ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ; ಹೋಳಿ ಹಬ್ಬಕ್ಕೆ ಆಫರ್ ನೀಡಿದ ಹುಬ್ಬಳ್ಳಿ ನೈಋತ್ಯ ರೈಲ್ವೆ
ರೈಲು ಸಂಖ್ಯೆ 06597 ಯಶವಂತಪುರ - ಗೋರಖಪುರ ವಿಶೇಷ ಎಕ್ಸ್ಪ್ರೆಸ್ ರೈಲು ಯಶವಂತಪುರ ನಿಲ್ದಾಣದಿಂದ ಸಾಯಂಕಾಲ 5.20 ಕ್ಕೆ ನಿರ್ಗಮಿಸಿ, ಗೋರಖಪುರವನ್ನು ಮೂರನೆಯ ದಿನ ಸಾಯಂಕಾಲ 7.30 ಗಂಟೆಗೆ ತಲುಪಲಿದೆ.
ಹುಬ್ಬಳ್ಳಿ: ನಾನಾ ರಾಜ್ಯಗಳಲ್ಲಿ ನಾನಾ ರೀತಿಯಲ್ಲಿ ಆಚರಿಸುವ ವಿಶೇಷ ಹೋಳಿ (Holi) ಹಬ್ಬಕ್ಕೆ ಈ ಭಾರಿ ನೈಋತ್ಯ ರೈಲ್ವೆ (South Western Railway Zone) ವಿಶೇಷ ರೈಲ್ವೆ ಸೇವೆ ನೀಡಿದೆ. ಕಳೆದೆರೆಡೂ ವರ್ಷ ಕೊರೊನಾದಿಂದ ಹೋಳಿ ಹಬ್ಬ ಆಚರಿಸಿರಲಿಲ್ಲ. ಸದ್ಯ ಕೊರೊನಾ ನಿಯಂತ್ರಣದಲ್ಲಿರುವ ಕಾರಣ ಹೋಳಿ ಸಂಭ್ರಮಿಸಲು ನಿರ್ಧರಿಸಿದ್ದಾರೆ. ರಾಜ್ಯ ಮತ್ತು ಕೆಲ ರಾಜ್ಯಗಳಲ್ಲಿ ಅದ್ದೂರಿ ಬಣ್ಣದೊಕುಳಿ ಆಡೋಕೆ ನಿರ್ಧರಿಸಿರುವ ಹಿನ್ನೆಲೆ ಪ್ರಯಾಣಿಕರಿಗೆ ಅನುವು ಮಾಡಿಕೊಡಲು ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ.
ಹೋಳಿ ಹಬ್ಬದ ಪ್ರಯುಕ್ತ ಹೆಚ್ಚಿನ ಪ್ರಯಾಣದ ಬೇಡಿಕೆಯನ್ನು ಗಮನಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ವಿಶೇಷ ದರದ ರೈಲು ಸೇವೆ ನೀಡಲು ಮುಂದಾಗಿದೆ. ವಿಶೇಷ ಎಕ್ಸ್ ಪ್ರೆಸ್ ರೈಲನ್ನು ನಾಳೆ (ಮಾರ್ಚ್ 17) ಯಶವಂತಪುರ ನಿಲ್ದಾಣದಿಂದ, ಈ ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸಲಿವೆ.
ನಾಳೆ ರೈಲು ಸಂಖ್ಯೆ 06597 ಯಶವಂತಪುರ – ಗೋರಖಪುರ ವಿಶೇಷ ಎಕ್ಸ್ಪ್ರೆಸ್ ರೈಲು ಯಶವಂತಪುರ ನಿಲ್ದಾಣದಿಂದ ಸಾಯಂಕಾಲ 5.20 ಕ್ಕೆ ನಿರ್ಗಮಿಸಿ, ಗೋರಖಪುರವನ್ನು ಮೂರನೆಯ ದಿನ ಸಾಯಂಕಾಲ 7.30 ಗಂಟೆಗೆ ತಲುಪಲಿದೆ.
ಮಾರ್ಗ ಮಧ್ಯದಲ್ಲಿ ನಿಲುಗಡೆ ಇರುವ ನಿಲ್ದಾಣಗಳು: ಹಿಂದೂಪುರ – 06:39/06:40 pm ಧರ್ಮಾವರಂ – 08:33/08:35 pm ಅನಂತಪುರ – 09:09/09:10 pm ಗುಂತಕಲ್ – 10:40/10:45 pm ಆದೋನಿ – 11:29/11:30 pm ಮಂತ್ರಾಲಯಂ ರೋಡ್ – 12:09/12:10 am ರಾಯಚೂರು – 12:38/12:40 am ಬೇಗಮಪೇಟ – 05:28/05:30 am ಸಿಕಂದರಾಬಾದ್ – 05:45/05:55 am ಕಾಜಿಪೇಟ್ – 08:03/08:05 am ರಾಮಗುಂಡಂ – 09:19/09:20 am ಮಂಚಿರಿಯಾಲ್ – 09:34/09:35 am ಬೆಲ್ಲಂಪಲ್ಲಿ – 10:04/10:05 am ಬಲಾರ್ಶಾ – 12:35/12:40 pm ಚಂದ್ರಾಪುರ್ – 12:58/01:00 pm ನಾಗ್ಪುರ – 03:50/03:55 pm ಆಮಲಾ – 06:08/06:10 pm ಬೇತುಲ್ – 06:26/06:28 pm ಘೋರಾಡೊಂಗ್ರಿ – 07:01/07:02 pm ಇಟಾರ್ಸಿ – 10:35/10:45 pm ಜಬಲ್ಪುರ್ – 01:50/02:00 am ಕಟನಿ – 03:10/03:15 am ಸತನಾ – 04:50/04:55 am ಬಾಂದಾ – 08:30/08:35 am ಕಾನ್ಪುರ ಸೆಂಟ್ರಲ್ -11:45/11:55 am ಉನ್ನಾವ್ – 12:20/12:22 pm ಐಶಬಾಗ್ – 01:40/01:50 pm ಬಾದಶಾ ನಗರ – 02:25/02:27 pm ಬಾರಾ ಬಂಕಿ – 03:20/03:22 pm ಗೊಂಡಾ – 04:45/04:50 pm ಮಂಕಾಪುರ – 05:13/05:15 pm ಬಸ್ತಿ – 06:00/06:05 pm ಖಲೀಲಾಬಾದ್ – 06:43/06:45 pm
ಈ ವಿಶೇಷ ರೈಲು 22 ಬೋಗಿಯನ್ನು ಹೊಂದಿರುತ್ತದೆ. ಎರಡು ಎಸಿ 3-ಟೈರ್ ಬೋಗಿಗಳು, ಹತ್ತು ಎರಡನೇ ದರ್ಜೆಯ ಸ್ಲೀಪರ್ ಬೋಗಿಗಳು, ಆರು ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳು, ಒಂದು ಸೆಕೆಂಡ್ ಸೀಟಿಂಗ್ ಕ್ಲಾಸ್, ಒಂದು ಪ್ಯಾಂಟ್ರಿ ಕಾರ್ ಹಾಗೂ ಎರಡು ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್ಗಳು ಹಾಗೂ ದಿವ್ಯಾಂಗ್ ಬೋಗಿ. ಈ ಭಾರಿಯ ಹೋಳಿಗೆಗೆ ವಿಶೇಷ ರೈಲು ಸೇವೆ ನೀಡುವ ಮೂಲಕ ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರಿಗೆ ಮತ್ತಷ್ಟು ಅನೂಕುಲ ಮಾಡಿಕೊಡಲಾಗುವುದು.
ವರದಿ: ದತ್ತಾತ್ರೇಯ ಪಾಟೀಲ್
ಇದನ್ನೂ ಓದಿ
ಶೆಲ್ಫಿಗೇರುವ ಮುನ್ನ; ‘ಪುನೀತ್ ರಾಜಕುಮಾರ್; ಮುಗ್ಧ ನಗುವೊಂದರ ಕಣ್ಮರೆ’ ಕೃತಿ ಮಾರ್ಚ್ 17ರಿಂದ ಲಭ್ಯ
Published On - 2:49 pm, Wed, 16 March 22