ಸರ್ಕಾರಿ ಕಚೇರಿ ಆವರಣದಲ್ಲಿ ಮಾತ್ರ ಮುಖ್ಯಮಂತ್ರಿಗಳಿಗೆ ಗೌರವ ರಕ್ಷೆ; ಅಧಿಕೃತ ಸೂಚನೆ ರವಾನೆ
ಆದರೆ ರಾಜ್ಯದ ರಾಜ್ಯಪಾಲರು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರುಗಳಿಗೆ ಮಾತ್ರ ಒಂದೇ ಬಾರಿ ಗೌರವ ರಕ್ಷೆ ನೀಡುವ ಸೂಚನೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಬೆಂಗಳೂರು: ಸರ್ಕಾರಿ ಕಚೇರಿ ಆವರಣಗಳಲ್ಲಿ ಮಾತ್ರ ಮುಖ್ಯಮಂತ್ರಿ ಅವರಿಗೆ ಗೌರವ ರಕ್ಷೆ ನೀಡಲು ರಾಜ್ಯ ಸರ್ಕಾರದಿಂದ ಅಧಿಕೃತ ಸೂಚನೆ ನೀಡಲಾಗಿದೆ. ಜತೆಗೆ ದಿನಕ್ಕೊಂದು ಬಾರಿ ಮಾತ್ರ ಗೌರವ ರಕ್ಷೆ ಕೊಡಲು ಸೂಚಿಸಲಾಗಿದ್ದು, ಗಣ್ಯರು ನಿರ್ಗಮಿಸುವಾಗ ಗೌರವ ರಕ್ಷೆ ನೀಡುವುದನ್ನು ರದ್ದುಗೊಳಿಸಲಾಗಿದೆ. ಆದರೆ ರಾಜ್ಯದ ರಾಜ್ಯಪಾಲರು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರುಗಳಿಗೆ ಮಾತ್ರ ಒಂದೇ ಬಾರಿ ಗೌರವ ರಕ್ಷೆ ನೀಡುವ ಸೂಚನೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ನಾಳೆ ರಾಜ್ಯ ಸರ್ಕಾರದಿಂದ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯ ಅಧಿಕೃತ ಆಚರಣೆ; ಸಿಎಂಬ ಬೊಮ್ಮಾಯಿ ಘೋಷಣೆ ಕನ್ನಡ ನಾಡಿನ ವೀರ ಪುರುಷ ಸಂಗೊಳ್ಳಿ ರಾಯಣ್ಣನವರ ಜನ್ಮದಿನವನ್ನು ಅಧಿಕೃತವಾಗಿ ಆಚರಿಸುವ ಬೇಡಿಕೆ ಇತ್ತು. ಈ ಬೇಡಿಕೆಯನ್ನು ಪರಿಗಣಿಸಿ ನಾಳೆ ಅಧಿಕೃತವಾಗಿ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಆಚರಿಸಲು ಅಧಿಕೃತ ಆದೇಶ ಮಾಡಲಾಗಿದೆ. ನಾಳೆಯೇ ಈ ಆದೇಶ ಕಾರ್ಯಗತವಾಗಲಿದ್ದು ಅಧಿಕೃತವಾಗಿ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆಯನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಕಾಗಿನೆಲೆ ಶ್ರೀಗಳಿಗೆ ನಾಳೆಯ ಸಂಗೊಳ್ಳಿ ರಾಯಣ್ಣ ಹುಟ್ಟುಹಬ್ಬ ಆಚರಣೆಗೆ ಆಹ್ವಾನಿಸಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಗೊಳ್ಳಿ ರಾಯಣ್ಣನವರ ಹುಟ್ಟುಹಬ್ಬ ಆಚರಣೆ ಮಾಡಬೇಕು ಅಂತಾ ಹೋರಾಟ ಮಾಡಿದ್ದೆವು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮ್ಮ ಬೇಡಿಕೆ ಈಡೇರಿಸಿದ್ದಕ್ಕೆ ಸಮಾಜದ ಪರ ಧನ್ಯವಾದ ತಿಳಿಸುತ್ತೇನೆ. ನಾನು ಕೂಡ ನಾಳೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ನಿರಂಜನಾನಂದ ಪುರಿ ಶ್ರೀ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆಯ ಅಧಿಕೃತ ಘೋಷಣೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:
Kareena Kapoor: ಕೊವಿಡ್ ಮೂರನೆ ಅಲೆ ಭೀತಿ; ಪತಿ ಸೈಫ್ ಮತ್ತು ಮಕ್ಕಳೊಂದಿಗೆ ಮಾಲ್ಡೀವ್ಸ್ಗೆ ಹಾರಿದ ಕರೀನಾ
ಹಿಂದಿನ ಅನುಭವಗಳ ಮೇಲೆ ಕೊವಿಡ್ ನಿರ್ವಹಣೆಗೆ ಗಮನವಹಿಸಲಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ
(DG IGP orders Respect for Chief Ministers only in government office premises)
Published On - 3:32 pm, Sat, 14 August 21