ಫೆ. 9ರಂದು ಮಂಡ್ಯ ಬಂದ್: ಹನುಮ ಧ್ವಜ ಹಾರುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದ ಅಶೋಕ್
ಹನುಮನ ಧ್ವಜ ಹಾರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು ‘ಧ್ವಜ ಹಾರಿಸುವುದಕ್ಕಾಗಿ ಗ್ರಾ.ಪಂ.ನಿಂದ ಅನುಮತಿ ಪಡೆಯಲಾಗಿದೆ. ಸರ್ಕರಿ ಜಾಗದಲ್ಲಿ ಧ್ವಜಸ್ತಂಭವಿಲ್ಲ. ಆದ್ದರಿಂದ ಆಂಜನೇಯ ದೇವಾಲಯದಲ್ಲಿ ಮುಂದೆ ಧ್ವಜಸ್ತಂಭ ಹಾಕಲಾಗಿದೆ. ಈ ಹಿಂದೆಯೂ ಹನುಮಂತನ ಧ್ವಜ ಹಾರಿಸಲಾಗಿದೆ ಎಂದರು.
ಮಂಡ್ಯ, ಜ.29: ತಾಲೂಕಿನ ಕೆರಗೋಡು (Keragodu) ಗ್ರಾಮದ ಧ್ವಜಸ್ತಂಭದಲ್ಲಿ ಹಾಕಿದ್ದ ಹನುಮ ಧ್ವಜವನ್ನು ತೆರವುಗೊಳಿಸಲಾಗಿತ್ತು. ಇದನ್ನು ಖಂಡಿಸಿ ಇಂದು(ಜ.29) ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಛೇರಿವರೆಗೆ ಪಾದಯಾತ್ರೆ ನಡೆಸಲಾಗಿದೆ. ಇದರ ಮುಂದುವರೆದ ಭಾಗವಾಗಿ ಹನುಮ ಭಕ್ತರು ಫೆಬ್ರವರಿ 9ರಂದು ಮಂಡ್ಯ ಬಂದ್‌ಗೆ ಕರೆ (Mandya bandh on February 9) ನೀಡಿದ್ದಾರೆ.
ಹನುಮನ ಧ್ವಜ ಹಾರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ
ಈ ಕುರಿತು ಕೋಲಾರದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ‘ಹನುಮನ ಧ್ವಜ ಹಾರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ. ‘ಧ್ವಜ ಹಾರಿಸುವುದಕ್ಕಾಗಿ ಗ್ರಾ.ಪಂ.ನಿಂದ ಅನುಮತಿ ಪಡೆಯಲಾಗಿದೆ. ಸರ್ಕರಿ ಜಾಗದಲ್ಲಿ ಧ್ವಜಸ್ತಂಭವಿಲ್ಲ. ಆದ್ದರಿಂದ ಆಂಜನೇಯ ದೇವಾಲಯದಲ್ಲಿ ಮುಂದೆ ಧ್ವಜಸ್ತಂಭ ಹಾಕಲಾಗಿದೆ. ಈ ಹಿಂದೆಯೂ ಹನುಮಂತನ ಧ್ವಜ ಹಾರಿಸಲಾಗಿದೆ.
ಇದನ್ನೂ ಓದಿ:ಕೆರಗೋಡು ಹನುಮ ಧ್ವಜ ವಿವಾದ: ಪಂಚಾಯ್ತಿ ಪಿಡಿಓ ತಲೆದಂಡ, ಇಲ್ಲಿವೆ 5 ಕಾರಣಗಳು
ಕಾಂಗ್ರೆಸ್ಸಿಗರು ರಾಷ್ಟ್ರ ಧ್ವಜ ಹಾರಿಸಿ ವಿವಾದ ಸೃಷ್ಟಿ ಮಾಡಿರುವುದು
ಅನುಮತಿ ಕೊಟ್ರೆ ರಾಷ್ಟ್ರದ್ವಜ, ಹನುಮ ಧ್ವಜ ಎರಡನ್ನೂ ಹಾರಿಸುತ್ತೇವೆ.ಈ ಕಾಂಗ್ರೆಸ್ಸಿಗರು ರಾಷ್ಟ್ರ ಧ್ವಜ ಹಾರಿಸಿ ವಿವಾದ ಸೃಷ್ಟಿ ಮಾಡಿದ್ದಾರೆ. ಇತ್ತ ರಾಜ್ಯದಲ್ಲಿ ಬರಗಾಲ ಬಂದು 7 ತಿಂಗಳಾದರೂ ರೈತರಿಗೆ ಪರಿಹಾರ ನೀಡಿಲ್ಲ. ರೈತರಿಗೆ ಪರಿಹಾರ ಬಿಡುಗಡೆ ಮಾಡಿ ಇಲ್ಲ, ಕುರ್ಚಿ ಖಾಲಿ ಮಾಡಿ. ಬೆಳಗಾವಿ ಅಧಿವೇಶನದಲ್ಲಿ ಇನ್ನೊಂದು ವಾರದಲ್ಲಿ ಬಿಡುಗಡೆ ಎಂದಿದ್ದರು.
ರೈತರಿಗೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ
ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಜ.24 ಕಾಲೋನಿಗೆ ಹಣ ಬೇಕು ಎಂದು ಕೇಳಿದ ಮೂರೇ ದಿನಕ್ಕೆ 1 ಸಾವಿರ ಕೋಟಿ ಹಣ ನೀಡಿದ್ದಾರೆ. ಮುಲ್ಲಾಗಳ ಸಭೆಗೆ ಹೋಗಿ 10 ಸಾವಿರ ಕೋಟಿ ಹಣ ಬಿಡುಗಡೆ ಬಗ್ಗೆ ಮಾತಾಡ್ತಾರೆ, ಇದುವರೆಗೂ ರೈತರಿಗೆ ಹಣ ಬಿಡುಗಡೆ ಮಾಡಿಲ್ಲ. ಆದರೆ, ಕೇಂದ್ರ ಸರ್ಕಾರವನ್ನು ಕಾಯದೆ ನಾವು ಹಣ ಬಿಡುಗಡೆ ಮಾಡಿದ್ವಿ, ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಕುರಿತು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ