ದೀಪಾವಳಿ ಹಬ್ಬ: ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ಮಧ್ಯೆ ವಿಶೇಷ ರೈಲು

| Updated By: ವಿವೇಕ ಬಿರಾದಾರ

Updated on: Oct 26, 2024 | 7:45 AM

Deepavali Festival Special Train: ದೀಪಾವಳಿ ಹಬ್ಬ ಮತ್ತು ವೀಕೆಂಡ್​ ಹಿನ್ನೆಲೆಯಲ್ಲಿ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿರುತ್ತದೆ. ಹೀಗಾಗಿ ಪ್ರಯಾಣಿಕರ ಬೇಡಿಕೆ ಮತ್ತು ದಟ್ಟಣೆಯನ್ನಿ ನಿರ್ವಹಣೆಗಾಗಿ ನೈಋತ್ಯ ರೈಲ್ವೆ ವಲಯವು ಬೆಂಗಳೂರು, ಕಲಬುರಗಿ ಮತ್ತು ಹುಬ್ಬಳ್ಳಿ ಮಧ್ಯೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.

ದೀಪಾವಳಿ ಹಬ್ಬ: ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ಮಧ್ಯೆ ವಿಶೇಷ ರೈಲು
ರೈಲು
Follow us on

ಬೆಂಗಳೂರು, ಅಕ್ಟೋಬರ್​ 26: ದೀಪಾವಳಿ ಹಬ್ಬದ (Deepavali Festival) ಸಂದರ್ಭದಲ್ಲಿ ಹೆಚ್ಚುವರಿ ಬೇಡಿಕೆ ಮತ್ತು ಪ್ರಯಾಣಿಕರ ದಟ್ಟಣೆ ನಿರ್ವಹಣೆಗಾಗಿ ನೈಋತ್ಯ ರೈಲ್ವೆ ವಲಯವು (South Western Railway) ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಎಸ್​ಎಂವಿಟಿ ಬೆಂಗಳೂರು-ಕಲಬುರಗಿ, ಎಸ್​ಎಸ್​ಎಸ್ ಹುಬ್ಬಳ್ಳಿ-ಯಶವಂತಪುರ ನಡುವೆ ವಿಶೇಷ ರೈಲುಗಳು ಸಂಚರಿಸಲಿದ್ದು, ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.

ನೈಋತ್ಯ ರೈಲ್ವೆ ಎಕ್ಸ್​ ಸಂದೇಶ

ಬೆಂಗಳೂರು-ಕಲಬುರಗಿ ವಿಶೇಷ ರೈಲು

ಎಸ್​ಎಮ್​​ವಿಟಿ ಬೆಂಗಳೂರು-ಕಲಬುರಗಿ (06217) ವಿಶೇಷ ರೈಲು ಅಕ್ಟೋಬರ್​ 31 ರಂದು ರಾತ್ರಿ 9:15ಕ್ಕೆ ಎಸ್​ಎಮ್​​ವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ.

ಎಸ್​ಎಮ್​​ವಿಟಿ ಬೆಂಗಳೂರು-ಕಲಬುರಗಿ (06218) ವಿಶೇಷ ರೈಲು ನವೆಂಬರ್​ ​01 ರಂದು ಬೆಳಗ್ಗೆ 9:35ಕ್ಕೆ ಕಲುಬುರಗಿಯಿಂದ ಹೊರಟು ಅದೇ ದಿನ ರಾತ್ರಿ 8:00ಕ್ಕೆ ಎಸ್​ಎಮ್​​ವಿಟಿ ಬೆಂಗಳೂರಿನಿಂದ ತಲುಪಲಿದೆ.

ಇದನ್ನೂ ಓದಿ: ದೀಪಾವಳಿ ಸ್ಪೆಷಲ್, ಕರ್ನಾಟಕದ ಹಲವು ನಿಲ್ದಾಣಗಳಿಗೆ ವಿಶೇಷ ರೈಲು; ಇಲ್ಲಿದೆ ವಿವರ

ಎಲ್ಲೆಲ್ಲಿ ನಿಲುಗಡೆ?

ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂಟಕಲ್​, ಅಡೋನಿ, ಮಂತ್ರಾಲಯಂ ರೋಡ್​, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಬಾದ್​ ನಿಲ್ದಾಣಗಳಲ್ಲಿ​ ನಿಲ್ಲುತ್ತದೆ.

ಈ ರೈಲು 2 ಎಸಿ ತ್ರಿ ಟಯರ್ ಬೋಗಿಗಳು​​, 2 ಸ್ಲೀಪರ್​ ಕ್ಲಾಸ್​, 12 ಜನರಲ್​ ಸೆಕೆಂಡ್​ ಕ್ಲಾಸ್​, 1 ಎಸ್​ಎಲ್​ಆರ್​ಒ, 1 ಲಗೇಜ್​​/ ಬ್ರೇಕ್​ ವ್ಯಾನ್ಸ್​​ ಕಮ್​ ಜನರೇಟ್​​ ಕಾರ್​ ಸೇರಿದಂತೆ ಒಟ್ಟು 19 ಬೋಗಿಗಳನ್ನು ಹೊಂದಿರಲಿದೆ.

ಹುಬ್ಬಳ್ಳಿ-ಯಶವಂತಪರ ರೈಲು

ಹುಬ್ಬಳ್ಳಿ-ಯಶವಂತಪುರ (07323) ವಿಶೇಷ ರೈಲು ಅಕ್ಟೋಬರ್​ 30 ರಂದು ಎಸ್​ಎಸ್​ಎಸ್​ ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಟು ಅದೇ ದಿನ ಸಂಜೆ 3:45ಕ್ಕೆ ಯಶವಂತಪುರ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ಈ ರೈಲು ಹಾವೇರಿ, ರಾಣೇಬೆನ್ನೂರು, ದಾವಣಗೆರೆ, ಬೀರೂರು, ಅರಸಿಕೇರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಈ ರೈಲು 1 ಎಸಿ ಫಸ್ಟ್​ ಕ್ಲಾಸ್ ಬೋಗಿ​, 2 ಎಸಿ ಟೂ ಟಯರ್ ಬೋಗಿಗಳು​, 4 ಎಸ್​ಇ 3 ಟಯರ್​ ಬೋಗಿಗಳು, ಎಸಿ 3 ಟಯರ್​ ಎಕಾನಾಮಿ, 6 ಸ್ಲೀಪರ್​ ಕ್ಲಾಸ್​, 2 ಜನರಲ್​ ಸೆಕೆಂಡ್​ ಕ್ಲಾಸ್​, 1 ಪ್ಯಾಂಟ್ರಿ ಕಾರ್ ಮತ್ತು 2 ಲಗೇಜ್​ ಬ್ರೇಕ್​​ ಮತ್ತು ಜನರಲ್​ ಕಾರ್ಸ್​​ ಸೇರಿದಂತೆ ಒಟ್ಟು 21 ಬೋಗಿಗಳನ್ನು ಹೊಂದಿರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ