ಮಿಕ್ಸೆಡ್ ಮಾರ್ಷಲ್ ಆರ್ಟ್ಸ್​ನಲ್ಲಿ​ ಕೊಡಗಿನ ಯುವಕ ಸಾಧನೆ; ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ ಭುವನ್

ಭುವನ್ ಬೋಜಣ್ಣ ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮದ ಸೋಮಣ್ಣ ಮತ್ತು ತಾರಾ ದಂಪತಿಯ ಪುತ್ರ. ಕಟ್ಟುಮಸ್ತಾದ ಯುವಕ ಇದೀಗ ಇಡೀ ದೇಶ ತಿರುಗಿ ನೋಡುವಂತಹ ಅದ್ಭುತ ಸಾಹಸವೊಂದನ್ನ ಮಾಡಿದ್ದಾರೆ.

ಮಿಕ್ಸೆಡ್ ಮಾರ್ಷಲ್ ಆರ್ಟ್ಸ್​ನಲ್ಲಿ​ ಕೊಡಗಿನ ಯುವಕ ಸಾಧನೆ; ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ ಭುವನ್
ಚಿನ್ನದ ಪದಕ ಪಡೆದ ಭುವನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ
Follow us
TV9 Web
| Updated By: ganapathi bhat

Updated on:Nov 07, 2021 | 8:37 PM

ಮಡಿಕೇರಿ: ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (Mixed Martial Arts) ವಿದೇಶಗಳಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿರುವ ಸಾಹಸ ಕ್ರೀಡೆ. ಸದ್ಯ ಭಾರತದಲ್ಲಿ ಇದು ಇನ್ನೂ ಅಂಬೆಗಾಲಿಡುತ್ತಿದೆ. ಆದರೆ ಕೊಡಗಿನ ಸಾಹಸಿ ಯುವಕನೋರ್ವ ಈ ಸಾಹಸ ಕ್ರೀಡೆಯನ್ನ ಕಲಿತು ಕೇವಲ ಮೂರೇ ತಿಂಗಳಲ್ಲಿ ನ್ಯಾಷನಲ್ ಚಾಂಪಿಯನ್ ಆಗಿ ಇಂಟರ್​ನ್ಯಾಶನಲ್ ಚಾಂಪಿಯನ್​ಶಿಪ್​ಗೆ ಅರ್ಹತೆ ಗಿಟ್ಟಿಸಿದ್ದಾರೆ. ಕೊಡಗಿನವರು ಅಂದರೆ ಕ್ರೀಡೆ ಮತ್ತು ಸಾಹಸದಲ್ಲಿ ಒಂದು ಕೈ ಮೇಲು. ಇದೀಗ ಈ ಮಾತನ್ನ ನಿಜ ಮಾಡುವುದಕ್ಕೆ ಭುವನ್ ಬೋಜಣ್ಣ ಹೊರಟಿದ್ದಾರೆ.

ಭುವನ್ ಬೋಜಣ್ಣ, ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮದ ಸೋಮಣ್ಣ ಮತ್ತು ತಾರಾ ದಂಪತಿಯ ಪುತ್ರ. ಕಟ್ಟುಮಸ್ತಾದ ಯುವಕ ಇದೀಗ ಇಡೀ ದೇಶ ತಿರುಗಿ ನೋಡುವಂತಹ ಅದ್ಭುತ ಸಾಹಸವೊಂದನ್ನ ಮಾಡಿದ್ದಾರೆ. ವಿದೇಶದಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿರುವ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ವಿಜೇತನಾಗಿದ್ದಾರೆ.

ಭುವನ್ ಅತ್ಯುತ್ತಮ ಹಾಕಿ ಆಟಗಾರ. ಹಾಕಿಯಲ್ಲಿ ಭಾರತ ದೇಶವನ್ನ ಪ್ರತಿನಿಧಿಸಬೇಕೆಂಬುದು ಇವರ ಕನಸಾಗಿತ್ತು. ಆದರೆ ಆ ಕನಸು ಕೈಗೂಡಲಿಲ್ಲ. ಹಾಗಿರುವಾಗ ಇವರ ಆಸಕ್ತಿ ಹೊರಳಿದ್ದು ತಮ್ಮ ನೆಚ್ಚಿನ ಸಾಹಸ ಕ್ರೀಡೆಯತ್ತ. ಅದುವರೆಗೂ ಕೇವಲ ಟಿವಿಯಲ್ಲಿ ರಿಯಲ್ ಫೈಟ್ ನೋಡಿ ಎಂಜಾಯ್ ಮಾಡುತ್ತಿದ್ದರು. ನಂತರ ಟ್ರೈನಿಂಗ್ ಸೆಂಟರ್​ಗೆ ಸೇರಿ ತರಬೇತಿ ಪಡೆಯುತ್ತಾರೆ.

ಕೇವಲ ಮೂರೇ ತಿಂಗಳಲ್ಲಿ ತರಬೇತಿ ಪಡೆದು ಇದೀಗ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಭುವನ್ ಅವರ ತಂದೆ-ತಾಯಿ ಮತ್ತು ಕುಟುಂಬ ಇವರಿಗೆ ಸಂಪೂರ್ಣ ಬೆನ್ನೆಲುಬಾಗಿ ನಿಂತಿದ್ದಾರೆ. ಘಟಾನುಘಟಿಗಳ ಜೊತೆ ನೈಜವಾಗಿ ಕಾದಾಡುವ ಕ್ರೀಡೆ ಇದಾಗಿರುವುದರಿಂದ ಜೀವಕ್ಕೂ ಅಪಾಯವಾಗುವುದಿದೆ. ಅಲ್ಲದೆ ಅತ್ಯಾಧುನಿಕವಾಗಿ ತರಬೇತಿ ಪಡೆಯಲು ಬಹಳಷ್ಟು ಹಣಕಾಸು ಕೂಡ ಬೇಕು. ಆದರೆ ಇದಕ್ಕೆ ಇನ್ನೂ ಕೂಡ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಸರ್ಕಾರ ಅಥವಾ ಸಂಘ ಸಂಸ್ಥೆಗಳು ಸಹಾಯ ಮಾಡಲು ಮುಂದೆ ಬಂದರೆ ತಮ್ಮ ಮಗ ದೇಶದ ಹೆಸರನ್ನು ಮತ್ತಷ್ಟು ಮಿಂಚುವಂತೆ ಮಾಡುತ್ತಾನೆ ಎನ್ನುವುದು ತಾಯಿ ತಾರಾ ಸೋಮಣ್ಣ ಅವರ ಅಭಿಪ್ರಾಯ.

ಇದೇ ವರ್ಷಾಂತ್ಯದಲ್ಲಿ ಜರ್ಮನಿಯಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆ ನಡೆಯಲಿದೆ. ವಿವಿಧ ದೇಶಗಳ ನೂರಾರು ಫೈಟರ್ಗಳು ಸ್ಪರ್ಧೆಗೆ ಆಗಮಿಸುತ್ತಾರೆ. ಇವರೆಲ್ಲರನ್ನ ಎದುರಿಸಿ ಗೆಲ್ಲುವ ಸವಾಲು ಭುವನ್​ಗಿದೆ.

ಭುವನ್ ಬೋಜಣ್ಣ

ವರದಿ: ಗೋಪಾಲ್ ಸೋಮಯ್ಯ

ಇದನ್ನೂ ಓದಿ

ಯಾದಗಿರಿ: ಪುನೀತ್ ಪ್ರೇರಣೆ; ಇಬ್ಬರು ದಂಪತಿಗಳು ದೇಹದಾನಕ್ಕೆ ಹಾಗೂ 52 ಜನರು ನೇತ್ರದಾನಕ್ಕೆ ನೋಂದಣಿ

ಚಿಕ್ಕಬಳ್ಳಾಪುರ: ಗುಡಿಬಂಡೆ ಪಟ್ಟಣ ಪಂಚಾಯತ್​ನಲ್ಲಿ ಆಪರೇಷನ್ ಕಮಲ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆಗೆ ತೀರ್ಮಾನ

Published On - 4:21 pm, Sun, 7 November 21

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು