Basalingayya Hiremath: ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ನಿಧನ

ಜಾನಪದ ಕಲಾವಿದ ಬಸಲಿಂಗಯ್ಯ ಧಾರವಾಡದ ನಿವಾಸಿಯಾಗಿದ್ದರು. ಜಾನಪದ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು. ಇವರ ಪತ್ನಿ ವಿಶ್ವೇಶ್ವರಿ ಹಿರೇಮಠ ಕೂಡ ಜಾನಪದ ಕಲಾವಿದೆಯಾಗಿದ್ದು ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಬಸಲಿಂಗಯ್ಯ ಹಿರೇಮಠ ದಂಪತಿ ಕಲಾ ಸೇವೆ ಮಾಡುತ್ತಿದ್ದರು.

Basalingayya Hiremath: ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ನಿಧನ
ಬಸಲಿಂಗಯ್ಯ ಹಿರೇಮಠ
Follow us
TV9 Web
| Updated By: ಆಯೇಷಾ ಬಾನು

Updated on:Jan 09, 2022 | 3:44 PM

ಧಾರವಾಡ: ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ(63) ಇಂದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಕಲಾವಿದ ಬಸಲಿಂಗಯ್ಯ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಜಾನಪದ ಕಲಾವಿದ ಬಸಲಿಂಗಯ್ಯ ಧಾರವಾಡದ ನಿವಾಸಿಯಾಗಿದ್ದರು. ಜಾನಪದ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು. ಇವರ ಪತ್ನಿ ವಿಶ್ವೇಶ್ವರಿ ಹಿರೇಮಠ ಕೂಡ ಜಾನಪದ ಕಲಾವಿದೆಯಾಗಿದ್ದು ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಬಸಲಿಂಗಯ್ಯ ಹಿರೇಮಠ ದಂಪತಿ ಕಲಾ ಸೇವೆ ಮಾಡುತ್ತಿದ್ದರು. ಅಲ್ಲದೇ ಅನೇಕ ಜಾನಪದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಬಸಲಿಂಗಯ್ಯ ಹಿರೇಮಠ ಕೊನೆಯುಸಿರೆಳೆದಿದ್ದು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಧಾರವಾಡ ಜಿಲ್ಲೆಯ ಜಾನಪದ ಹಿರಿಯ ಕಲಾವಿದ ಬಸಲಿಂಗಯ್ಯ ಹಿರೇಮಠ (63) ಭಾನುವಾರ ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಹಿರೇಮಠ ಇಹಲೋಕವನ್ನು ತ್ಯಜಿಸಿದ್ದಾರೆ‌. ಅವರ ಅಗಲಿಕೆ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರನ್ನು ಬಹುತೇಕ ಜನರು ಪ್ರೀತಿಯಿಂದ ‘ಮಾವಾ’ ಎಂದು ಕರೆಯುತ್ತಿದ್ದರು. ಯಾವುದೇ ವಿಷಯದ ಕುರಿತು ಹಾಡು ಕಟ್ಟಿ ಹಾಡಿ, ಎಲ್ಲರ ಮನ ರಂಜಿಸುವ ಕಲೆ ಅವರಿಗೆ ರೂಢಿಗತವಾಗಿತ್ತು. ಹಿರೇಮಠ ಹಲವಾರು ಜಾನಪದ ಕಾರ್ಯಕ್ರಮಗಳನ್ನು ದೇಶ-ವಿದೇಶಗಳಲ್ಲಿ ಪ್ರಸ್ತುತಪಡಿಸಿದ್ದರು.

ಅವರ ಜನಪದ ಸೇವೆಗೆ ಪತ್ನಿ ವಿಶ್ವೇಶ್ವರಿ ಹಿರೇಮಠ ಸದಾಕಾಲವೂ ಸಾಥ್ ನೀಡಿದ್ದರು. ಈ ಜೋಡಿ ಉತ್ತರ ಕರ್ನಾಟಕ ಭಾಗದ ಜನಪದ ಶೈಲಿಯ ಕಲೆಯನ್ನು ಬೆಳೆಸಲು ಸಾಕಷ್ಟು ಶ್ರಮವಹಿಸಿದೆ. ಅದಕ್ಕಾಗಿ ಜನಪದ ಸಂಶೋಧನಾ ಕೇಂದ್ರವನ್ನು ಹುಟ್ಟುಹಾಕಿ, ಮಹಿಳಾ ಸಂಕ್ರಾಂತಿ, ಜೋಗುಳ, ಸೋಬಾನ, ಬೀಸುವ ಕಲ್ಲಿನ ಪದ, ರಂಗಗೀತೆ, ಗೀಗೀ ಪದ, ಹೀಗೆ ಹತ್ತು ಹಲವು ಬಗೆಯ ರಸದೌತಣ ಉಣಬಡಿಸಿ, ಮುಂದಿನ ಪಿಳಿಗೆಗೆ ಅದನ್ನು ಪರಿಚಯಿಸಿದ ಹಿರಿಮೆ ಹೊಂದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ಗ್ರಾಮದ ಹಿರೇಮಠ, ಜಾನಪದ ವಿಷಯದಲ್ಲಿ ಎಂ.ಎ. ಪದವೀಧರರಾಗಿದ್ದರು. 1983ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದು, ಬಿ.ವಿ.ಕಾರಂತರೊಂದಿಗೆ ರಂಗ ಸಂಗೀತ ಕುರಿತು ಅಭ್ಯಾಸ ಮಾಡಿದರು. ಬಳಿಕ ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ಇವರ ರಚನೆಯ ರಂಗರೂಪ ‘ಶ್ರೀಕೃಷ್ಣ ಪಾರಿಜಾತ’ ದೇಶ-ವಿದೇಶಗಳಲ್ಲಿ ಹಲವಾರು ಪ್ರಯೋಗಗಳನ್ನು ಕಂಡಿದೆ. ನಟ, ಗಾಯಕ, ಸಂಗೀತ ನಿರ್ದೇಶನ- ಹೀಗೆ ಅನೇಕ ವಲಯದಲ್ಲಿ ಕೃಷಿ ಮಾಡಿದ್ದ ಹಿರೇಮಠ, ದಾಸ, ಶರಣ, ತತ್ವಪದಗಳು, ಬಯಲಾಟ ಈ ಎಲ್ಲ ಪ್ರಕಾರದ ಸಾಹಿತ್ಯವನ್ನು ವಿದೇಶದಲ್ಲೂ ಪ್ರಚಾರ ಮಾಡಿದ್ದರು.

ಪೂರ್ವಜರ ಕಲೆಯನ್ನು ಮುಂದಕ್ಕೆ ತರಬೇಕೆಂಬ ಆಸೆ ಹೊಂದಿದ್ದ ಬಸಲಿಂಗಯ್ಯ ಹಿರೇಮಠ ‘ಹುಲಿಯು ಹುಟ್ಟಿತ್ತೋ ಕಿತ್ತೂರ ನಾಡಾಗ’ ಎಂಬ ಲಾವಣಿಯನ್ನು ಧಾರವಾಡದಲ್ಲಿ ಎಲ್ಲೇ ನಿಂತು ಹಾಡಿದರೂ ಅಲ್ಲಿ ಬಸವಲಿಂಗಯ್ಯ ಹಿರೇಮಠ ಅವರ ಪ್ರಸ್ತಾಪವಾಗುತ್ತಿತ್ತು. ಎಷ್ಟೋ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಗೀತೆಗಳನ್ನು ಹಿಂದೆ ಸರಿಸಿ, ಜನಪದ ಅಥವಾ ಲಾವಣಿ ಪದಗಳನ್ನು ತಾವೇ ಪ್ರೀತಿಯಿಂದ ಹಾಡುತ್ತಿದ್ದರು. ಆ ಮೂಲಕ ನೆಲಮೂಲವನ್ನು ಮುನ್ನೆಲೆಗೆ ತರುತ್ತಿದ್ದರು. ಅದು ಜನಪದ ಹಾಗೂ ನಮ್ಮ ಪೂರ್ವಜರ ಕಲೆಯ ಬಗ್ಗೆ ಇದ್ದ ಅವರ ಆಸಕ್ತಿ ಹಾಗೂ ಅವನ್ನು ಪಸರಿಸಬೇಕೆಂಬ ಕಾಳಹಿಯೂ ಹೌದು‌. ಲಾವಣಿ, ಜನಪದ ಗೀತೆಗಳ ಗಾಯನದ ಮೂಲಕ, ಜಾನಪದ ಸಂಶೋಧನಾ ಸಂಸ್ಥೆಯ ಮೂಲಕ ಅವರು ಮಾಡಿದ ಕೆಲಸ ಬಹಳ ದೊಡ್ಡದು. ಬೆಳಗಾವಿಯ ಬೈಲಹೊಂಗಲ ತಾಲೂಕಿನವರಾದರೂ ಧಾರವಾಡದಲ್ಲಿ ನೆಲೆ ನಿಂತರು. ಸಾಂಸ್ಕೃತಿಕವಾಗಿ ಪೇಢಾನಗರಿಯಲ್ಲಿ ಗುರುತಿಸಿಕೊಂಡರು. ಶ್ರೀನಗರ ಕಿಟ್ಟಿ ಅಭಿನಯದ, ಜಯತೀರ್ಥ ನಿರ್ದೇಶನದ ‘ಟೋನಿ’ ಸಿನಿಮಾದಲ್ಲೂ ಅವರ ಜಮೀನ್ದಾರನ ಪಾತ್ರ ಅವರ ನೈಜ ಜೀವನದ ಮೇಲೂ ಕನ್ನಡಿ ಹಿಡಿಯುವಂಥದ್ದು. ಜಾನಪದ ಗಾಯನವೇ ಆ ಚಿತ್ರದಲ್ಲೂ ಒಡಮೂಡಿದ್ದವು. ಗ್ರಾಮೀಣ ಸೊಗಡಿನ ಒಲೆ, ಮನೆಯ ಗೋಡೆಗಳು ಚಿತ್ರವನ್ನು ಗಮನಿಸುವಂತೆ ಮಾಡಿದ್ದವು. ತಾತ್ವಿಕವಾಗಿದ್ದ ಆ ಚಿತ್ರದಲ್ಲಿ ಬಸವಲಿಂಗಯ್ಯ ಕಲಾ ಪೋಷಕರು ಆಗಿದ್ದರು. ಬಸಲಿಂಗಯ್ಯ ಹಿರೇಮಠ ಧಾರಾವಾಹಿಗಳಲ್ಲಿಯೂ ಅಭಿನಯಿಸಿ, ಜನರ ಮೆಚ್ಷುಗೆ ಗಳಿಸಿದ್ದರು.

ಸದಾ ಪತ್ನಿ ವಿಶ್ವೇಶ್ವರಿ ಹಿರೇಮಠ ಅವರೊಡನೆ ಕಾಣಸಿಗುತ್ತಿದ್ದ ಈ ಜೋಡಿಯನ್ನು ಎಲ್ಲರೂ ಮಾಮಾಶ್ರೀ-ಅಕ್ಕಾಶ್ರೀ ಅಂತಲೇ ಕರೆಯುತ್ತಿದ್ದರು. ಹಾಗೇ ಕರೆದಾಗ ಅವರು ಪಡುತ್ತಿದ್ದ ಹಿಗ್ಗು ನೋಡಲು ಅದ್ಭುತ. ಆ ಹಿಗ್ಗು ದೊಡ್ಡದನಿಯ ಕುಶಲೋಪರಿ, ನಗುವಾಗಿ ಮಾರ್ಪಾಡಾಗುತ್ತಿತ್ತು. 63ರ ವಯಸ್ಸು ತೀರಿಕೊಳ್ಳುವುದಲ್ಲವಾದರೂ ಕೆಲವು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೆ ಒಳಿತಿತ್ತೇನೋ? ಆದರೆ ಹಣೆಯ ಮೇಲಿನ ಗೆರೆಗಳ ಬಲ್ಲವರಾರು? ಅವರ ಸಾವಿನ ಸುದ್ದಿ ಕೇಳುತ್ತಲೇ ಕಣ್ಮುಂದೆ ಹಾದು ಹೋದದ್ದು ಅವರೊಮ್ಮೆ ಭಾವಾಭಿನಯದಲ್ಲಿ ಕೈ ಮೇಲೆ ಮಾಡಿ ಹಾಡಿದ್ದ ‘ತುಂಬ್ ತುಂಬ್ ತುಂಬಿ ಬಂದಿತ್ತ’ ಅನ್ನೋ ಪದ್ಯ. ಬೇಂದ್ರೆಯವರ ಕೆಲವು ಪದ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಹಾಡುತ್ತಿದ್ದ ಬಸವಲಿಂಗಯ್ಯನವರು ಒಳ್ಳೇ ಭಾಷಣಕಾರರೂ ಹೌದು. ಬರವಣಿಗೆಯಲ್ಲೂ ಅವರಿಗೆ ಆಸಕ್ತಿಯಿತ್ತು. ಆದರೆ ಅದರಲ್ಲಿ ಹೆಚ್ಚು ಕೃಷಿ ಮಾಡಲಿಲ್ಲ. ಪ್ರತೀ ಸಂಕ್ರಾಂತಿಗೆ ಸಾಧನಕೇರಿಯ ಅವರ ಜನಪದ ಮೇಳದ ತರಹ ಆಟೋಟ, ವೇಷ ಭೂಷಣ ತೊಡಲು ನೆರೆ ಹೊರೆಯವರಿಗೆ ತಿಳಿಸಿ, ಅವತ್ತೊಂದಿನವಾದರೂ ಅವರನ್ನು ಹಳ್ಳಿ ಜೀವನಕ್ಕೆ ಒಯ್ಯುತ್ತಿದ್ದರು. ದುರಂತ ಎಂದರೆ ಎರಡೇ ತಿಂಗಳ ಹಿಂದೆ ಪುನೀತ್ ರಾಜಕುಮಾರ್ ತೀರಿಕೊಂಡಾಗ ಅವರು ಸಾವಿನ ಅನಿಶ್ಚಿತತೆ ಬಗ್ಗೆ ಮಾತನಾಡಿದ್ದರು. ಈಗ ನೋಡಿದರೆ ಆ ಅನಿಶ್ಚಿತತೆ ಇವರ ಮೇಲೆಯೇ ದಾಳಿ ಮಾಡಿದೆ.

ಆಡುಭಾಷೆಗೆ ಒಂದು ಬಗೆಯ ಗೇಯತೆ ತರುತ್ತಿದ್ದ ಅವರ ಮಾತುಗಳು ಒಮ್ಮೊಮ್ಮೆ ‘ಸೊಕ್ಕಿದ್ರ ಮುಕ್ಕಾಕ್ಕಿಯೋ ಮಾರಾಯ’ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದರು. ಕರ್ನಾಟಕವಲ್ಲದೆ ವಿದೇಶಗಳಲ್ಲೂ ಅವರ ಗಾಯನ ಮೆಚ್ಚುಗೆ ಗಳಿಸಿತ್ತು. ಗಾಯನ ಹಾಗೂ ಭಾಷಣದಲ್ಲಿ ಏಕತಾನತೆ ಬರದಂತೆ ನೋಡಿಕೊಳ್ಳುವ, ಮತ್ತೆ ಮತ್ತೆ ಹಾಡಿದ್ದನ್ನೇ ಹಾಡುವ ಚಾಳಿ ಅವರಲ್ಲಿರಲಿಲ್ಲ. ಪ್ರಾದೇಶಿಕವಾಗಿಯೂ ಲಾವಣಿಗಳನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ಧಾರವಾಡ ಸೀಮೆಯಲ್ಲಿ ಸಂಗೊಳ್ಳಿ ರಾಯಣ್ಣನ ಲಾವಣಿ, ಕಲಬುರ್ಗಿ ಕಡೆ ಹೋದರೆ ಕಡಕೋಳ ಮಡಿವಾಳಪ್ಪನವರ ತತ್ವಪದ, ಹಾವೇರಿಯ ಕಡೆ ಕಾರ್ಯಕ್ರಮ ನಿಯೋಜನೆಯಾದರೆ ಶಿಶುನಾಳ ಷರೀಫರ ತತ್ವಪದ, ಬೆಂಗಳೂರು ಮೈಸೂರುಗಳಿಗೆ ಗಾಯನಕ್ಕೆ ಹೋದರೆ ಕುವೆಂಪು ಅವರ ಪದ್ಯಗಳನ್ನು ಅಚ್ಚುಕಟ್ಟಾಗಿ ಹಾಡುವ ಜಾಣ್ಮೆ ಅವರಲ್ಲಿತ್ತು. ಪತ್ತಾರ ಮಾಸ್ತರರ `ಸಂಗ್ಯಾ ಬಾಳ್ಯಾ’ ಪದ್ಯಕ್ಕೆ ರಂಗರೂಪ ನೀಡಿದ್ದ ಬಸಲಿಂಗಯ್ಯ ಹಿರೇಮಠ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ ಶರೀಫ್ ರಂಥ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ಶಿಶುನಾಳ ಷರೀಫರ ತತ್ವಪದಗಳು, ಕನ್ನಡದ ಜನಪದ ಗೀತೆಗಳು, ಲಾವಣಿ ಪದಗಳು ಅವರ ನಾಲಗೆ ಮೇಲೆಯೇ ಅಚ್ಚಾಗಿದ್ದವೇನೋ? ಮೂಡಿದ್ದರೆ ನಿಂತಲ್ಲಿ, ಕುಂತಲ್ಲಿಯೇ ಹಾಡುತ್ತಿದ್ದರು. ಎದುರಿದ್ದವರು ಇದ್ದ ಬದ್ದ ಕೆಲಸ ಮರೆತು ಅವರತ್ತಲೇ ತಲ್ಲೀನರಾಗುವಂತೆ ಮಾಡಬಲ್ಲ ಕಸುವು ಅವರ ದನಿಯಲ್ಲಿತ್ತು. ಆದರೆ ಆ ದನಿ ಇಂದು ನೆನಪು ಎಂಬುದು ಮಾತ್ರ.

ಮಾಹಿತಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ

ಇದನ್ನೂ ಓದಿ: ನಿಮ್ಮ ಸೇವೆಗೆ ಮರಳಿದ್ದೇನೆ: ಕೊವಿಡ್ ನೆಗೆಟಿವ್ ಆದ ನಂತರ ಅರವಿಂದ ಕೇಜ್ರಿವಾಲ್ ಟ್ವೀಟ್

Published On - 11:34 am, Sun, 9 January 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?