ನೀರಿನ ಸಂರಕ್ಷಣೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಸಾಧಾರಣ ಪ್ರಯತ್ನಕ್ಕೆ ರಾಷ್ಟ್ರ ಜಲ ಪುರಸ್ಕಾರ ಪ್ರದಾನ
ದಿ ಆರ್ಟ್ ಆಫ್ ಲಿವಿಂಗ್ ನ ಜಲ ಸಂರಕ್ಷಣಾ ಯೋಜನೆಯು, ದೇಶದಲ್ಲೇ ಅತೀ ದೊಡ್ಡ ಸಮುದಾಯದ ಸಹಯೋಗದೊಂದಿಗೆ ನಡೆಸಲಾಗುತ್ತಿರುವ ಪರಿಸರದ ಚಳುವಳಿಯಾಗಿ ಬೆಳೆದಿದೆ. ಹಲವಾರು ವರ್ಷಗಳಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು 1.5 ಲಕ್ಷಕ್ಕೂ ಹೆಚ್ಚು ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಿದೆ. ಇದರಿಂದ 174 ಬಿಲಿಯನ್ ಲೀಟರ್ ಗಳಷ್ಟು ನೀರು ಉಳಿತಾಯವಾಗಿದೆ.

ಬೆಂಗಳೂರು, ನವೆಂಬರ್ 19: ರವಿ ಶಂಕರ್ ಗುರೂಜಿ ನೇತೃತ್ವದ ಆರ್ಟ್ ಆಫ್ ಲಿವಿಂಗ್ (The Art of Living) ಸಂಸ್ಥೆಗೆ ರಾಷ್ಟ್ರಾದ್ಯಂತ ಆ ಸಂಸ್ಥೆ ಮಾಡಿರುವ ಜಲ ಪುನರುಜ್ಜೀವನದ ಕಾರ್ಯಕ್ಕಾಗಿ 2024ರ 6ನೇ ರಾಷ್ಟ್ರೀಯ ಜಲ ಪ್ರಶಸ್ತಿ ಲಭಿಸಿದೆ. ಉತ್ತಮ ಸರ್ಕಾರೇತರ ಸಂಸ್ಥೆ ಮತ್ತು ಬೆಸ್ಟ್ ಸಿವಿಲ್ ಸೊಸೈಟಿ ವರ್ಗದಲ್ಲಿ ಮೂರನೆಯ ಸ್ಥಾನ ದೊರಕಿದೆ. ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯವು ನದಿಗಳ ಪುನಶ್ಚೇತನ, ಅಂತರ್ಜಲ ಮರುಪೂರಣ ಮತ್ತು ಎಲ್ಲಾ ಹವಾಮಾನಗಳಿಗೂ ಒಗ್ಗಿಕೊಳ್ಳುವಂತಹ ಕೃಷಿಯಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ದೊಡ್ಡ ಪ್ರಮಾಣದ, ವೈಜ್ಞಾನಿಕ ಆಧಾರಿತ ಪ್ರಯತ್ನಗಳನ್ನು ಗುರುತಿಸಿದೆ.
ಈ ಪ್ರಶಸ್ತಿಗಳನ್ನು ವಿಜ್ಞಾನ ಭವನದಲ್ಲಿ ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಮತ್ತು ಜಲಶಕ್ತಿ ಮಂತ್ರಿಗಳಾದ ಸಿ. ಆರ್. ಪಾಟೀಲ್ ಅವರ ಉಪಸ್ಥಿತಿಯಲ್ಲಿ ನೀಡಲಾಯಿತು.
ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ನ ಪರಿಶ್ರಮದಿಂದ ಮಹಿಮಾಪುರ ಗುಡ್ಡ ಈಗ ಹಸಿರುಮಯ
ಜಾಗತಿಕ ಮಾನವತಾವಾದಿ ನಾಯಕರೂ, ಆಧ್ಯಾತ್ಮಿಕ ಗುರುಗಳೂ ಆಗಿರುವ ರವಿಶಂಕರ ಗುರೂಜಿ ಅವರ ಸ್ಫೂರ್ತಿ ಹಾಗೂ ಮಾರ್ಗದರ್ಶನದಲ್ಲಿ ದಿ ಆರ್ಟ್ ಆಫ್ ಲಿವಿಂಗ್ ನ ಜಲ ಸಂರಕ್ಷಣಾ ಯೋಜನೆಯು, ದೇಶದಲ್ಲೇ ಅತೀ ದೊಡ್ಡ ಸಮುದಾಯದ ಸಹಯೋಗದೊಂದಿಗೆ ನಡೆಸಲಾಗುತ್ತಿರುವ ಪರಿಸರದ ಚಳುವಳಿಯಾಗಿ ಬೆಳೆದಿದೆ. ಹಲವಾರು ವರ್ಷಗಳಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು 1,05,000ಕ್ಕೂ ಹೆಚ್ಚು ಅಂತರ್ಜಲೀಕರಣದ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಿದೆ. ಇದರಿಂದ 174 ಬಿಲಿಯನ್ ಲೀಟರ್ ಗಳಷ್ಟು ನೀರು ಉಳಿತಾಯವಾಗಿದೆ. 75 ನದಿಗಳನ್ನು, ಹೊಳೆಗಳನ್ನು ಮತ್ತು ಉಪನದಿಗಳನ್ನು ಸಂಸ್ಥೆಯು ಪುನರುಜ್ಜೀವನಗೊಳಿಸಲು ಸಹಾಯ ಮಾಡುವುದರೊಂದಿಗೆ, ಜಗತ್ತಿನಾದ್ಯಂತ 100 ದಶಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದೆ ಮತ್ತು 3 ದಶಲಕ್ಷ ರೈತರಿಗೆ ನೈಸರ್ಗಿಕ ಕೃಷಿ ಪದ್ಧತಿಗಳಲ್ಲಿ ತರಬೇತಿಯನ್ನು ನೀಡಿದೆ.
ಈ ಸುಸ್ಥಿರವಾದ ಪ್ರಯತ್ನಗಳಿಂದಾಗಿ 5.5 ಲಕ್ಷ ಎಕರೆಗಳಿಗಿಂತಲೂ ಹೆಚ್ಚಿನ ಭೂಪ್ರದೇಶವು, ಎಲ್ಲಾ ಹವಮಾನಗಳನ್ನೂ ತಡೆದುಕೊಳ್ಳಬಲ್ಲಂತಹ ಕೃಷಿಭೂಮಿಯಾಗಿ ಮಾರ್ಪಟ್ಟಿದೆ. ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕಲುಷಿತಗೊಂಡಿದ್ದ 152 ಜಲಮೂಲಗಳನ್ನು ಪುನಃಸ್ಥಾಪಿಸಿದೆ, ನಮಾಮಿ ಗಂಗೆ ಯೋಜನೆಯ ಅಡಿಯಲ್ಲಿ 4500ಕ್ಕೂ ಅಧಿಕ ರೈತರಿಗೆ ತರಬೇತಿ ನೀಡಿದೆ ಮತ್ತು 3,500 ಹೆಕ್ಟೇರ್ ಗಳನ್ನು ಇದೇ ಯೋಜನೆಯಡಿಯಲ್ಲಿ ನೈಸರ್ಗಿಕ ಕೃಷಿಗೆ ಮಾರ್ಪಡಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ನಿರ್ವಹಣೆಗೆ ಆರ್ಟ್ ಆಫ್ ಲಿವಿಂಗ್ನಿಂದ ನದಿ ಪುನರುಜ್ಜೀವನ ಕಾರ್ಯ
6ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳಿಗೆ ದೇಶದಾದ್ಯಂತದಿಂದ 751 ಅರ್ಜಿಗಳು ಬಂದಿದ್ದವು. ತೀರ್ಪುಗಾರರ ಸಮಿತಿಯು ಸಲ್ಲಿಕೆಗಳನ್ನು ಮೌಲ್ಯಮಾಪನ ಮಾಡಿತು. ನಂತರ ಕೇಂದ್ರ ಜಲ ಆಯೋಗ (CWC) ಮತ್ತು ಕೇಂದ್ರೀಯ ಅಂತರ್ಜಲ ಮಂಡಳಿ (CGWB) ಯಿಂದ ಸ್ಥಳ ಪರೀಕ್ಷೆ ನಡೆಸಲಾಯಿತು. 10 ವಿಭಾಗಗಳಲ್ಲಿ ಒಟ್ಟು 46 ವಿಜೇತರನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಕೂಡ ಸ್ಥಾನ ಪಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:25 pm, Wed, 19 November 25




