ಬೀದರ್, ಧಾರವಾಡ ಜಿಲ್ಲೆಯಲ್ಲಿ ಗ್ರಾಮಗಳು ವಕ್ಫ್​ ಪಾಲು: ಜನ ಕಂಗಾಲು

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಅರ್ಧ ಊರೇ ವಕ್ಫ್​ ಆಸ್ತಿಯಂತೆ. ಕಳೆದ ವಾರವಷ್ಟೇ ಈ ಗ್ರಾಮದಲ್ಲಿನ ಅನೇಕ ರೈತರ ಜಮೀನುಗಳ ಪಹಣಿಯ 11 ನೇ ಕಲಂನಲ್ಲಿ ವಕ್ಫ್ ಆಸ್ತಿ ಅಂತಾ ದಾಖಲಾಗಿದ್ದು ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣ ಮುಂದುವರೆದು ಗ್ರಾಮದ ಅರ್ಧ ಆಸ್ತಿಯೇ ವಕ್ಪ್​ಗೆ ಸೇರಿದ್ದು ಅಂತಾ ದಾಖಲಾಗಿದೆ.

ಬೀದರ್, ಧಾರವಾಡ ಜಿಲ್ಲೆಯಲ್ಲಿ ಗ್ರಾಮಗಳು ವಕ್ಫ್​ ಪಾಲು: ಜನ ಕಂಗಾಲು
ಬೀದರ್, ಧಾರವಾಡ ಜಿಲ್ಲೆಯಲ್ಲಿ ಗ್ರಾಮಗಳು ವಕ್ಫ್​ ಪಾಲು: ಜನ ಕಂಗಾಲು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Nov 04, 2024 | 3:57 PM

ಧಾರವಾಡ, ನವೆಂಬರ್​ 04: ಕರ್ನಾಟಕದಲ್ಲಿ ಇದೀಗ ಎಲ್ಲ ಕಡೆಯಲ್ಲಿ ವಕ್ಫ್​ (Waqf) ಆಸ್ತಿ ವಿಚಾರವೇ ಚರ್ಚೆಯಲ್ಲಿದೆ. ಇದುವರೆಗೂ ರೈತರ ಹೊಲ ಹಾಗೂ ಸಾರ್ವಜನಿಕ ಆಸ್ತಿಯಲ್ಲಿ ನಮೂದಾಗಿದ್ದ ವಕ್ಫ್​ ಆಸ್ತಿ ಅನ್ನೋ ಪದ, ಇದೀಗ ಧಾರವಾಡದಲ್ಲಿ ಅರ್ಧ ಊರಿನ ಆಸ್ತಿಯಲ್ಲಿ ನಮೂದಾಗಿದೆ. ಇದರಿಂದಾಗಿ ಕಂಗೆಟ್ಟ ಗ್ರಾಮಸ್ಥರು ವಕ್ಫ್​ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅರ್ಧ ಊರೇ ವಕ್ಫ್​ ಆಸ್ತಿ

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಅರ್ಧ ಊರೇ ವಕ್ಫ್​ ಆಸ್ತಿಯಂತೆ. ಕಳೆದ ವಾರವಷ್ಟೇ ಈ ಗ್ರಾಮದಲ್ಲಿನ ಅನೇಕ ರೈತರ ಜಮೀನುಗಳ ಪಹಣಿಯ 11 ನೇ ಕಲಂನಲ್ಲಿ ವಕ್ಫ್ ಆಸ್ತಿ ಅಂತಾ ದಾಖಲಾಗಿದ್ದು ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣ ಮುಂದುವರೆದು ಗ್ರಾಮದ ಅರ್ಧ ಆಸ್ತಿಯೇ ವಕ್ಪ್​ಗೆ ಸೇರಿದ್ದು ಅಂತಾ ದಾಖಲಾಗಿದೆ. ಇದೀಗ ಈ ಗ್ರಾಮದ ಅನೇಕ ಓಣಿಗಳು ವಕ್ಫ್ ಆಸ್ತಿಗೆ ಸೇರಿವೆ ಅಂತಾ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಭವನದ ಹೊರಗೆ ನೋಟಿಸ್ ಅಂಟಿಸಲಾಗಿದೆ.

ಇದನ್ನೂ ಓದಿ: ತೀವ್ರಗೊಂಡ ವಕ್ಫ್​ ಭೂ ವಿವಾದ: ಶಾ ಸೇರಿದಂತೆ ಸಂಸತ್‌ ಜಂಟಿ ಸದನ ಸಮಿತಿಗೆ ಅಶೋಕ್ ಪತ್ರ

ಆ ನೋಟಿಸ್​ನಲ್ಲಿ ವಕ್ಫ್ ಆಸ್ತಿಯ ಗಡಿಯನ್ನು ನಮೂದಿಸಲಾಗಿದ್ದು, ಅದರ ಪ್ರಕಾರ ಅರ್ಧಕ್ಕರ್ಧ ಊರು ಆ ವ್ಯಾಪ್ತಿಯಲ್ಲಿ ಬರುತ್ತೆ. ಅಲ್ಲದೇ ಈ ನೋಟಿಸ್​ನ್ನು ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಅನ್ನೋದು ಸ್ಥಳೀಯರ ಆರೋಪ. ಇದೇ ಕಾರಣಕ್ಕೆ ಇಂದು ಗ್ರಾಮದ ನೂರಾರು ಜನರು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ನೇತ್ರತ್ವದಲ್ಲಿ ಧಾರವಾಡ ನಗರದ ಸಾಧನಕೇರಿ ಬಡಾವಣೆಯಲ್ಲಿರುವ ಜಿಲ್ಲಾ ವಕ್ಫ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ವಕ್ಫ್ ಅಧಿಕಾರಿ ತಾಜುದ್ದೀನ್ ಶೇಖ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಅಧಿಕಾರಿ ಏನೇನೋ ಹೇಳಲು ಯತ್ನಿಸಿದರೂ ಅದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡರೇ ವಿನಃ ಅವರ ಸಿಟ್ಟು ಕಡಿಮೆಯಂತೂ ಆಗಲೇ ಇಲ್ಲ. ಇದರಲ್ಲಿ ತಮ್ಮ ಕೈವಾಡವೇನೂ ಇಲ್ಲ ಅಂತಾನೇ ವಾದಿಸಿದ ಅಧಿಕಾರಿ ತಾಜುದ್ದೀನ್ ಶೇಖ್, ಮುತಾಲಿಕ್ ಹಾಗೂ ರೈತರಿಂದ ಮತ್ತಷ್ಟು ಬೈಸಿಕೊಳ್ಳುವಂತಾಯಿತು. ಅಲ್ಲದೇ ಇಡೀ ಊರಿನ ಅರ್ಧ ಭಾಗದಷ್ಟು ಪ್ರದೇಶ ವಕ್ಫ್ ಆಸ್ತಿ ವ್ಯಾಪ್ತಿಯಲ್ಲಿ ಬರುತ್ತೆ ಅನ್ನುವಂಥ ನೋಟಿಸ್ ಅಂಟಿಸಿದ್ದು ಏಕೆ ಅನ್ನೋ ಪ್ರಶ್ನೆಗೆ ಅಧಿಕಾರಿ ಬಳಿ ಉತ್ತರವೇ ಇರಲಿಲ್ಲ.

ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಕೂಡಲೇ ಈ ದಾಖಲೆಯನ್ನು ಬದಲಾಯಿಸುವಂತೆ ಜನರು ಆಗ್ರಹಿಸಿದರು. ಅಲ್ಲದೇ ಕಳೆದ ವಾರ ರೈತರೊಬ್ಬರ ಜಮೀನಿನ ಪಹಣಿಯಲ್ಲಿ ದಾಖಲಾಗಿದ್ದ ವಕ್ಫ್ ಆಸ್ತಿ ಅನ್ನೋದನ್ನು ಇದೀಗ ಅಧಿಕಾರಿಗಳು ತೆಗೆದು ಹಾಕಿರೋದು ಕೂಡ ಇಲ್ಲಿ ಪ್ರಸ್ತಾಪವಾಯಿತು.

ಇದನ್ನೂ ಓದಿ: ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್​ ಹೆಸರು: ಉಗ್ರ ಹೋರಾಟ ಎಚ್ಚರಿಕೆ ನೀಡಿದ ಸ್ವಾಮೀಜಿ

ದಿನದಿಂದ ದಿನಕ್ಕೆ ಈ ವಕ್ಫ್ ಆಸ್ತಿ ದಾಖಲಾಗುತ್ತಿರುವ ಪ್ರಕರಣ ಹೊಸ ಹೊಸ ತಿರುವು ಪಡೆಯುತ್ತಿದೆ. ಇದರೊಂದಿಗೆ ಅನೇಕ ಕಡೆಗಳಲ್ಲಿ ಮುಸ್ಲಿಮರ ಆಸ್ತಿಗಳ ದಾಖಲೆಯಲ್ಲಿಯೂ ಇದೇ ರೀತಿ ನಮೂದಾಗಿರೋದು ಕೂಡ ಅಧಿಕಾರಿಗಳಿಗೆ ದೊಡ್ಡ ತಲೆನೋವು ತಂದಿದೆ. ಒಟ್ಟಿನಲ್ಲಿ ಈ ಪ್ರಕರಣಗಳ ಹಿಂದೆ ಯಾರಿದ್ದಾರೆ ಅನ್ನೋದು ಇದೀಗ ಸಾಕಷ್ಟು ಕುತೂಹಲ ಸೃಷ್ಟಿಸಿದ್ದಂತೂ ಸತ್ಯ.

ಬೀದರ್ ಜಿಲ್ಲೆಯ ನೂರಕ್ಕೂ ಹೆಚ್ಚು ಮನೆಗಳು ಈಗ ವಕ್ಪ್ ಬೋರ್ಡ್ ಆಸ್ತಿ

ಇದೇ ರೀತಿಯಾಗಿ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದ ನೂರಕ್ಕೂ ಹೆಚ್ಚು ಮನೆಗಳು ಈಗ ವಕ್ಪ್ ಬೋರ್ಡ್ ಆಸ್ತಿ ಪಾಲಾಗಿದೆ. ರೈತನ ಜಮೀನು ಪಕ್ಕದಲ್ಲಿರುವ ಗ್ರಾಮದ ನೂರಕ್ಕೂ ‌ಹೆಚ್ಚು ಮನೆಗಳು ವಕ್ಪ್ ಹೆಸರಿಗೆ ನಮೂದಿಸಲಾಗಿದೆ. 2013 ರಲ್ಲಿ ಅರ್ಧದಷ್ಟು ಊರು 18.60 ಎಕರೆಗಳಷ್ಟು ಜಮೀನು ವಕ್ಪ್ ಪಾಲಾಗಿದೆ.

ಕೃಷ್ಣ ಮೂರ್ತಿ ಎಂಬುವ ರೈತನ 18.60 ಎಕರೆಯಷ್ಟು ಫಲವತ್ತಾದ ಜಮೀನು ವಕ್ಫ್ ಬೋರ್ಡ್ ಪಾಲಾಗಿದೆ. 11 ವರ್ಷದಿಂದಾ ಪಹಣಿಯಲ್ಲಿನ ವಕ್ಫ್ ಬೋರ್ಡ್ ಹೆಸರು ತೆಗೆಸಲು ರೈತ ಪರದಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ