‘ಸತ್ಯ ಹೇಳು’ ಎಂದು ಠಾಣೆಗೆ ಕರೆಸಿ ಬಾಲಕಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಎಸಿಪಿ?
ಅಪ್ರಾಪ್ತೆಯೊಬ್ಬಳಿಗೆ ಮಹಿಳಾ ಎಸಿಪಿಯೊಬ್ಬರು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಅಪ್ರಾಪ್ತೆಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಎಸಿಪಿ ಅನುಷಾ ಕಪಾಳ ಮೋಕ್ಷ ಮಾಡಿದ್ದರು ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ.
ಧಾರವಾಡ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮಹಿಳಾ ಎಸಿಪಿಯೊಬ್ಬರು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಅಪ್ರಾಪ್ತೆಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಎಸಿಪಿ ಅನುಷಾ ಕಪಾಳಮೋಕ್ಷ ಮಾಡಿದ್ದರು ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ.
ಏನಿದು ಕಪಾಳಮೋಕ್ಷದ ಆರೋಪ? ಅಂದ ಹಾಗೆ, ಬಾಲಕನೋರ್ವ ಪ್ರತಿನಿತ್ಯವೂ ಅಪ್ರಾಪ್ತೆಗೆ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಈ ಕುರಿತು ಉಪನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕೇಸ್ ಸಂಬಂಧ ವಿಚಾರಣೆ ನಡೆಸಲು ಬಾಲಕಿಯನ್ನು ಠಾಣೆಗೆ ಕರೆಸಿದಾಗ ಎಸಿಪಿ ಅನುಷಾ ಬಾಲಕಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ. ಹುಡುಗಿಗೆ ಸತ್ಯ ಹೇಳುವಂತೆ ಎಸಿಪಿ ಅನುಷಾ ಕಪಾಳ ಮೋಕ್ಷ ಮಾಡಿದರು ಎಂದು ಆಕೆ ತಂದೆ ಆರೋಪಿಸಿದ್ದಾರೆ. ಇದಲ್ಲದೆ, ಬಟ್ಟೆ ಬಿಚ್ಚಿ ಹೊಡೆಯುವುದಾಗಿ ಬೆದರಿಕೆ ಸಹ ಒಡ್ಡಿದರು ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಾಕಿ ಹಣ ಕೊಡೋವರೆಗೂ ಬರಲ್ಲ -ಸೋಂಕಿತರ ಶಿಫ್ಟ್ ಮಾಡಲು ಆ್ಯಂಬುಲೆನ್ಸ್ ಚಾಲಕರು ನಕಾರ