ಮತಾಂತರ ಆರೋಪ: ಹುಬ್ಬಳ್ಳಿಯ ಚರ್ಚ್​ನಲ್ಲಿ ಕುಳಿತು ಭಜನೆ ಮಾಡಿ ಪ್ರತಿಭಟಿಸಿದ ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು

| Updated By: ರಶ್ಮಿ ಕಲ್ಲಕಟ್ಟ

Updated on: Oct 18, 2021 | 9:20 PM

ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳ" ವಿರುದ್ಧ ಪಾದ್ರಿ ಮತ್ತು ಇತರರನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಕ್ಷಣೆ ಕಾನೂನಿನ ಅಡಿಯಲ್ಲಿ ದೂರಿನಲ್ಲಿ ಹೆಸರಿಸಲಾಗಿದೆ

ಮತಾಂತರ ಆರೋಪ: ಹುಬ್ಬಳ್ಳಿಯ ಚರ್ಚ್​ನಲ್ಲಿ ಕುಳಿತು ಭಜನೆ ಮಾಡಿ ಪ್ರತಿಭಟಿಸಿದ ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು
ಚರ್ಚ್ ನಲ್ಲಿ ಭಜನೆ (ವಿಡಿಯೊ ದೃಶ್ಯ)
Follow us on

ಬೆಂಗಳೂರು: ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಭಾನುವಾರ ಬೆಳಿಗ್ಗೆ ಕರ್ನಾಟಕದ ಹುಬ್ಬಳ್ಳಿಯ ತಾತ್ಕಾಲಿಕ ಚರ್ಚ್‌ಗೆ ಬಲವಂತವಾಗಿ ಪ್ರವೇಶಿಸಿದ್ದು ಪ್ರತಿಭಟನೆಯಾಗಿ ಭಜನೆ ಮಾಡಿದ್ದಾರೆ. ಹುಬ್ಬಳ್ಳಿಯ ಬೈರಿದೇವರಕೊಪ್ಪ ಚರ್ಚ್ ಒಳಗೆ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹತ್ತಾರು ಮಹಿಳೆಯರು ಮತ್ತು ಪುರುಷರು ಕೈಮುಗಿದು ಭಜನೆ ಹಾಡುತ್ತಿರುವುದು ವಿಡಿಯೊದಲ್ಲಿದೆ.  ನಂತರ ಸ್ಥಳೀಯ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಪಾದ್ರಿ ಸೋಮು ಅವರದ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಹೆದ್ದಾರಿಯನ್ನು ತಡೆದರು.   ಚರ್ಚ್ ಸದಸ್ಯರು ಮತ್ತು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪರಸ್ಪರ ಆರೋಪಿಸಿದರು. ಪಾದ್ರಿ ಸೋಮು ಮತ್ತು ಆತನ ಕೆಲವು ಸಹಚರರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

“ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳ” ವಿರುದ್ಧ ಪಾದ್ರಿ ಮತ್ತು ಇತರರನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಕ್ಷಣೆ ಕಾನೂನಿನ ಅಡಿಯಲ್ಲಿ ದೂರಿನಲ್ಲಿ ಹೆಸರಿಸಲಾಗಿದೆ. ಆತನನ್ನು ಬಂಧಿಸಲಾಗಿದೆ ಮತ್ತು ಇತರ ಮೂವರನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.


ಚರ್ಚ್ ಅಧಿಕಾರಿಗಳು ಸೋಮವಾರವೂ ಈ ವಿಷಯದಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಿದರು. ಹುಬ್ಬಳ್ಳಿ-ಧಾರವಾಡದ ಪೋಲಿಸ್ ಆಯುಕ್ತ ಲಾಬು ರಾಮ್ ಈ ಘಟನೆಯನ್ನು ದೃಢಪಡಿಸಿದ್ದು ತನಿಖೆ ನಡೆಯುತ್ತಿದೆ. ಸೋಮು ಅವರಾಧಿಯನ್ನು ಮಾತ್ರ ಬಂಧಿಸಲಾಗಿದೆ. ಇಲ್ಲಿಯವರೆಗೆ, ನಮಗೆ ಚರ್ಚ್ ನಿಂದ ಯಾವುದೇ ದೂರು ಬಂದಿಲ್ಲ” ಎಂದು ಹೇಳಿದರು.

“ವಿಶ್ವನಾಥ್ ಎಂಬ ವ್ಯಕ್ತಿಯನ್ನು ಮತಾಂತರಕ್ಕಾಗಿ ಅಲ್ಲಿಗೆ ಕರೆದೊಯ್ಯಲಾಯಿತು. ಅವರು ಚರ್ಚ್‌ನಿಂದ ಪೊಲೀಸ್ ಠಾಣೆಗೆ ಹೋದರು ಮತ್ತು ಪಾದ್ರಿ ಸೋಮು ಮತ್ತು ಇತರರ ವಿರುದ್ಧ ದೂರು ನೀಡಿದರು. ನಂತರ, ನಮ್ಮ ಸದಸ್ಯರು ಪ್ರತಿಭಟನೆ ಮಾಡುವ ಸಲುವಾಗಿ ಒಳಗೆ ಹೋಗಿ ಭಜನೆಗಳನ್ನು ಹಾಡಲಾರಂಭಿಸಿದರು. ಎಂದು ಭಜರಂಗದಳದ ರಾಜ್ಯ ಸಂಚಾಲಕ ರಘು ಸಕಲೇಶಪೋರ ಹೇಳಿದರು.

“ನಾವು ಇದರಲ್ಲಿ ಯಾವುದೇ ತಪ್ಪು ಮಾಡಿಲ್ಲ” ಎಂದು ಹಿರಿಯ ಭಜರ ದಳದ ಕಾರ್ಯಕರ್ತ ಶಶಿ ಹೇಳಿದರು.
ಪಾದ್ರಿ ಮತ್ತು ಇತರರ ವಿರುದ್ಧ ಕೇಸ್ ದಾಖಲಿಸಿದ , ಬಲವಂತದ ಮತಾಂತರವನ್ನು ಆರೋಪಿಸಿ ಅವರು ಚರ್ಚ್ ಪ್ರಾರ್ಥನೆಯ ಬದಲು ಹಿಂದೂ ಪ್ರಾರ್ಥನೆಗಳನ್ನು ಪಠಿಸಿದಾಗ ತಾತ್ಕಾಲಿಕ ಚರ್ಚ್ನಲ್ಲಿ ಪಾದ್ರಿ ತನ್ನನ್ನು ನಿಂದಿಸಿದ ಆರೋಪವನ್ನು ಹೊರಿಸಿದರು.

ಚರ್ಚ್ ಪ್ರಾರ್ಥನೆ ಬದಲು ಹಿಂದೂ ಭಕ್ತಿಗೀತೆಗಳನ್ನು ಹಾಡಿದಾಗ ಪಾದ್ರಿ ನಮ್ಮನ್ನು ಬೈದಿದ್ದಾರೆ ಎಂದು ಪಾದ್ರಿ ಮತ್ತು ಇತರರ ವಿರುದ್ಧ ದೂರು ನೀಡಿದ್ದ ವಿಶ್ವನಾಥ್ ಹೇಳಿದ್ದಾರೆ. ಆದಾಗ್ಯೂ, ಚರ್ಚ್ ಅಧಿಕಾರಿಗಳು ಮತಾಂತರ ಪ್ರಯತ್ನ ಆರೋಪ ನಿರಾಕರಿಸಿದ್ದಾರೆ.

“ಅವರು (ಬಲಪಂಥೀಯ ಕಾರ್ಯಕರ್ತರು) ನಮ್ಮ ಚರ್ಚ್‌ನಲ್ಲಿ ಭಜನೆ ಮಾಡಲಾರಂಭಿಸಿದಾಗ, ಪಾದ್ರಿ ಸೋಮು ಅವರಾಧಿ ಬಂದರು. ಅವರನ್ನು ಕಾರ್ಯಕರ್ತರು ಘೆರಾವ್ ಮಾಡಿದರು. ಅಲ್ಲಿ ಜಗಳವಾದಾಗ ಕೆಲವು ಮಹಿಳೆಯರೂ ಗಾಯಗೊಂಡಿದ್ದಾರೆ ಎಂದು ಚರ್ಚ್ ನ ಹಿರಿಯ ಸದಸ್ಯ ರೆವರೆಂಡ್ ಸೆಡ್ರಿಕ್ ಜೇಕಬ್ ಹೇಳಿದ್ದಾರೆ.

ಇದನ್ನೂ  ಓದಿ: Kerala Rain ಪ್ರವಾಹದಿಂದ ತತ್ತರಿಸಿದ ಕೇರಳದಲ್ಲಿ ಮತ್ತೆ ಮಳೆ ಸಾಧ್ಯತೆ; 35 ಮಂದಿ ಸಾವು

Published On - 9:11 pm, Mon, 18 October 21