ಬಳ್ಳಾರಿ ಜಿಲ್ಲಾಧಿಕಾರಿಯನ್ನು ತಾವಿದ್ದ ಸ್ಥಳಕ್ಕೆ ಕರೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಬಳ್ಳಾರಿ ಜಿಲ್ಲಾಧಿಕಾರಿಯನ್ನು ತಾವಿದ್ದ ಸ್ಥಳಕ್ಕೆ ಕರೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 04, 2024 | 4:16 PM

ಬಳ್ಳಾರಿಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಗಾಲಿ ಜನಾರ್ಧನ ರೆಡ್ಡಿ, ಬಿ ಶ್ರೀರಾಮುಲು ಮತ್ತು ಗಾಲಿ ಸೋಮಶೇಖರ್ ರೆಡ್ಡಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ವಿಜಯೇಂದ್ರ ಅವರು ಮನವಿ ಪತ್ರವನ್ನು ಜನಾರ್ಧನ ರೆಡ್ಡಿ ಮತ್ತು ರಾಮುಲು ಮೂಲಕ ಕೊಡಿಸಿದರು. ಜನಾರ್ಧನರೆಡ್ಡಿ ಬಿಜೆಪಿ ಸೇರಿದ ಬಳಿಕ ಜಿಲ್ಲೆಯ ನಾಯಕರೊಂದಿಗೆ ಅವರ ಸಂಬಂಧಗಳು ಮೊದಲಿನಂತಾಗಿವೆ.

ಬಳ್ಳಾರಿ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಕ್ಫ್ ಜಮೀನಿಗೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ತೀವ್ರಗೊಂಡಿದೆ. ಬಳ್ಳಾರಿಯಲ್ಲಿ ಇಂದು ಬಿಜೆಪಿ ನಾಯಕರು ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸುವ ಮೊದಲು ಒಂದು ಘಟನೆ ನಡೆಯಿತು. ಮನವಿ ಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಪ್ರತಿಭಟನಕಾರರು ಇದ್ದಲ್ಲಿಗೆ ಬಾರದೇ ದೂರವೇ ನಿಂತಾಗ ತಾಳ್ಮೆ ಕಳೆದುಕೊಂಡ ವಿಜಯೇಂದ್ರ, ಮುಂದೆ ಬನ್ನಿ ಸಾರ್, ನಾವೇನೂ ಕಳ್ಳರು, ದರೋಡೆಕೋರರಲ್ಲ ಎಂದರು. ಆಗಲೇ ಡಿಸಿ ಮುಂದೆ ಸಾಗಿ ಬಂದಿದ್ದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರಧಾನಿ ಮೋದಿಯ ರಾಜಕೀಯ ಪುಡಾರಿ ಎಂದ ಸಿದ್ದರಾಮಯ್ಯಗೆ ಪಲಾಯನವಾದಿ ಎಂದು ವಿಜಯೇಂದ್ರ ತಿರುಗೇಟು