ರಾಷ್ಟ್ರಕವಿ ಕುವೆಂಪುಗೆ ಅವಮಾನ ಮಾಡಿದ ಶಿಕ್ಷಣ ಇಲಾಖೆ; ಬೇಸರ ಹೊರಹಾಕುತ್ತಿರುವ ಶಿಕ್ಷಕರು

| Updated By: sandhya thejappa

Updated on: May 23, 2022 | 11:16 AM

ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಕವಿ ಕುವೆಂಪು ಕಥೆ, ಕವನ ಬರೆಯುವ ಪುಸ್ತಕ ಓದುವ ಅಭ್ಯಾಸ ಇತ್ತು. ಆದರೆ ಕುವೆಂಪು ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಅಂತಾ ಪರಿಚಯಿಸಲಾಗಿದೆ.

ರಾಷ್ಟ್ರಕವಿ ಕುವೆಂಪುಗೆ ಅವಮಾನ ಮಾಡಿದ ಶಿಕ್ಷಣ ಇಲಾಖೆ; ಬೇಸರ ಹೊರಹಾಕುತ್ತಿರುವ ಶಿಕ್ಷಕರು
ಪರಿಸರ ಅಧ್ಯಯನ ಪಠ್ಯದಲ್ಲಿ ಕವಿ ಕುವೆಂಪು ಪಾಠ
Follow us on

ಬೆಂಗಳೂರು: ಇದೇ ತಿಂಗಳು 16ರಿಂದ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳು (Schools) ಪುನಾಂಭಗೊಂಡಿವೆ. ಶಾಲೆ ಶುರುವಾಗುತ್ತಿದ್ದಂತೆ ಪಠ್ಯ ಪುಸ್ತಕದ (Text Book) ತಲೆ ನೋವೂ ಶುರುವಾಗಿದೆ. ಈ ಬಾರಿ ಶಿಕ್ಷಣ ಇಲಾಖೆ ಕೆಲವರ ಪಾಠವನ್ನು ಪಠ್ಯದಿಂದ ತೆಗೆದು ಹೊಸ ಪಾಠವನ್ನು ಸೇರಿಸಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪಠ್ಯ ಪರಿಷ್ಕರಣೆ ಶಾಲಾ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು, ಶಿಕ್ಷಣ ಇಲಾಖೆ ರಾಷ್ಟ್ರಕವಿ ಕುವೆಂಪುಗೂ ಅವಮಾನ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಕವಿ ಕುವೆಂಪು ಕಥೆ, ಕವನ ಬರೆಯುವ ಪುಸ್ತಕ ಓದುವ ಅಭ್ಯಾಸ ಇತ್ತು. ಆದರೆ ಕುವೆಂಪು ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಅಂತಾ ಪರಿಚಯಿಸಲಾಗಿದೆ. ಕುವೆಂಪು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತರಾದರಾ? ಅಂತಾ ವಿರೋಧ ವ್ಯಕ್ತವಾಗುತ್ತಿದೆ. ದಿನಕ್ಕೊಂದು ತಪ್ಪು ಹೊರಬರುತ್ತಿರುವ ಹಿನ್ನೆಲೆ ಶಿಕ್ಷಕರೂ ಬೇಸರಗೊಂಡಿದ್ದಾರೆ.

ಇದನ್ನೂ ಓದಿ: ಮದರಸಾಗಳ ಬಾಗಿಲು ಮುಚ್ಚಿಸಿ, ಮುಸ್ಲಿಮರಿಗೆ ಉಪಕಾರ ಮಾಡುತ್ತೇನೆ: ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶರ್ಮಾ

ಇದನ್ನೂ ಓದಿ
ಕೊವಿಡ್ ಭೀತಿ: ಸೌದಿ ಪ್ರಜೆಗಳಿಗೆ ಭಾರತ ಸೇರಿ 15 ದೇಶಗಳಿಗೆ ಸಂಚಾರ ನಿರ್ಬಂಧ
ಮದರಸಾಗಳ ಬಾಗಿಲು ಮುಚ್ಚಿಸಿ, ಮುಸ್ಲಿಮರಿಗೆ ಉಪಕಾರ ಮಾಡುತ್ತೇನೆ: ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶರ್ಮಾ
ಮಸೀದಿಗಳಿಂದ ತೆರವುಗೊಳಿಸಿದ್ದ ಧ್ವನಿವರ್ಧಕಗಳನ್ನು ಶಾಲೆಗಳಿಗೆ ದಾನ ಮಾಡಲಾಗುತ್ತಿದೆ : ಯೋಗಿ ಆದಿತ್ಯನಾಥ್
IPL 2022 Points Table: ಲೀಗ್ ಪಂದ್ಯಗಳು ಮುಕ್ತಾಯ: ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

ಇಂದು ಬೆಳಿಗ್ಗೆ ಸಮಾಲೋಚನಾ ಸಭೆ:
ಆರ್​ಎಸ್​ಎಸ್​ ಸಂಸ್ಥಾಪಕ ಹೆಡ್ಗೆವಾರ್​​ ಪಾಠ ಸೇರ್ಪಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಕೇಸರಿ ಪಠ್ಯಕ್ರಮ ವಿರೋಧಿಸಿ ರಾಜ್ಯಮಟ್ಟದ ಸಮಾಲೋಚನಾ ಸಭೆ ನಡೆಯಲಿದೆ. ಬೆಂಗಳೂರಿನ ಅಲ್ಯೂಮಿನಿಯಂ ಅಸೋಸಿಯೇಷನ್​ ಹಾಲ್​ನಲ್ಲಿ ವಿದ್ಯಾರ್ಥಿ ಸಂಘಟನೆಗಳಿಂದ ಬೆಳಗ್ಗೆ 11ಕ್ಕೆ ಸಮಾಲೋಚನಾ ಸಭೆ ನಡೆಯುತ್ತದೆ. ಸಭೆಯಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಪ್ರಗತಿಪರ ಚಿಂತಕರು ಭಾಗಿಯಾಗಲಿದ್ದಾರೆ.

ಯುಟರ್ನ್ ಹೊಡೆದ ಸರ್ಕಾರ:
ಭಗತ್ ಸಿಂಗ್ ಪಾಠ ಕೈಬಿಟ್ಟ ವಿಚಾರದಲ್ಲಿ ಸರ್ಕಾರ ಯುಟರ್ನ್ ಹೊಡೆದಿದೆ. 10ನೇ ತರಗತಿ ಕನ್ನಡ ವಿಷಯದಲ್ಲಿದ್ದ ಭಗತ್ ಸಿಂಗ್ ಪಾಠವನ್ನು ತೆಗೆದು ಶಿವನಾಂದ ಕಳೆವೆಯವರ ಪಾಠವನ್ನು ಸೇರಿಸಲಾಗಿತ್ತು. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿತ್ತು. ಜೊತೆಗೆ ಭಾರೀ ವಿರೊಧ ವ್ಯಕ್ತವಾಗುತ್ತಿತ್ತು. ಈ ಬೆನ್ನಲ್ಲೆ ಶಿಕ್ಷಣ ಇಲಾಖೆ ಮತ್ತೆ ಭಗತ್ ಸಿಂಗ್ ಪಠ್ಯ ಸೇರಿಸಲು ನಿರ್ಧರಿಸಿದೆ. ಶಾಲೆಗಳಿಗೆ ಈಗಾಗಲೇ ಪಠ್ಯಪುಸ್ತಕ ಸರಬರಾಜು ಮಾಡಲಾಗುತ್ತಿದೆ. ಭಗತ್ ಸಿಂಗ್ ಪಾಠ ಕೈಬಿಟ್ಟ ವಿಚಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ 10ನೇ ತರಗತಿ ಕನ್ನಡ ಪುಸ್ತಕ ಸರಬರಾಜಿಗೆ ತಡೆ ಹಿಡಿಯಲಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Mon, 23 May 22