AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಪ್, ಸಾಫ್ಟ್​ವೇರ್​ನಿಂದ ಯಾವ ದೇಶವೂ ಅಭಿವೃದ್ಧಿಯಾಗಲ್ಲ: ಹರೀಶ್ ಹಂದೆ

ಅನುಭವಿ ರೈತರನ್ನು ಕೃಷಿ ತಜ್ಞರು ಎಂದು ಯಾರೂ ಪರಿಗಣಿಸುವುದೂ ಇಲ್ಲ. ಅಂಥ ರೈತರಿಂದ ಕೃಷಿ ವಿವಿಗಳಲ್ಲಿ ಕಲಿಸುವಂಥ ಪದ್ಧತಿ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಆ್ಯಪ್, ಸಾಫ್ಟ್​ವೇರ್​ನಿಂದ ಯಾವ ದೇಶವೂ ಅಭಿವೃದ್ಧಿಯಾಗಲ್ಲ: ಹರೀಶ್ ಹಂದೆ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸೆಲ್ಕೊ ಕಂಪನಿಯ ಸಿಇಒ ಹರೀಶ್ ಹಂದೆ ಪಾಲ್ಗೊಂಡಿದ್ದರು.
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Oct 18, 2021 | 9:24 PM

Share

ಧಾರವಾಡ: ಆ್ಯಪ್ ಅಥವಾ ಸಾಫ್ಟ್​ವೇರ್​ಗಳಿಂದ ಯಾವುದೇ ದೇಶ ಅಭಿವೃದ್ಧಿಯಾಗಿಲ್ಲ. ರೈತರ ಅಭಿವೃದ್ಧಿಯಾದಾಗ ಮಾತ್ರ ಸುಸ್ಥಿರ ಪ್ರಗತಿ ಸಾಧ್ಯ ಎಂದು ಸೆಲ್ಕೊ ಇಂಡಿಯಾ ಕಂಪನಿಯ ಸಂಸ್ಥಾಪಕ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಉದ್ಯಮಿ ಡಾ.ಹರೀಶ್ ಹಂದೆ ಹೇಳಿದರು. ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪುನಃ 1970ರ ಹಸಿರು ಕ್ರಾಂತಿ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಲೀಸಾಗಿ ಪದವಿ ಸಿಗುತ್ತದೆ. ಆದರೆ ಅನುಭವಿ ರೈತರಿಗೆ ಯಾವುದೇ ಪದವಿಗಳು ಸಿಗುವುದಿಲ್ಲ. 40 ವರ್ಷ ಕಬ್ಬು ಬೆಳೆದ ರೈತನಿಗೆ ಪದವಿ ಸಿಗುವುದಿಲ್ಲ. ಅನುಭವಿ ರೈತರನ್ನು ಕೃಷಿ ತಜ್ಞರು ಎಂದು ಯಾರೂ ಪರಿಗಣಿಸುವುದೂ ಇಲ್ಲ. ಅಂಥ ರೈತರಿಂದ ಕೃಷಿ ವಿವಿಗಳಲ್ಲಿ ಕಲಿಸುವಂಥ ಪದ್ಧತಿ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

2030ಕ್ಕೆ ಸುಸ್ಥಿರ ಅಭಿವೃದ್ಧಿ ದೇಶದ ಪರಿಕಲ್ಪನೆ ಹೇಗಿರಬೇಕು ಎಂದು ವಿಶ್ವಸಂಸ್ಥೆ ಒಂದು ರೂಪುರೇಷೆ ನೀಡಿದೆ. ಭಾರತವು ಸುಸ್ಥಿರ ಅಭಿವೃದ್ಧಿ ದೇಶ ಆಗುವ ಸಾಧ್ಯತೆಯು ರೈತರ ಕೈಲಿದೆ. ಕೃಷಿ ಕ್ಷೇತ್ರದಲ್ಲಿ ಇಂದು ಹೆಚ್ಚಿನ ಆವಿಷ್ಕಾರಗಳು ನಡೆಯಬೇಕಿದೆ. ಌಪ್, ಸಾಫ್ಟ್​ವೇರ್​ ಆವಿಷ್ಕಾರಗಳಿಗಿಂತಲೂ ಉತ್ತಮ ಕೃಷಿ ಆವಿಷ್ಕಾರಗಳು ಹೆಚ್ಚಾಗಬೇಕಿದೆ. ಕೃಷಿ ಪದವೀಧರರಿಂದ 1970ರ ಹಸಿರು ಕ್ರಾಂತಿ ಮರುಕಳಿಸಬೇಕಿದೆ. ಕೃಷಿ ಪದವೀಧರರು ಹೊಸ ತಲೆಮಾರಿನ ರೈತರನ್ನು ಸೃಷ್ಟಿಸಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ದಾಖಲೆಯ ಬಿತ್ತನೆ ಬೀಜ ಮಾರಾಟ; ಕೃಷಿ ಮೇಳ ನಡೆಸದೆಯೂ ಸಾಧನೆ ಇದನ್ನೂ ಓದಿ: Rail Roko Agitation: ರೈಲು ಹಳಿಗಳ ಮೇಲೆ ಪ್ರತಿಭಟನೆಗೆ ಕುಳಿತ ರೈತರು; 160ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!