ರಾಜ್ಯದಲ್ಲಿ ಕೊವಿಡ್ ಪ್ರಕರಣ ಇಳಿಮುಖ: ಯಥಾಸ್ಥಿತಿ ಮಾರ್ಗಸೂಚಿ ಪಾಲಿಸುವಂತೆ ಆರೋಗ್ಯ ಇಲಾಖೆ ಆದೇಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 17, 2024 | 9:32 PM

ರಾಜ್ಯದಲ್ಲಿ ಕೊವಿಡ್ ಪ್ರಕರಣ ಇಳಿಮುಖವಾದ ಹಿನ್ನೆಲೆ ಕೊವಿಡ್ ಮಾರ್ಗಸೂಚಿ ಯಥಾಸ್ಥಿತಿ ಪಾಲಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಕೊವಿಡ್ ಕೇಸ್ ಇಳಿಕೆ ಬೆನ್ನಲ್ಲೇ ಪ್ರಸ್ತುತ ಮಾರ್ಗಸೂಚಿ ಪಾಲಿಸಲು ಸಲಹೆ ನೀಡಲಾಗಿದೆ.

ರಾಜ್ಯದಲ್ಲಿ ಕೊವಿಡ್ ಪ್ರಕರಣ ಇಳಿಮುಖ: ಯಥಾಸ್ಥಿತಿ ಮಾರ್ಗಸೂಚಿ ಪಾಲಿಸುವಂತೆ ಆರೋಗ್ಯ ಇಲಾಖೆ ಆದೇಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಜನವರಿ 17: ರಾಜ್ಯದಲ್ಲಿ ಕೊವಿಡ್ (covid) ಪ್ರಕರಣ ಇಳಿಮುಖವಾದ ಹಿನ್ನೆಲೆ ಕೊವಿಡ್ ಮಾರ್ಗಸೂಚಿ ಯಥಾಸ್ಥಿತಿ ಪಾಲಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಕೊವಿಡ್ ಕೇಸ್ ಇಳಿಕೆ ಬೆನ್ನಲ್ಲೇ ಪ್ರಸ್ತುತ ಮಾರ್ಗಸೂಚಿ ಪಾಲಿಸಲು ಸಲಹೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರಲ್ಲಿ ILI ಲಕ್ಷಣ ಇರುವವರಿಗೆ ಟೆಸ್ಟ್ ಕಡ್ಡಾಯ. ಹೋಮ್ ಐಸೋಲೇಷನ್​ನಲ್ಲಿರುವ ಸೋಂಕಿತರ ಬಗ್ಗೆ ಪಿಹೆಚ್​ಸಿ, ಯುಪಿಹೆಚ್​ಸಿ, ನಮ್ಮ ಕ್ಲಿನಿಕ್ ಸಿಬ್ಬಂದಿ ಗಮನ ಹರಿಸಬೇಕು.

ಆರೋಗ್ಯ ಸಮಸ್ಯೆ ಇರುವ ಸೋಂಕಿತರ ಉಸಿರಾಟದ ಬಗ್ಗೆ ಗಮನಹರಿಸುವುದು, ಅಗತ್ಯವಿದ್ದಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ICUನಲ್ಲಿ ಚಿಕಿತ್ಸೆ ಪಡೆಯುವ ಮಾರ್ಗಸೂಚಿ ಕಡ್ಡಾಯ ಪಾಲಿಸಬೇಕು.

ಇದನ್ನೂ ಓದಿ: ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಸ್ಮಶಾನ, ಚಿತಾಗಾರದಲ್ಲಿ ನಿರಾಕರಿಸದಂತೆ ಸುತ್ತೋಲೆ

ಶುಗರ್, ಹೈಪರ್ ಟೆನ್ಷನ್ ಇರುವ ಸೋಂಕಿತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರಾಜ್ಯ ಡೆತ್ ಆಡಿಟ್ ಕಮಿಟಿಯಿಂದ ನಿತ್ಯ ಕೊವಿಡ್ ಸಾವುಗಳ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರಿಗೆ ಡೆತ್ ಆಡಿಟ್ ಕಮಿಟಿ ವರದಿ ಸಲ್ಲಿಸಬೇಕು. ಜೈಲಿನಲ್ಲಿರುವ ಕೊರೊನಾ ಸೋಂಕಿತ ಕೈದಿಗಳು ಸಿಎಬಿ ಪಾಲಿಸಬೇಕು ಎಂದು ಮಾರ್ಗಸೂಚಿ ನೀಡಲಾಗಿದೆ.

ರಾಜ್ಯದಲ್ಲಿ ಇಂದು 87 ಜನರಿಗೆ ಕೊರೊನಾ ಸೋಂಕು ದೃಢ

ರಾಜ್ಯದಲ್ಲಿ ಇಂದು 87 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಇಂದು 38 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 1.14ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,579 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, 672 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. 165 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಕೋವಿಡ್ ಪರಿಣಾಮ: ಬೆಂಗಳೂರಿನ ಶೇ 30ರಷ್ಟು ಮಂದಿಯಲ್ಲಿ ಹೆಚ್ಚಾದ ಗೊರಕೆ ಸಮಸ್ಯೆ

ಧಾರವಾಡ 9, ಚಿಕ್ಕಮಗಳೂರು 8, ಬೆಂಗಳೂರು ಗ್ರಾಮಾಂತರ 6, ಹಾಸನ 5, ಕಲಬುರಗಿ 5, ದಕ್ಷಿಣ ಕನ್ನಡ 3, ವಿಜಯನಗರ 3, ಬೆಳಗಾವಿ 2, ಶಿವಮೊಗ್ಗ 2, ಬಳ್ಳಾರಿ 1, ಗದಗ 1, ಕೊಡಗು 1, ಮೈಸೂರು, ರಾಯಚೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 1 ಕೇಸ್ ಪತ್ತೆ ಆಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.