Dharwad Accident: ಮೃತರಿಗೆ ವಿಭಿನ್ನ ಶ್ರದ್ಧಾಂಜಲಿ.. ಕುಟುಂಬ ಸದಸ್ಯರು, ಸ್ನೇಹಿತರಿಂದ ಜಾಥಾ; ಉದ್ದೇಶ ಸ್ಪಷ್ಟ

Dharwad road accident ಧಾರವಾಡದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೀಕರ ಅಪಘಾತವೊಂದು ಸಂಭವಿಸಿ 12 ಜನ ಮೃತಪಟ್ಟಿದ್ದ ದಾರುಣ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ಮೃತಪಟ್ಟವರಿಗೆ ವಿನೂತನವಾಗಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.

Dharwad Accident: ಮೃತರಿಗೆ ವಿಭಿನ್ನ ಶ್ರದ್ಧಾಂಜಲಿ.. ಕುಟುಂಬ ಸದಸ್ಯರು, ಸ್ನೇಹಿತರಿಂದ ಜಾಥಾ; ಉದ್ದೇಶ ಸ್ಪಷ್ಟ
ಧಾರವಾಡ ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು, ಸ್ನೇಹಿತರಿಂದ ಜಾಥಾ
Ayesha Banu

| Edited By: Apurva Kumar Balegere

Feb 06, 2021 | 11:44 AM

ದಾವಣಗೆರೆ: ಜನವರಿ 15ರಂದು ಬೆಳಗ್ಗೆ ಧಾರವಾಡದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೀಕರ ಅಪಘಾತವೊಂದು ಸಂಭವಿಸಿ 12 ಜನ ಮೃತಪಟ್ಟಿದ್ದ ದಾರುಣ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ಮೃತಪಟ್ಟವರಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ಮೃತಪಟ್ಟವರ ಕುಟುಂಬ ಸದಸ್ಯರು, ಸ್ನೇಹಿತರಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯಿಂದ ಧಾರವಾಡದವರೆಗೆ ಈ ಜಾಥಾ ನಡೆಯಲಿದೆ. ಜ.15ರಂದು ಸಂಭವಿಸಿದ ಅಪಘಾತದಲ್ಲಿ 12 ಜನ ಮೃತಪಟ್ಟಿದ್ದರು. ಅದರಲ್ಲಿ ದಾವಣಗೆರೆಯ ವಿದ್ಯಾರ್ಥಿನಿಯರಿಬ್ಬರು ಸೇರಿದ್ದಾರೆ. ಹೀಗಾಗಿ ದಾವಣಗೆರೆಯಿಂದ ಧಾರವಾಡದ ಘಟನಾ ಸ್ಥಳದ ವರೆಗೆ ಜಾಥಾ ಆರಂಭವಾಗಲಿದೆ. ಇದರ ಮುಖ್ಯ ಉದ್ದೇಶ, ಕುಟುಂಬಸ್ಥರು ಮೃತಪಟ್ಟವರಿಗೆ ಅಪಘಾತ ಸ್ಥಳದಲ್ಲೇ ಶ್ರದ್ಧಾಂಜಲಿ ಸಲ್ಲಿಸಿ, NHAI ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

ದಾವಣಗೆರೆಯ ಐಎಂಎ ಹಾಲ್​ನಿಂದ ಒಂದು ನೂರಕ್ಕೂ ಹೆಚ್ಚು ವಾಹನಗಳು ದಾವಣಗೆರೆಯಿಂದ ಧಾರವಾಡಕ್ಕೆ ಜಾಥಾ ಆರಂಭಿಸುತ್ತವೆ. ಪ್ರತಿಯೊಬ್ಬರು ಮೃತರ ಫೋಟೋಗಳ ಸಹಿತ ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ದಾವಣಗೆರೆ ಜಾಥಾಕ್ಕೆ ಧಾರವಾಡದ ಕೆಲ ಸಂಘಟನೆಗಳಿಂದ ಸಹಕಾರ ಸಿಕ್ಕಿದೆ. ಘಟನೆ ನಡೆದ ಸ್ಥಳದಲ್ಲಿಯೇ ಇಂದು ಮಧ್ಯಾಹ್ನದ ವರೆಗೆ ಶೃದ್ಧಾಂಜಲಿ ಸಭೆ ನಡೆಯಲಿದೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್​ ರಸ್ತೆಯಲ್ಲಿ ಅಪಘಾತ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ: ಡಿಸಿ ನೇತೃತ್ವದಲ್ಲಿ ಸಭೆ

ಧಾರವಾಡ ಅಪಘಾತದಲ್ಲಿ ಮೃತದೇಹ ಅದಲುಬದಲು: ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯ ಶವ ಪತ್ತೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada