Delta Plus: ಕರ್ನಾಟಕ ರಾಜ್ಯದ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಪ್ರಬೇಧದ ಕೊರೊನಾ ವೈರಸ್ ಪತ್ತೆ

| Updated By: ganapathi bhat

Updated on: Jun 22, 2021 | 4:00 PM

ಡೆಲ್ಟಾ ಪ್ಲಸ್ ವೈರಸ್, ಭಾರತದಲ್ಲಿ ಕಂಡುಬಂದ ಡೆಲ್ಟಾ ಮಾದರಿ ವೈರಾಣುವಿನ ರೂಪಾಂತರ ಎನ್ನಲಾಗುತ್ತಿದೆ. ಈ ಸ್ವರೂಪದ ವೈರಸ್ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸ್ವರೂಪದ ತಲಾ 21 ಹಾಗೂ 25 ಕೇಸ್ ಪತ್ತೆಯಾಗಿದೆ.

Delta Plus: ಕರ್ನಾಟಕ ರಾಜ್ಯದ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಪ್ರಬೇಧದ ಕೊರೊನಾ ವೈರಸ್ ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಕರ್ನಾಟಕ ರಾಜ್ಯದಲ್ಲೂ ಕಂಡುಬಂದಿದೆ. ಕರ್ನಾಟಕ ರಾಜ್ಯದ ಇಬ್ಬರು ಕೊರೊನಾ ಸೋಂಕಿತರಲ್ಲಿ ಡೆಲ್ಟಾ ಪ್ಲಸ್ ಪ್ರಬೇಧ ಪತ್ತೆಯಾಗಿದೆ. ಬೆಂಗಳೂರು, ಮೈಸೂರಿನ ತಲಾ ಒಬ್ಬರಲ್ಲಿ ಡೆಲ್ಟಾ ಪ್ಲಸ್ ಕೊವಿಡ್-19 ಇರುವುದು ಖಚಿತವಾಗಿದೆ. ಈ ಬಗ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಡೆಲ್ಟಾ ಪ್ಲಸ್ ವೈರಸ್, ಭಾರತದಲ್ಲಿ ಕಂಡುಬಂದ ಡೆಲ್ಟಾ ಮಾದರಿ ವೈರಾಣುವಿನ ರೂಪಾಂತರ ಎನ್ನಲಾಗುತ್ತಿದೆ. ಈ ಸ್ವರೂಪದ ವೈರಸ್ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸ್ವರೂಪದ ತಲಾ 21 ಹಾಗೂ 25 ಕೇಸ್ ಪತ್ತೆಯಾಗಿದೆ.

ಡೆತ್ ಆಡಿಟ್ ವರದಿ ರಾಜ್ಯ ಸರ್ಕಾರಕ್ಕೆ
ಡೆತ್ ಆಡಿಟ್ ವರದಿ ರಾಜ್ಯ ಸರ್ಕಾರದ ಕೈ ಸೇರಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ. ಅನ್‌ಲಾಕ್ ವೇಳೆ ಜನರ ಬೇಕಾಬಿಟ್ಟಿ ಓಡಾಟ ವಿಚಾರವಾಗಿ, ತಜ್ಞರ ವರದಿ ಆಧರಿಸಿ ಬಿಬಿಎಂಪಿ ಕ್ರಮಕೈಗೊಳ್ಳಲಿದೆ. ಅನ್‌ಲಾಕ್ ನಂತರ ಕೊವಿಡ್ ನಿಯಮ ಸರಿಯಾಗಿ ಪಾಲನೆ ಆಗ್ತಿಲ್ಲ. ಆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿನ್ನೆ ಬೆಂಗಳೂರಲ್ಲಿ ಅತಿ ಹೆಚ್ಚು ವ್ಯಾಕ್ಸಿನ್ ನೀಡಿಕೆ‌ ಆಗಿರುವ ಬಗ್ಗೆ ಗೌರವ್ ಗುಪ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಬರುವ ದಿನಗಳಲ್ಲಿ ಲಸಿಕೆ ನೀಡಿಕೆ ಇನ್ನಷ್ಟು ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ. ಮೂರನೇ ಅಲೆ ತಡೆಯೋಕೆ ವ್ಯಾಕ್ಸಿನ್ ಒಂದೇ ಮಾರ್ಗ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಮಕ್ಕಳು, ವಯಸ್ಕರಲ್ಲಿ ಸೋಂಕಿನ ಪ್ರಮಾಣ ಒಂದೇ ಇದೆ. ಶಾಲೆ ಆರಂಭ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Delta Plus Variant: ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಎಂದರೇನು? ರೂಪಾಂತರಿ ವೈರಾಣು ಎಷ್ಟು ಅಪಾಯಕಾರಿ, ಇದರಿಂದ ರಕ್ಷಣೆ ಹೇಗೆ?

Corona Vaccine: ಡೆಲ್ಟಾ ಮಾದರಿ ವಿರುದ್ಧ ಕೊವಿಶೀಲ್ಡ್​ ಮೊದಲ ಡೋಸ್​ ಶೇ.61ರಷ್ಟು ಪರಿಣಾಮಕಾರಿ: ಡಾ.ಎನ್​.ಕೆ ಅರೋರಾ