ಯುವತಿಯರು ಲಂಬಾಣಿ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು, ಬಲಿಪಾಡ್ಯದಂದು ಸ್ನೇಹಿತೆಯರೊಂದಿಗೆ ಹೂದೋಟಕ್ಕೆ ಲಗ್ಗೆ ಇಡುತ್ತಾರೆ. ಇದು ಅಪರೂಪ ಹಾಗೂ ದೀಪಾವಳಿಯ ವಿಶೇಷ. ಇದು ಕಂಡು ಬರುವುದು ಬಂಜಾರ ಸಮುದಾಯದಲ್ಲಿ ಮಾತ್ರ. ಆಧುನಿಕ ಭರಾಟೆಯಲ್ಲಿದ್ದರೂ, ಬಲಿಪಾಡ್ಯದಂದು ಸಾಂಪ್ರದಾಯಿಕ ಉಡುಗೆ ಕಣ್ಮನ ಸೆಳೆಯುತ್ತದೆ. ಪಾಂಮ್ಡಿ, ಫೆಟಿಯಾ, ಬಲಿಯಾ, ಚೊಟ್ಲಾ, ಭುರಿಯಾ, ಜಾಂಜರ್, ಸಡಕ್ ಘುಗರಿ, ಕೋಡಿ, ಪುಂದಾ, ಬುಡ್ಡಿ, ಪಟಿಯಾ, ಆಡಿ ಸಾಂಕ್ಳಿ, ಈಂಟಿ, ಇವೆಲ್ಲವೂಗಳಿಂದ ಶೃಂಗಾರಗೊಂಡು ಸಾಂಪ್ರದಾಯಿಕ ಪ್ರಕೃತಿಯತ್ತ ಧಾವಿಸುತ್ತಾರೆ.