ದೆಹಲಿಯಲ್ಲಿ ಕಾರು ಸ್ಫೋಟ: ಕರ್ನಾಟಕದಲ್ಲೂ ಹೈಅಲರ್ಟ್ ಘೋಷಣೆ, ಬಿಗಿ ಭದ್ರತೆಗೆ ಸೂಚನೆ

Delhi Red Fort Car Blast: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಸ್ಫೋಟಗೊಂಡಿರುವ ಘಟನೆ ನಡೆದಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. ಸದ್ಯ ಎಲ್ಲೆಡೆ ಹೈಅಲರ್ಟ್​ ಘೋಷಿಸಲಾಗಿದ್ದು, ಇತ್ತ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಮಹತ್ವದ ಆದೇಶ ಹೊರಡಿಸಿದ್ದಾರೆ.

ದೆಹಲಿಯಲ್ಲಿ ಕಾರು ಸ್ಫೋಟ: ಕರ್ನಾಟಕದಲ್ಲೂ ಹೈಅಲರ್ಟ್ ಘೋಷಣೆ, ಬಿಗಿ ಭದ್ರತೆಗೆ ಸೂಚನೆ
ಕಾರು ಸ್ಫೋಟ
Updated By: ಗಂಗಾಧರ​ ಬ. ಸಾಬೋಜಿ

Updated on: Nov 10, 2025 | 9:04 PM

ಬೆಂಗಳೂರು, ನವೆಂಬರ್​ 10: ದೆಹಲಿಯ ಕೆಂಪುಕೋಟೆಯ (Red Fort) ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಭಯಾನಕ ಕಾರು ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದ್ದು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಎಲ್ಲೆಡೆ ಹೈಅಲರ್ಟ್​ ಘೋಷಿಸಿದ್ದು, ಇತ್ತ ಕರ್ನಾಟಕದಲ್ಲೂ (Karnataka) ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಡಿಜಿ&ಐಜಿಪಿ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲೂ ಕಟ್ಟೆಚ್ಚರ 

ದೆಹಲಿಯಲ್ಲಿ ಕಾರು ಸ್ಫೋಟ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ. ಏರ್​ಪೋರ್ಟ್, ಬಂದರು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ,  ಜಿಲ್ಲೆಗಳಲ್ಲಿ ನಿಗಾವಹಿಸುವಂತೆ ಎಸ್​ಪಿಗಳಿಗೆ ಡಿಜಿ&ಐಜಿಪಿ ಆದೇಶಿಸಿದ್ದಾರೆ.

ಇದನ್ನೂ ಓದಿ: Delhi Blast: ದಿಲ್ಲಿ ಕೆಂಪುಕೋಟೆ ಬಳಿ ಸ್ಫೋಟ: ಕನಿಷ್ಠ 9 ಜನ ಸಾವು, ಎಲ್ಲೆಡೆ ಹೈಅಲರ್ಟ್​

ಇನ್ನು ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಕಮಿಷನರ್​​​ ಸೂಚಿಸಿದ್ದಾರೆ. ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಬೇಕು. ಲಾಡ್ಜ್​ಗಳನ್ನು ತಪಾಸಣೆ ಮಾಡಿ, ಲಾಡ್ಜ್‌ನಲ್ಲಿ ತಂಗಿರುವ ಹೊರ ರಾಜ್ಯದವರ ವಿಚಾರಣೆ ಮಾಡಬೇಕು. ರಾತ್ರಿ ವೇಳೆ ಗಸ್ತು ಹೆಚ್ಚಳ ಮಾಡುವಂತೆ ಡಿಸಿಪಿ, ಎಸಿಪಿ, ಇನ್ಸ್​ಪೆಕ್ಟರ್​ಗಳಿಗೆ ಬೆಂಗಳೂರು ನಗರ ಪೊಲೀಸ್​ ಕಮಿಷನರ್​​ ಸೀಮಂತ್​ ಕುಮಾರ್ ಸಿಂಗ್​​ ಸೂಚನೆ ನೀಡಿದ್ದಾರೆ.

ನಡೆದದ್ದೇನು?

ಸೋಮವಾರ ಸಂಜೆ 6 ಗಂಟೆ 50 ನಿಮಿಷದ ಸುಮಾರಿಗೆ ದೆಹಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಬಳಿ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಮಾರುತಿ ಇಕೋ ವ್ಯಾನ್​​ ಸ್ಫೋಟವಾಗಿದೆ. ಸ್ಫೋಟದ ತೀವ್ರತೆ ಅದೆಷ್ಟರ ಮಟ್ಟಿಗೆ ಇತ್ತೆಂದರೆ, ಸ್ಥಳದಲ್ಲಿ ಓಡಾಡುತ್ತಿದ್ದ ಹಲವರ ದೇಹಗಳು ಛಿದ್ರ ಛಿದ್ರವಾಗಿವೆ. ರಸ್ತೆಯಲ್ಲಿ, ಕಾರಿನ ಮೇಲೆ ಮೃತದೇಹಗಳು ಪೀಸ್ ಪೀಸ್ ಆಗಿ ರಕ್ತ ಸಿಕ್ತವಾಗಿ ಬಿದ್ದಿವೆ.

ಇದನ್ನೂ ಓದಿ: ಕೆಂಪು ಕೋಟೆ ಬಳಿ ಕಾರು ಸ್ಫೋಟವಾಗಿ 8 ಜನ ಸಾವು; ದೆಹಲಿಯಲ್ಲಿ ಹೈ ಅಲರ್ಟ್

ಇನ್ನು ಬೆಂಕಿ ಅದೆಷ್ಟರ ಮಟ್ಟಿಗೆ ವ್ಯಾಪಿಸಿತು ಅಂದರೆ ನೋಡ ನೋಡುತ್ತಲೇ ಅಲ್ಲೇ ನಿಂತಿದ್ದ ಹಲವು ವಾಹನಗಳಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಸ್ಫೋಟದಲ್ಲಿ ಒಟ್ಟು 9ಕ್ಕೂ ಹೆಚ್ಚು ವಾಹನಗಳೂ ಸಹ ಹೊತ್ತಿ ಉರಿದಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:00 pm, Mon, 10 November 25