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಾಲಬ್ರೂಯಿ ಒಂದು ಇತಿಹಾಸ ಉಳ್ಳ ಪ್ರಸಿದ್ಧವಾದ ಕಟ್ಟಡವಾಗಿದ್ದು, ಇದಕ್ಕೆ ಯಾವುದೇ ಹನಿ ಮಾಡದೆ ವಿಧಾನಮಂಡಲ ಸಂಸ್ಥೆ ಸ್ಥಾಪಿಸಲಾಗುವುದು ಎಂದರು.
ಶಾಸಕರು ಎಲ್ಲೋ ಒಂದು ಕಡೆ ಕುಳಿತು ಚರ್ಚೆ ಮಾಡಲು ಆಗಲ್ಲ. ಶಾಸಕರು ಒಂದು ಕುಳಿತು ಚರ್ಚೆಮಾಡಲು ಸಂಸ್ಥೆಯ ಅಗತ್ಯವಿದೆ. ಪಾರ್ಲಿಮೆಂಟ್ ಸದಸ್ಯರಿಗೆ ಕಾನ್ಸ್ಟಿಟ್ಯೂಷನ್ ಕ್ಲಬ್ ಅಂತಿದೆ. ದೆಹಲಿಯಲ್ಲಿ ಶಾಸಕರಿಗೆ ಕಾನ್ಸ್ಟಿಟ್ಯೂಷನ್ ಕ್ಲಬ್ ಇದೆ. ಐಎಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳಿಗೂ ಕ್ಲಬ್ ಇದೆ ಎಂದರು.
ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ಗಲಭೆ ಪ್ರಕರಣ: ನಮ್ಮ ಇಂಟಲಿಜೆನ್ಸಿ ಫೇಲಾಗಿದೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್
ಶಾಸಕರು ಚರ್ಚೆಮಾಡಲು ಜಾಗಬೇಕೆನ್ನುವುದು ಬಹುದಿನದ ಬೇಡಿಕೆಯಾಗಿದೆ. ಬಾಲಬ್ರೂಯಿ ಕಟ್ಟಡದ ಬಳಿ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಒಂದು ಇತಿಹಾಸ ಉಳ್ಳ ಪ್ರಸಿದ್ಧವಾದ ಬಾಲಬ್ರೂಯಿ ಕಟ್ಟಡಕ್ಕೆ ಯಾವುದೇ ಹನಿಯಾಗದಂತೆ ನೋಡಿಕೊಂಡು ಭವನ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಶಾಸಕರೇ ಮಾಡುವುದಾಗಿ ತೀರ್ಮಾನ ಮಾಡುತ್ತಿದ್ದೇವೆ ಎಂದರು.
ಸಾರ್ವಜನಿಕವಾಗಿ ಅಥವಾ ಹೋಟೆಲ್ನಲ್ಲಿ ಕುಳಿತುಕೊಂಡು ಚರ್ಚೆ ಮಾಡಲು ಆಗಲ್ಲ. ಹೀಗಾಗಿ ಶಾಸಕರು ಚರ್ಚೆ ಮಾಡಲೆಂದೇ ಈ ಭವನ ನಿರ್ಮಾಣ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಇಲ್ಲಿ ಪ್ರವೇಶ ಇರುವುದಿಲ್ಲ. ಹಣ ಎಷ್ಟು ಖರ್ಚು ಆಗುತ್ತೆ ಅಂತ ಗೊತ್ತಿಲ್ಲ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ