
ಬೆಂಗಳೂರು/ ಮಂಗಳೂರು, (ನವೆಂಬರ್ 19): ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾರೆಂದು ಅಪಪ್ರಚಾರ ಪ್ರಕರಣದ (dharmasthala mass burial case) ಜಾರ್ಜ್ಶೀಟ್ (Chargesheet) ಸಿದ್ಧವಾಗಿದೆ. ಮಹೇಶ್ ತಿಮರೋಡಿ, ಚಿನ್ನಯ್ಯ , ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಸೇರಿ 6 ಮಂದಿಯ ವಿರುದ್ಧ ಒಟ್ಟು 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಿದ್ಧವಾಗಿದ್ದು.ವಿಶೇಷ ತನಿಖಾ ತಂಡ (SIT) ಗುರುವಾರ ಚಾರ್ಜ್‌ಶೀಟ್ ಅನ್ನು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕೋರ್ಟ್ಗೆ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಚಿನ್ನಯ್ಯನನ್ನು ಬಂಧನ ಮಾಡಲಾಗಿದ್ದು ಉಳಿದವರ ವಿಚಾರಣೆ ನಡೆಸಲಾಗಿದೆ. ಷಡ್ಯಂತ್ರ ರೂಪಿಸಿ , ಅಪಪ್ರಚಾರ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಎಸ್ಐಟಿ ಮುಖ್ಯ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಸಿ.ಎನ್.ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಟಿ.ಜಯಂತ್, ವಿಠ್ಠಲಗೌಡ ಸೇರಿ ಒಟ್ಟು 6 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ಚಾರ್ಜ್ಶೀಟ್ನಲ್ಲಿ ತಲೆಬುರುಡೆ ತಂದಿದ್ದ ಸಿ.ಎನ್.ಚಿನ್ನಯ್ಯ, ಅದನ್ನು ತಂದುಕೊಟ್ಟವರ ಬಗ್ಗೆ ಸಂಪೂರ್ಣ ವಿವರ ಉಲ್ಲೇಖ ಮಾಡಲಾಗಿದೆ.
ಹಾಗೇ ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಪ್ರೇರಣೆ ಕೊಟ್ಟಿದ್ದು ಯಾರು? ಬುರುಡೆ ತಂದುಕೊಟ್ಟಿದ್ದು ಯಾರು? ಎಲ್ಲಿಂದ ಬುರುಡೆ ತಂದಿದ್ದರು? ಬುರುಡೆ ವಿಚಾರದಲ್ಲಿ ಏನೇನು ಷಡ್ಯಂತ್ರ ನಡೆದಿದೆ? ತಲೆಬುರುಡೆ ಎಲ್ಲೆಲ್ಲಿಗೆ ತೆಗೆದುಕೊಂಡು ಹೋಗಿದ್ದರು? ಬುರುಡೆ ಇಟ್ಕೊಂಡು ಏನೇನು ಷಡ್ಯಂತ್ರ ಮಾಡಿದ್ದಾರೆ ಎನ್ನುವ ಅಂಶವನ್ನು ಎಸ್ಐಟಿ ಅಧಿಕಾರಿಗಳು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ತಾನು 100 ಕ್ಕೂ ಹೆಚ್ಚು ಶವಗಳನ್ನು ಹೂತಿರುವುದಾಗಿ ಹೇಳಿದ್ದ. ಈ ಕುರಿತು ಸಾಕಷ್ಟು ಕಾರ್ಯಾಚರಣೆಗಳೂ ನಡೆದಿತ್ತು. ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವೆಂದು ಆಕ್ರೋಶಗಳು ಸಹ ವ್ಯಕ್ತವಾಗಿದ್ದವು. ಇನ್ನು ಈ ಸಂಬಂಧ ಬುರುಡೆ ತಂದಿದ್ದ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಬಳಿಕ ಅರೆಸ್ಟ್ ಮಾಡಿದ್ದರು.