ಬೆಂಗಳೂರಿನಲ್ಲಿ ಸೈಲೆಂಟ್​ ಆಗಿ ಡೆಂಘಿ ಹೆಚ್ಚಳ: ಮೂರುವರೇ ತಿಂಗಳಲ್ಲಿ 435 ಮಂದಿಗೆ ಡೆಂಘಿ ದೃಢ

ಬೆಂಗಳೂರಿನಲ್ಲಿ ಅಕಾಲಿಕ ಮಳೆಯಿಂದಾಗಿ ಡೆಂಘಿ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ 2361 ಶಂಕಿತರ ಪರೀಕ್ಷೆಯಲ್ಲಿ 435 ಮಂದಿಗೆ ಡೆಂಘಿ ದೃಢಪಟ್ಟಿದೆ. ಆರೋಗ್ಯ ಇಲಾಖೆ ಅಲರ್ಟ್​ ಆಗಿದ್ದು, ಸೊಳ್ಳೆ ನಿಯಂತ್ರಣ ಮತ್ತು ಸ್ವಚ್ಛತೆಗೆ ಒತ್ತು ನೀಡಲಾಗುತ್ತಿದೆ. ಜನರು ಸಹ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಸೈಲೆಂಟ್​ ಆಗಿ ಡೆಂಘಿ ಹೆಚ್ಚಳ: ಮೂರುವರೇ ತಿಂಗಳಲ್ಲಿ 435 ಮಂದಿಗೆ ಡೆಂಘಿ ದೃಢ
ಡೆಂಘಿ
Edited By:

Updated on: Apr 27, 2025 | 8:14 AM

ಬೆಂಗಳೂರು, ಏಪ್ರಿಲ್​ 27: ಸುಡು ಬಸಿಲಿಗೆ ಸಿಲಿಕಾನ್​ ಸಿಟಿ ಜನರು ಕಂಗಲಾಗಿದ್ದಾರೆ. ವಾರದ ಹಿಂದೆ ಸುರಿದ ಮಳೆ ನಗರವನ್ನು ಕೊಂಚ ತಂಪಾಗಿಸಿತ್ತು. ಈ ಮಧ್ಯೆ ನಗರದಲ್ಲಿ ಇದೀಗ ಮತ್ತೆ ಡೆಂಘಿ (Dengue) ಭೀತಿ ಶುರುವಾಗಿದೆ‌‌. ಅಕಾಲಿಕ ಮಳೆ (rain) ಸೊಳ್ಳೆಯಿಂದ ಉತ್ಪತ್ತಿಯಾಗುವ ಡೆಂಘಿ ಕೇಸ್​ಗಳ ಏರಿಕೆಗೆ ಕಾರಣವಾಗಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಕಳೆದ ಮೂರುವರೇ ತಿಂಗಳಲ್ಲಿ 2,361 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 435 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ.

ರಾಜಧಾನಿಯಲ್ಲಿ ಈಗ ಡೆಂಘಿ ಭೀತಿ ಶುರುವಾಗಿದೆ‌‌. ಅರೆ ಇದೇನಿದು ಮಳೆಗಾಲ‌ ಶುರುವಾಗಿಲ್ಲ ಮತ್ತೇನು ಭಯ ಎಂದು ಪ್ರಶ್ನೆ ಮೂಡಬಹುದು? ಆದರೆ ಅಕಾಲಿಕ ಬೇಸಿಗೆಯ ಮಳೆಗೂ ಡೆಂಘಿ ಪ್ರಕರಣ ಕಂಡು ಬರುತ್ತಿವೆ. ಕಳೆದ ವಾರದ ಹಿಂದಷ್ಟೆ ನಗರದಲ್ಲಿ ಸುರಿದ ಮಳೆಯಿಂದ ಡೆಂಘಿ ಹರಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಚಿಕೂನ್ ಗುನ್ಯಾ, ಡೆಂಗ್ಯೂ: ಒಂದೇ ವಾರದಲ್ಲಿ 100ಕ್ಕೂ ಹೆಚ್ಚು ಪ್ರಕರಣ

ಇದನ್ನೂ ಓದಿ
ಇಂದಿನಿಂದ ಒಂದು ವಾರ ಕರ್ನಾಟಕದಾದ್ಯಂತ ಸುರಿಯಲಿದೆ ಭಾರಿ ಮಳೆ
ನಮ್ಮ ಮೆಟ್ರೋದಲ್ಲಿ ಕುಳಿತು ವಿಮಲ್‌ ಪಾನ್‌ ಮಸಾಲಾ ಜಗಿದ ಪ್ರಯಾಣಿಕ
ಪ್ರಯಾಣಿಕರ ಗಮನಕ್ಕೆ: ಭಾನುವಾರದಂದು ನಮ್ಮ ಮೆಟ್ರೋ ನಸುಕಿನಿಂದಲೇ ಆರಂಭ
Dengue Fever: ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಡೆಂಘಿ ಕೇಸ್​​; ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ

ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಡೆಂಘಿ ಕೇಸ್ ಹೆಚ್ಚಳವಾಗಿವೆ. ಪೂರ್ವ ಮುಂಗಾರು ಮಳೆ ಎಫೆಕ್ಟ್ ಬೇಸಿಗೆಯಲ್ಲಿಯೇ ಡೆಂಘಿ ಕೇಸ್ ಹೆಚ್ಚಳ ಕಂಡು ಬರುತ್ತಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿದ್ದು, 2,361 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ ನಗರದಲ್ಲಿ 435 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ.

ಪ್ರತಿ ವರ್ಷ ಮುಂಗಾರು ಮಳೆ ಕಾಣಿಸಿಕೊಂಡ ಬಳಿಕ ಈ ಜ್ವರ ಹೆಚ್ಚಿನವರನ್ನು ಬಾಧಿಸುತ್ತಿತ್ತು. ಆದರೆ ಈಗ ಬೇಸಿಗೆಯಲ್ಲಿಯೇ ಸೊಳ್ಳೆ ಕಾಟದಿಂದ ಡೆಂಘಿ ಜ್ವರ ಹೆಚ್ಚಳವಾಗಿದೆ. ಕಳೆದ ವರ್ಷ ಡೆಂಘಿ ಕೇಸ್ 32 ಸಾವಿರದ ಗಡಿ ದಾಟಿತ್ತು. ಈ ವರ್ಷ ಏಪ್ರಿಲ್‌ನಲ್ಲಿ ಸುರಿದ ಮಳೆಯಿಂದಾಗಿ ಮುಂಗಾರು ಪೂರ್ವದಲ್ಲಿಯೇ ಡೆಂಘಿ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಯಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಬೆಂಗಳೂರು ನಗರ ಸೇರಿದ್ದಂತೆ ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೂ ಡೆಂಘಿ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆಗಳ ಬಗ್ಗೆ ಸೂಚನೆ ನೀಡಿದೆ.

ರಾಜಧಾನಿಯಲ್ಲಿ ಮಳೆ ಎಂಟ್ರಿ ಜೊತೆ ಸೈಲೆಂಟ್ ಡೆಂಘಿ ಕಂಡು ಬರುತ್ತಿದ್ದು, ಅಕಾಲಿಕ ಮಳೆ ಹಿನ್ನೆಲೆ ಮತ್ತೆ ಡೆಂಘಿ ಆರ್ಭಟಿಸುವ ಆತಂಕ ಶುರುವಾಗಿದೆ. ಈಗಾಗಲೇ ಜ್ವರ, ವೈರಲ್ ಫೀವರ್ ಎಂದು ಆಸ್ಪತ್ರೆಯತ್ತ ಮುಖ ಮಾಡಿರುವ ಜನ. ತಪಾಸಣೆ ನಡುವೆ ಜನರಲ್ಲಿ ಡೆಂಘಿ ಸಿಂಟಮ್ಸ್ ಕಂಡು ಬರ್ತಿವೆ. ಹೀಗಾಗಿ ಮತ್ತೆ ಡೆಂಘಿ ಪರೀಕ್ಷೆಗೆ ಚಿಂತನೆ ಶುರುವಾಗಿದ್ದು, ನಗರದಲ್ಲಿ ಸೈಲೆಂಟ್ ಆಗಿದ್ದ ಡೆಂಘಿ ಸಕ್ರಿಯ ಪ್ರಕರಣಗಳು ಕೂಡ ಎರಿಕೆಯಾಗುತ್ತಿವೆ.

ಇದನ್ನೂ ಓದಿ: Dengue Fever: ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಡೆಂಘಿ ಕೇಸ್​​; ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ

ಒಂದು ಕಡೆ ಡೆಂಘಿ ಜ್ವರ ಜೊತೆಗೆ ಚಿಕನ್ ಗುನ್ಯಾ ವೈರಲ್ ಜ್ವರದ ಕೇಸ್ ಕೂಡಾ ಹೈಕ್ ಆಗಿದ್ದು, ಎಚ್ಚರವಹಿಸಿ ಅಂತಿದ್ದಾರೆ ವೈದ್ಯರು. ಜನರಿಗೆ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದ್ದು, ಮನೆ ಸುತ್ತಾಮುತ್ತ ನೀರು ಸಂಗ್ರಹವಾಗದ್ದಂತೆ ಶ್ವಚ್ಛತೆ ಬಗ್ಗೆ ನಿಗಾವಹಿಸುವಂತೆ ಸಲಹೆ ನೀಡಿದ್ದಾರೆ.

ಸೊಳ್ಳೆ ಕಚ್ಚಿದ 7 ದಿನಗಳಲ್ಲಿ ರೋಗ ಲಕ್ಷಣಗಳು 

ಈಡಿಸ್ ಸೊಳ್ಳೆಯಿಂದಲೇ ಡೆಂಘಿ ಹರಡುತ್ತಿದ್ದು, ಸೊಳ್ಳೆ ಕಚ್ಚಿದ 7 ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸುತ್ತದೆ. ಬೆಳಗಿನ ಹೊತ್ತು ಸೊಳ್ಳೆ ಕಚ್ಚುವಿಕೆಯಿಂದ ಪಾರಾಗುವುದು ಅತ್ಯವಶ್ಯ. ಹೀಗಾಗಿ ಎಚ್ಚರಿಕೆ ಇರಲಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:10 am, Sun, 27 April 25