ನಂಜನಗೂಡು ಜಾತ್ರೆಗೆ ಅನುಮತಿ ನೀಡದಿದ್ರೆ ನಾಳೆ ಅಘೋಷಿತ ಬಂದ್‌ -ಭಕ್ತರಿಂದ ಸರ್ಕಾರಕ್ಕೆ ಖಡಕ್​ ವಾರ್ನಿಂಗ್​!

ನಂಜನಗೂಡು ಜಾತ್ರೆಗೆ ಅನುಮತಿ ನೀಡುವಂತೆ ಭಕ್ತರಿಂದ ಒತ್ತಡ ಹೆಚ್ಚಾಗಿದೆ. ಈ ನಡುವೆ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಭಕ್ತರು ಹೊಸ ಡೆಡ್‌ಲೈನ್ ಫಿಕ್ಸ್​ ಮಾಡಿದ್ದಾರೆ. ನಂಜನಗೂಡು ಜಾತ್ರೆಗೆ ಅನುಮತಿ ನೀಡುವಂತೆ ಇಂದು ರಾತ್ರಿವರೆಗೆ ಭಕ್ತರು ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ್ದಾರೆ.

ನಂಜನಗೂಡು ಜಾತ್ರೆಗೆ ಅನುಮತಿ ನೀಡದಿದ್ರೆ ನಾಳೆ ಅಘೋಷಿತ ಬಂದ್‌ -ಭಕ್ತರಿಂದ ಸರ್ಕಾರಕ್ಕೆ ಖಡಕ್​ ವಾರ್ನಿಂಗ್​!
‘ನಂಜನಗೂಡು ಜಾತ್ರೆಗೆ ಅನುಮತಿ ನೀಡದಿದ್ರೆ ನಾಳೆ ಅಘೋಷಿತ ಬಂದ್‌’

Updated on: Mar 19, 2021 | 6:44 PM

ಮೈಸೂರು: ನಂಜನಗೂಡು ಜಾತ್ರೆಗೆ ಅನುಮತಿ ನೀಡುವಂತೆ ಭಕ್ತರಿಂದ ಒತ್ತಡ ಹೆಚ್ಚಾಗಿದೆ. ಈ ನಡುವೆ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಭಕ್ತರು ಹೊಸ ಡೆಡ್‌ಲೈನ್ ಫಿಕ್ಸ್​ ಮಾಡಿದ್ದಾರೆ. ನಂಜನಗೂಡು ಜಾತ್ರೆಗೆ ಅನುಮತಿ ನೀಡುವಂತೆ ಇಂದು ರಾತ್ರಿವರೆಗೆ ಭಕ್ತರು ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ್ದಾರೆ.

ಒಂದು ವೇಳೆ, ಜಾತ್ರೆಗೆ ಅನುಮತಿ ನೀಡದಿದ್ರೆ ನಾಳೆ ಅಘೋಷಿತ ಬಂದ್‌ಗೆ ಕರೆ ನೀಡ್ತೇವೆ. ನಂಜನಗೂಡು ಪಟ್ಟಣದಲ್ಲಿ ಬಂದ್‌ಗೆ ಕರೆ ನೀಡುವ ಎಚ್ಚರಿಕೆಯನ್ನು ಭಕ್ತರು ಕೊಟ್ಟಿದ್ದಾರೆ. ಜೊತೆಗೆ, ನಾಳೆ ನಂಜನಗೂಡಿನಲ್ಲಿ ಅಂಗಡಿ ಮುಂಗಟ್ಟುಗಳು ಮತ್ತು ಆಟೋ ಸಂಚಾರ ಬಂದ್ ಆಗುವ ಸಾಧ್ಯತೆ ಸಹ ಇದೆ. ಈ ಮೂಲಕ, ಭಕ್ತರು ರಾಜ್ಯಸರ್ಕಾರದ ವಿರುದ್ಧವೇ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಭಕ್ತರಿಂದ ಸರ್ಕಾರಕ್ಕೆ ಖಡಕ್​ ವಾರ್ನಿಂಗ್​

ಇದನ್ನೂ ಓದಿ: ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಕೋರ್ಟ್, ಯುವಕನನ್ನು ಶನಿವಾರ ಹಾಜರು ಪಡಿಸುವಂತೆ ಆದೇಶ

Published On - 6:30 pm, Fri, 19 March 21