ಖಾಸಗಿ ಬಸ್ಗಳಿಂದ ದುಪ್ಪಟ್ಟು ಹಣ ವಸೂಲಿ; ಮೂರು ದಿನಗಳಲ್ಲಿ 1.90 ಲಕ್ಷ ದಂಡ ವಿಧಿಸಿದ ಆರ್ಟಿಓ ಅಧಿಕಾರಿಗಳು
ಹಬ್ಬದ ಹಿನ್ನೆಲೆ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ ಆರ್ಟಿಓ ಅಧಿಕಾರಿಗಳು ಮೂರು ದಿನಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.
ದೀಪಾವಳಿ (Diwali 2022) ಹಬ್ಬಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವವರ ಸಂಖ್ಯೆ ಹೆಚ್ಚು. ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ ಸಾಕಷ್ಟು ಜನರು ತಮ್ಮ ಸ್ವಂತ ಊರಿನತ್ತ ಹೋಗುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಬಸ್ಸು (Private bus) ಗಳು ಟಿಕೆಟ್ ದರವನ್ನು ಡಬಲ್ ಪಡೆಯುತ್ತಿದ್ದಾರೆ. ಆದರೆ ಪ್ರಯಾಣಿಕರಿಂದ ಹಣ ವಸೂಲಿಗೆ ಇಲಿದ ಖಾಸಗಿ ಬಸ್ಗಳ ವಿರುದ್ಧ ಅಖಾಡಕ್ಕಿಳಿದ ಆರ್ಟಿಓ (RTO) ಅಧಿಕಾರಿಗಳು ಮೂರು ದಿನಗಳಲ್ಲಿ 1.90 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇಂದು ಸಹ ಸಂಜೆ 5 ಗಂಟೆಯಿಂದ ಖಾಸಗಿ ಬಸ್ಸುಗಳ ಪರಿಶೀಲನೆ ಆರಂಭವಾಗಲಿದೆ.
ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್ಸುಗಳ ದರ ದುಪ್ಪಟ್ಟು ಏರಿಕೆ ಹಿನ್ನಲೆ ಮೂರು ದಿನಗಳಿಂದ ಫೀಲ್ಡ್ಗೆ ಇಳಿದಿರುವ ಆರ್ಟಿಓ ಅಧಿಕಾರಿಗಳು, ದುಪ್ಪಟ್ಟ ದರ ಕಂಡುಬಂದಂತಹ ಟ್ರಾವೆಲ್ಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಿದ್ದಾರೆ. ಮೊದಲನೇ ದಿನ ಅಂದರೆ ಅ.20ರಂದು ದುಬಾರಿ ಟಿಕೆಟ್ ದರ ವಸೂಲಿ ಮಾಡುತ್ತಿದ್ದ 198 ಬಸ್ಗಳನ್ನು ಹಿಡಿದು ಪ್ರಕರಣ ದಾಖಲಿಸಲಾಗಿದೆ. ಎರಡನೇ ದಿನ ಅಂದರೆ ಅ.21 ರಂದು 143 ಗಾಡಿಗಾಲನ್ನ ಹಿಡಿದು ಪ್ರಕರಣ ದಾಖಲಿಸಿದರೆ, ಮೂರನೇ ದಿನದಂದು ಅಂದರೆ ಅ.22 ರಂದು 109 ಗಾಡಿಗಳನ್ನ ಹಿಡಿದು ಪ್ರಕರಣ ದಾಖಲಿಸಲಾಗಿದೆ.
ಆರ್ಟಿಓ ಅಧಿಕಾರಿಗಳು ಟ್ರಾವೆಲ್ಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಇಟ್ಟು 1.90 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇಂದು ಸಹ ಸಂಜೆ 5 ಗಂಟೆಯಿಂದ ಖಾಸಗಿ ಬಸ್ಸುಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಲಿದ್ದು, ದುಪ್ಪಟ್ಟು ದಂಡ ವಸೂಲಿ ಮಾಡಿದರೆ ಬಸ್ ಮಾಲೀಕರ ವಿರುದ್ಧ ಕೇಸ್ ದಾಖಲಿಸಿ ದಂಡ ವಸೂಲಿ ಮಾಡಲಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ