ಕೆರಗೋಡು ಹನುಮ ಧ್ವಜ ಗಲಭೆ ಪ್ರಕರಣ: ನಮ್ಮ ಇಂಟಲಿಜೆನ್ಸಿ ಫೇಲಾಗಿದೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರ ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಮತ್ತು ರಾಜ್ಯ ಸರ್ಕಾರ ಭಾರೀ ಪ್ರತಿಭಟನೆಯನ್ನು ಎದುರಿಸುವಂತಾಯಿತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ರವಿಕುಮಾರ್, ಒಂದು ಊರಿಗೆ ಬೆಂಕಿ ಹಚ್ಚಲೇಬೇಕು ಅಂತ ಡಿಸೈಡ್ ಮಾಡಿದಾಗ ಏನೇನು ಆಗಬೇಕೋ ಅದು ಆಗಿದೆ. ಶಾಂತಿ ಸಭೆಗೆ ಹೋಗುತ್ತಿದ್ದರೆ ನನ್ನನ್ನು ಕೊಂದೇ ಬಿಡುತ್ತಿದ್ದರು ಎಂದು ಘಟನೆಯ ಭೀಕರತೆಯನ್ನು ವಿವರಿಸಿದರು.
ಮಂಡ್ಯ, ಜ.29: ತಾಲೂಕಿನ ಕೆರಗೋಡು (Keragodu) ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರ ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravikumar) ಮತ್ತು ರಾಜ್ಯ ಸರ್ಕಾರ ಭಾರೀ ಪ್ರತಿಭಟನೆಯನ್ನು ಎದುರಿಸುವಂತಾಯಿತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ರವಿಕುಮಾರ್, ಒಂದು ಊರಿಗೆ ಬೆಂಕಿ ಹಚ್ಚಲೇಬೇಕು ಅಂತ ಡಿಸೈಡ್ ಮಾಡಿದಾಗ ಏನೇನು ಆಗಬೇಕೋ ಅದು ಆಗಿದೆ. ಶಾಂತಿ ಸಭೆಗೆ ಹೋಗುತ್ತಿದ್ದರೆ ನನ್ನನ್ನು ಕೊಂದೇ ಬಿಡುತ್ತಿದ್ದರು ಎಂದು ಘಟನೆಯ ಭೀಕರತೆಯನ್ನು ವಿವರಿಸಿದರು.
ಭಾರತದಲ್ಲಿ ರಾಷ್ಟ್ರಧ್ವಜ ಹಾರಿಸಿದರೂ ಈ ರೀತಿಯ ವಿರೋಧ ಆಗುತ್ತೆ ಅಂದರೆ ಏನು ಹೇಳಬೇಕು? ನಾನು ಕೆರಗೋಡು ಗ್ರಾಮದ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗ ನೋಡಲು ಹೋದಾಗ ಆ ಸ್ಥಳ ನೋಡಿದ್ದದೆ. ಹನುಮ ದೇವಾಲಯದ ಎದುರು ಆ ಧ್ವಜಸ್ಥಂಬ ಇದೆ. ಇಲ್ಲಿ ಬಸ್ ನಿಲ್ದಾಣ ಆಗುತ್ತದೆ, ಅ ಜಾಗದಲ್ಲಿ ಸ್ತಂಭ ಬೇಡ ಅಂತ ಹೇಳಿದ್ದೆ. ಇದಾದ ಬಳಿಕವೂ ಗೌರಿಶಂಕರ ಟ್ರಸ್ಟ್ ನವರು ಧ್ವಜಸ್ಥಂಬ ನಿರ್ಮಾಣಕ್ಕೆ ಅರ್ಜಿ ಕೊಟ್ಟರು ಎಂದರು.
16ನೇ ತಾರೀಕು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಕ್ಕೆ ಅನುಮತಿ ತಗೆದುಕೊಂಡಿದ್ದಾರೆ. 20ನೇ ತಾರೀಕು ಇವರು ಮತ್ತೊಂದು ಕಾರ್ಡ್ ಪ್ಲೇ ಮಾಡಿದರು. ಹನುಮಧ್ವಜ ಹಾಕಿಕೊಳ್ಳುತ್ತೇವೆ, 23 ರಂದು ಇಳಿಸುತ್ತೇವೆ ಎಂದು ಅನುಮತಿ ಪಡೆದಿದ್ದರು. ಆದರೆ ಅದನ್ನ ಇಳಿಸದೇ ಉದ್ಧಟತನ ಮಾಡಿದ್ದಾರೆ ಎಂದರು.
ಆ ಜಾಗದಲ್ಲಿ ಡಿಎಸ್ಎಸ್ನವರು ಬಂದು ಅಲ್ಲಿ ಅಂಬೇಡ್ಕರ್ ಬಾವುಟ ಹಾಕುತ್ತೇವೆ ಎಂದರು. ಬಳಿಕ ಒಕ್ಕಲಿಗರು ಬಂದು ಕೆಂಪೇಗೌಡರ ಬಾವುಟ ಹಾಕುತ್ತೇವೆ ಅಂದರು. ಕುರುಬ ಸಂಘಟನೆ ಅವರು ಬಂದು ರಾಯಣ್ಣನ ಬಾವುಟ ಹಾಕುತ್ತೇವೆ ಅಂದರು. ಹಾಗಾಗಿ ಎಲ್ಲರಿಗೂ ಅವಕಾಶ ಕೊಡಲು ಆಗುತ್ತಾ? ಇದಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿ ಹನುಮಾನ್ ಧ್ವಜ ತೆರವು ಮಾಡಿದ್ದಾರೆ. ಆದರೆ ಕೆಲವರು ಕ್ರಿಮಿನಲ್ ಮೈಂಡ್ನವರು ಇದನ್ನ ರಾಜಕೀಯಕ್ಕೆ ಬಳಸಿಕೊಂಡರು ಎಂದು ವಿಪಕ್ಷ ಬಿಜೆಪಿ-ಜೆಡಿಎಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Hanuman Flag: ಕಾಂಗ್ರೆಸ್ ಶಾಸಕ ರವಿ ಗಣಿಗ ಫ್ಲೆಕ್ಸ್ ಹರಿದು ಛಿದ್ರಗೊಳಿಸಿದ ಜೆಡಿಎಸ್, ಬಿಜೆಪಿ ಕಾರ್ಯಕರ್ತರು, ಲಾಠಿ ಚಾರ್ಜ್
ಬೆಂಕಿ ಹಚ್ಚಿ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ. ಹನುಮ ಧ್ಚಜ ಹಾಕಿದ್ದನ್ನ ಪ್ರಶ್ನಿಸಿ ಕೆಲ ದಲಿತ ಮುಖಂಡರು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿಯವರು ಧ್ವಜ ತೆರವಿಗೆ ಅದೇಶ ಮಾಡಿದ್ದಾರೆ. ಅದಕ್ಕಾಗಿ ಪೊಲೀಸರ ಸಮ್ಮುಖದಲ್ಲಿ ಹನುಮ ಧ್ವಜ ಇಳಿಸಿ ತ್ರಿವರ್ಣ ಧ್ಚಜ ಹಾರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಶಾಂತಿ ಸಭೆಗೆ ಹೋಗಿದ್ದರೆ ಕೊಲೆ ಮಾಡುತ್ತಿದ್ದರು
ಕೆರಗೋಡು ಗ್ರಾಮದ ಜನರಿಗೆ ಯಾವುದೇ ಮಾಹಿತಿ ನೀಡದೆ ಅವರನ್ನು ವಿಶ್ವಾಸಕ್ಕೆ ಪಡೆಯದೆ ಧ್ವಜ ತೆರವು ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳೀಯ ಶಾಸಕರು ಶಾಂತಿ ಸಭೆ ಕೂಡ ನಡೆಸಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ನಾನು ಶಾಂತಿ ಸಭೆ ಮಾಡಲು ಹೋಗಿದ್ದರೆ ಕೊಲೆ ಮಾಡುತ್ತಿದ್ದರು. ನನ್ನ ಫ್ಲೆಕ್ಸ್ ಅನ್ನೇ ಬಿಟ್ಟಿಲ್ಲ. ನಾನು ಹೋಗಿದ್ದಿದ್ದರೆ ಬಿಡುತ್ತಿದ್ದರಾ ಎಂದು ಹೇಳಿದರು.
ಕೆರಗೋಡಿನಲ್ಲಿ ಶಾಂತಿ ಯಾತ್ರೆ
ನನಗೂ ಕೇಸರಿ ಧ್ವಜದ ವಿವಾದಕ್ಕೂ ಸಂಬಂಧವಿಲ್ಲ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಾವು ಶಾಂತಿ ಯಾತ್ರೆ ಮಾಡುತ್ತೇವೆ. ಶೀಘ್ರದಲ್ಲೇ ಶಾಂತಿ ಯಾತ್ರೆ ದಿನಾಂಕ ಘೋಷಣೆ ಮಾಡುತ್ತೇನೆ. ನಾನು ಕೂಡ ಹಿಂದೂ, ಎಲ್ಲಾ ದೇವರನ್ನು ಪೂಜೆ ಮಾಡುತ್ತೇನೆ. ಮಂಡ್ಯದ ಆರ್ಎಸ್ಎಸ್ ಕಚೇರಿಗೆ ನಾನು 1 ಲಕ್ಷ ದೇಣಿಗೆ ಕೊಟ್ಟಿದ್ದೇನೆ. ಜನವರಿ 22ರಂದು ಸ್ಥಳೀಯ ರಾಮಮಂದಿರಕ್ಕೆ ಹೋಗಿದ್ದೇನೆ. ಇವರಿಂದ ದೇವರನ್ನು ಪೂಜೆ ಮಾಡುವುದನ್ನು ಕಲಿಯಬೇಕಿಲ್ಲ ಎಂದರು.
ಗುಪ್ತಚರದ ವೈಫಲ್ಯದ ಬಗ್ಗೆ ಪತ್ರ
ಕೆರಗೋಡಿನಲ್ಲಿ ಭಾರೀ ಪ್ರತಿಭಟನೆಗೆ ಶಾಸಕ ರವಿಕುಮಾರ್ ಕಂಗಾಲಾಗಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂಬ ಮಾಹಿತಿ ಗುಪ್ತಚರಕ್ಕೆ ತಿಳಿಯದೇ ಹೋಯ್ತಾ? ಮಾಹಿತಿ ಪಡೆಯುವಲ್ಲಿ ಗುಪ್ತಚರ ವಿಫಲವಾಗಿದೆ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಮ್ಮ ಇಂಟೆಲಿಜೆನ್ಸ್ ಫೇಲ್ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಹನುಮ ಧ್ವಜ ತೆರವು ಪ್ರಕರಣ: ತಪ್ಪನ್ನು ತಿದ್ದಿಕೊಳ್ಳುವಂತೆ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ
ಕರಾವಳಿ ರಾಜಕೀಯ ಮಂಡ್ಯಕ್ಕೆ ತರಲು ಸಂಚು
ಮಂಡ್ಯ ಜಿಲ್ಲೆಯಲ್ಲಿ ಹಿಂದೆಂದೂ ಇಂತಹ ಘಟನೆ ಆಗಿಲ್ಲ ಎಂದು ಹೇಳಿದ ಶಾಸಕ ರವಿಕುಮಾರ್, ಕರಾವಳಿ ರಾಜಕೀಯ ಮಂಡ್ಯಕ್ಕೆ ತರಲು ಸಂಚು ಮಾಡಿದ್ದಾರೆ. ತರಬೇತಿ ಪಡೆದ ಆರ್ಎಸ್ಎಸ್, ಬಜರಂಗದಳದವರು ಗಲಭೆ ಮಾಡಿದ್ದಾರೆ. ಗಲಾಟೆ ಮಾಡಬೇಕೆಂದೇ ಜೆಡಿಎಸ್, ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅನುಮೋದನೆ ಪಡೆದು ಧ್ವಜ ಹಾರಿಸಲು ಆಗಲ್ಲ. ಪಂಚಾಯಿತಿ ಸದಸ್ಯರಿಗೆ ಮನವಿಮಾಡಿ ಕೇಸರಿ ಧ್ವಜ ಹಾರಿಸಿದ್ದಾರೆ. ಒರಿಜಿನಲ್ ಆರ್ಎಸ್ಎಸ್ನವರು ಇವರನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಜೆಡಿಎಸ್ನವರಿಗೆ ಭಗವಾ ಧ್ವಜ ಹಾರಿಸುವುದಕ್ಕೆ ಬರುವುದಿಲ್ಲ. 40 ವರ್ಷಗಳಿಂದ ಭಗವಾ ಧ್ವಜ ಇತ್ತು ಅನ್ನೋದು ಸುಳ್ಳು ಎಂದರು.
ಕೆರಗೋಡು ಘಟನೆಗೆ ಕ್ರಿಕೆಟ್ ಬುಕ್ಕಿ ಕಾರಣ
ಗ್ರಾಮದಲ್ಲಿನ ಘಟನೆಗೆ ಕಾರಣ ಯಾರು ಎಂಬುದರ ಬಗ್ಗೆ ಮಾತನಾಡಿದ ಗಣಿಗ ರವಿಕುಮಾರ್, ಕ್ರಿಕೆಟ್ ಬುಕ್ಕಿ ಇದ್ದಾನೆ, ಅವನು ಗ್ರಾಮ ಪಂಚಾಯತ್ ಸದಸ್ಯನಾಗಿದ್ದು, ಆತನೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಕೇಸರಿ ಧ್ವಜಕ್ಕೆ ಪ್ರತಿಯಾಗಿ ತ್ರಿವರ್ಣ ಧ್ವಜ ಹಾರಾಟ
ಹನುಮ ಧ್ವಜ ತೆರುವು ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿ ಮನೆಮನೆಗಳಲ್ಲೂ ಕೇಸರಿ ಧ್ವಜ ಹಾರಿಸಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಡ್ಯದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕೈ ನಾಯಕರು ಮುಂದಾಗಿದ್ದಾರೆ. ಮಂಡ್ಯದಲ್ಲಿ ನಾವು ಒಂದು ಲಕ್ಷ ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ. ಅದ್ಯಾರು ಬಂದು ತಡೆಯುತ್ತಾರೋ ನೋಡೋಣ ಎಂದು ಶಾಸಕರು ಹೇಳಿದ್ದಾರೆ.
ಕರೆಗೋಡು ಗ್ರಾಮದಲ್ಲಿ ಗಲಭೆ ಸೃಷ್ಟಿಸಿದವರ ವಿರುದ್ಧ ಕ್ರಮ ಆಗಬೇಕು. ಕ್ರಮಕ್ಕೆ ಆಗ್ರಹಿಸಿ ಸಿಎಂ, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಜೆಡಿಎಸ್ ಮತ್ತು ಆರ್ಎಸ್ಎಸ್ನ ಕ್ರಿಮಿನಲ್ ಮೈಂಡ್ನಿಂದ ಗಲಭೆಯಾಗಿದೆ. ನೀವು ದೇಶಪ್ರೇಮಿಗಳಲ್ಲ, ನೀವು ದೇಶ ದ್ರೋಹಿಗಳು ಎಂದು ಆಕ್ರೋಶ ಹೊರಹಾಕಿದರು.
ಹೊರಗಿನವರಿಂದ ಕೆರಗೋಡಿನಲ್ಲಿ ಗಲಭೆ
ಹೊರಗಿನಿಂದ ಗಲಭೆಕೋರರನ್ನು ಕರೆಸಿ ಗಲಾಟೆ ಮಾಡಲಾಗಿದೆ ಎಂದು ಆರೋಪಿಸಿದ ಶಾಸಕ ರವಿಕುಮಾರ್, ನಮ್ಮ ಕೆರಗೋಡು ಜನರಿಗೆ ಆ ಘೋಷಣೆ ಕೂಗುವುದಕ್ಕೂ ಬರಲ್ಲ. ಹೊರಗಿನವರನ್ನು ಕರೆತಂದು ಗಲಾಟೆಮಾಡಿ ಕಲ್ಲು ಹೊಡೆಸಿದ್ದಾರೆ. ನಮ್ಮ ಫ್ಲೆಕ್ಸ್ ಕಿತ್ತುಹಾಕಿಸಿ ಗಲಾಟೆ ಮಾಡಿಸಿದ್ದಾರೆ. ಜೆಡಿಎಸ್ನ ರಾಮಚಂದ್ರ, ಬಿಜೆಪಿ ಮುಖಂಡ ಅಶೋಕ್ ಜಯರಾಮ್, ಸ್ಥಳೀಯ ಪುಡಾರಿಗಳು ಗಲಭೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಕೆರಗೋಡು ಘಟನೆಯಲ್ಲಿ ಸ್ಥಳೀಯ ಪಿಡಿಒ ತಪ್ಪು ಕೂಡ ಇದೆ. ಪಿಡಿಒ ಅಮಾನತು ಮಾಡುವಂತೆ ಹೇಳಿದ್ದೇನೆ. ಹನುಮಧ್ವಜ ಹಾರಿಸಲು ಅನುಮತಿ ಕೊಡಲು PDOಗೆ ಅಧಿಕಾರ ಇಲ್ಲ. ಆ ಪಿಡಿಒ ಹೆದರಿಸಿ ಹನುಮ ಧ್ವಜಕ್ಕೆ ಅನುಮತಿ ಪಡೆದುಕೊಂಡಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ