ಬೆಂಗಳೂರು ವಾಯು ಮಾಲಿನ್ಯಕ್ಕೆ ಇದುವೇ ಮುಖ್ಯ ಕಾರಣ! ಸಂಶೋಧನೆಯಲ್ಲಿ ತಿಳಿದುಬಂದಿದ್ದೇನು ನೋಡಿ

ಬೆಂಗಳೂರಿನ ವಾಯುಮಾಲಿನ್ಯದಲ್ಲಿ ಸಾರಿಗೆ ವಲಯದ ಪ್ರಮುಖ ಪಾತ್ರವನ್ನು ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ. ಟ್ರಕ್‌ಗಳು ಮತ್ತು ವಾಣಿಜ್ಯ ವಾಹನಗಳು ಹೆಚ್ಚಿನ PM 2.5 ಕಣಗಳನ್ನು ಹೊರಸೂಸುತ್ತಿವೆ ಎಂದು ಕಂಡುಬಂದಿದೆ. ಕೈಗಾರಿಕೆಗಳಿಂದಲೂ ಮರ ಮತ್ತು ಕಲ್ಲಿದ್ದಲು ಸುಡುವಿಕೆಯಿಂದ ಮಾಲಿನ್ಯ ಉಂಟಾಗುತ್ತಿದೆ. ಅಧ್ಯಯನವು 80 ಮಾಲಿನ್ಯ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ.

ಬೆಂಗಳೂರು ವಾಯು ಮಾಲಿನ್ಯಕ್ಕೆ ಇದುವೇ ಮುಖ್ಯ ಕಾರಣ! ಸಂಶೋಧನೆಯಲ್ಲಿ ತಿಳಿದುಬಂದಿದ್ದೇನು ನೋಡಿ
ಸಾಂದರ್ಭಿಕ ಚಿತ್ರImage Credit source: Getty Images
Follow us
Ganapathi Sharma
|

Updated on: Oct 26, 2024 | 9:35 AM

ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನಲ್ಲಿ ಒಟ್ಟು ವಾಯು ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಿನ ಪಾಲು ಸಾರಿಗೆ ಕ್ಷೇತ್ರದ್ದೇ ಇರುವುದು ತಿಳಿದುಬಂದಿದೆ. ಟ್ರಕ್‌ಗಳು ಮತ್ತು ವಾಣಿಜ್ಯ ವಾಹನಗಳು ಬೆಂಗಳೂರಿನಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯಕಾರಕಗಳಾಗಿವೆ. ಇವುಗಳಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 39 ರಷ್ಟು PM 2.5 ಕಣಗಳ ಹೊರಸೂಸುವಿಕೆ ಆಗುತ್ತಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 48 ರಷ್ಟು ಮಾಲಿನ್ಯವಾಗುತ್ತಿದೆ.

ಕಡಿಮೆ ಮಾಲಿನ್ಯಕಾರಕ ಪರ್ಯಾಯ ಇಂಧನಗಳ ಲಭ್ಯತೆಯ ಹೊರತಾಗಿಯೂ ಮರ ಮತ್ತು ಕಲ್ಲಿದ್ದಲನ್ನು ಸುಡುವ ಮೂಲಕ ಕೈಗಾರಿಕೆಗಳು ಕೂಡ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂಬುದು ಅಧ್ಯಯನ ವರದಿಯೊಂದರಿಂದ ಬಹಿರಂಗವಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ. ಗುಫ್ರಾನ್ ಬೀಗ್ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಾಗಿತ್ತು. PM 2.5 ಕಣಗಳ ಹೊರಸೂಸುವಿಕೆ ಬಗ್ಗೆ ಸಂಶೋಧಕರು ಹಲವಾರು ತಿಂಗಳುಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ.

ಮೊದಲ ಬಾರಿಗೆ, ನಾವು ಅಲ್ಟ್ರಾ ಫೈನ್ ರೆಸಲ್ಯೂಶನ್​ನ (200 ಚದರ ಮೀಟರ್ ಗ್ರಿಡ್‌ಗಳು) 80 ಮಾಲಿನ್ಯ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದ್ದೇವೆ. ಈ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮುಖ ಮೂಲಗಳ ಪತ್ತೆ ಮಾಡಲಾಗಿದೆ. ಸಾರಿಗೆ ವಲಯವು ಅತಿದೊಡ್ಡ ಮಾಲಿನ್ಯಕಾರಕವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಬೀಗ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ತಿಳಿಸಿದೆ. ಅಧ್ಯಯನಕ್ಕೆ ಸಂಶೋಧಕರು ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಂಡಿದ್ದರು.

ವಾಯು ಮಾಲಿನ್ಯದ ಅಧ್ಯಯನ ಹೇಗೆ?

ಮಾಲಿನ್ಯಕಾರಕ ಅಂಶಗಳ ಬಗ್ಗೆ ಸಿಸಿಟಿವಿ ಕ್ಯಾಮರಾ ದೃಶ್ಯಗಳು, ಡ್ರೋನ್‌ಗಳ ಫೋಟೋ, ವೀಡಿಯೊ ಕ್ಲಿಪ್‌ಗಳನ್ನು ಬಳಸಿಕೊಂಡು ಅವುಗಳನ್ನು ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕ ಸಾಧನಗಳೊಂದಿಗೆ ವಿಶ್ಲೇಷಿಸಲಾಗಿದೆ. ಫಲಿತಾಂಶಗಳು ಬೆಂಗಳೂರಿನ ಗಾಳಿಯ ಗುಣಮಟ್ಟದ ಬಗ್ಗೆ ಸಂಪೂರ್ಣ ಚಿತ್ರಣವನ್ನು ನೀಡಿವೆ ಎಂದು ವರದಿ ಉಲ್ಲೇಖಿಸಿದೆ.

ಅವಧಿ ಮೀರಿದ ವಾಹನ, ಕಳಪೆ ನಿರ್ವಹಣೆ ಕಾರಣ

ಒಟ್ಟು ವಾಯು ಮಾಲಿನ್ಯದ ಅರ್ಧದಷ್ಟು ಸಾರಿಗೆ ವಲಯದ PM 2.5 ಹೊರಸೂಸುವಿಕೆಯಿಂದಲೇ ಆಗುತ್ತಿದೆ. ಇದಕ್ಕೆ ವಾಹನಗಳ ಕಳಪೆ ನಿರ್ವಹಣೆ ಅಥವಾ ಅವಧಿ ಮೀರಿದ ವಾಹನಗಳ ಬಳಕೆಯೂ ಕಾರಣದಿಂದಾಗಿರಬಹುದು. ಕಾರುಗಳು ಮತ್ತು ಎಸ್​​ಯುವಿಗಳಿಂದ ಹೆಚ್ಚು ಮಾಲಿನ್ಯ ಸಂಭವಿಸುತ್ತಿದೆ ಶೇ 22 ರಷ್ಟು ಪಾಲು ದ್ವಿಚಕ್ರ ವಾಹನಗಳದ್ದಾಗಿದೆ. ಆದರೆ, PM 2.5 ಕಣಗಳ ಸೂಸುವಿಕೆಗೆ ಅವುಗಳ ನೇರ ಕೊಡುಗೆ ಕಡಿಮೆಯಾಗಿದೆ. ಆದರೆ, ಇವುಗಳು ಸಂಚಾರ ದಟ್ಟಣೆಯನ್ನು ಉಂಟುಮಾಡುತ್ತವೆ. ಪರಿಣಾಮವಾಗಿ ಇತರ ವಾಹನಗಳಿಂದ ಹೊರಸೂಸುವಿಕೆ ಹೆಚ್ಚಾಗುತ್ತಿದೆ ಎಂದು ಬೀಗ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲಿ ಬೆಂಗಳೂರಿನಲ್ಲೂ ಉಬರ್​ ಷಟಲ್​ ಬಸ್​ ಸೇವೆ ಆರಂಭ!

ಬಾಯ್ಲರ್​​ಗಳಲ್ಲಿನ ಇಂಧನದ ಆಯ್ಕೆಯಿಂದ ಕೈಗಾರಿಕಾ ಮಾಲಿನ್ಯ ಉಂಟಾಗುತ್ತದೆ ಎಂದು ಅಧ್ಯಯನ ಹೇಳಿದೆ. ಕೈಗಾರಿಕೆಗಳು ಒಟ್ಟಾರೆ PM 2.5 ರ ಶೇಕಡಾ 24 ರಷ್ಟು ಹೊರಸೂಸುತ್ತವೆ. ಮುಖ್ಯವಾಗಿ ಜಿಲ್ಲೆಯ 19 ಶೇಕಡಾ ಕೈಗಾರಿಕೆಗಳಿಂದ ಮರ ಮತ್ತು ಕಲ್ಲಿದ್ದಲು ಸುಡುವಿಕೆಯಿಂದಾಗಿ ಸಂಭವಿಸುತ್ತಿದೆ. ಇದು PM 10 ರ ಹೆಚ್ಚಿನ ಹೊರಸೂಸುವಿಕೆಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ