ಚುನಾವಣಾ ಪ್ರಚಾರದ ಮಧ್ಯೆ ಹುಬ್ಬಳ್ಳಿ ಜಿಮ್ನಲ್ಲಿ ಸಿದ್ದರಾಮಯ್ಯ ವರ್ಕೌಟ್
ಹುಬ್ಬಳ್ಳಿಯ ಖಾಸಗಿ ಹೋಟೆಲ್ನ ಜಿಮ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವರ್ಕೌಟ್ ಮಾಡಿದ್ದಾರೆ. ಹುಬ್ಬಳ್ಳಿಯ ಏರ್ಪೋರ್ಟ್ ಮುಂಭಾಗದಲ್ಲಿರುವ ಹೋಟೆಲ್ನಲ್ಲಿ ಸಿದ್ದರಾಮಯ್ಯ ಸದ್ಯ ವಾಸ್ತವ್ಯ ಹೂಡಿದ್ದಾರೆ.
ಹುಬ್ಬಳ್ಳಿ: ಉಪಚುನಾವಣೆ ಪ್ರಚಾರದ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ವರ್ಕೌಟ್ ಮಾಡಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ವೊಂದರ ಜಿಮ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವರ್ಕೌಟ್ ಮಾಡಿದ್ದಾರೆ. ಹುಬ್ಬಳ್ಳಿಯ ಏರ್ಪೋರ್ಟ್ ಮುಂಭಾಗದಲ್ಲಿರುವ ಹೋಟೆಲ್ನಲ್ಲಿ ಸದ್ಯ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ, ಹೋಟೆಲ್ ಆವರಣದಲ್ಲಿ ಬೆಳಿಗ್ಗೆ ವಾಕಿಂಗ್ ಮಾಡಿದ್ದಾರೆ. ನಂತರ ಜಿಮ್ನಲ್ಲಿ ದೇಹ ದಂಡಿಸಿದ್ದಾರೆ. ಸಿದ್ದರಾಮಯ್ಯಗೆ ಸ್ಥಳೀಯ ನಾಯಕರು ಕೂಡಾ ಸಾಥ್ ನೀಡಿದ್ದಾರೆ.
ಇಂದು ಸಿಂದಗಿ ಉಪಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. 9.45ಕ್ಕೆ ಹುಬ್ಬಳ್ಳಿಯಿಂದ ಸಿಂದಗಿ ಕ್ಷೇತ್ರದತ್ತ ಹೊರಟಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ನಡೆಸಲಿದ್ದಾರೆ.
ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಸರಣಿ ಸಭೆಗಳನ್ನು ನಡೆಸಿ ಕಾಂಗ್ರೆಸ್ ಕ್ಯಾಂಪೇನ್ ಮಾಡಲಿದೆ. ಸ್ಥಳೀಯ ಶಾಸಕರು, ಮುಖಂಡರು ಸಾಥ್ ನೀಡಲಿದ್ದಾರೆ. ಪಕ್ಷದ ಸಾಂಪ್ರದಾಯಿಕ ಮತಗಳನ್ನು ಬಿಜೆಪಿ ಹಾಗೂ ಜೆಡಿಎಸ್ಗೆ ಹೋಗದಂತೆ ನೋಡಿಕೊಳ್ಳಲು ಸಿದ್ದರಾಮಯ್ಯ ಸೂಚಿಸಿದ್ದಾರೆ. ಮುಖ್ಯವಾಗಿ ಎಸ್ಸಿ, ಎಸ್ಟಿ ಸಮುದಾಯದ 50,000 ಮತಗಳಿದ್ದು, ಅವುಗಳ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ
Video: ಕೇರಳ ಮಳೆಯ ಭೀಕರತೆ; ನೋಡನೋಡುತ್ತಿದ್ದಂತೆ ನದಿಗೆ ಕುಸಿದುಬಿತ್ತು ಇಡೀ ಮನೆ
ಕಲಬುರಗಿ: ಭೂಕಂಪನಕ್ಕೆ ತತ್ತರಿಸಿದ ಗ್ರಾಮಸ್ಥರು; ಎನ್ಜಿಆರ್ಐ ತಂಡದಿಂದ ಅಧ್ಯಯನ ಆರಂಭ
Published On - 10:38 am, Mon, 18 October 21